ಬೆಂಗಳೂರು: ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಗೂಡ್ಸ್ ಆಟೊದ ಚಕ್ರ ಮೈ ಮೇಲೆ ಹರಿದು ನಾಲ್ಕು ವರ್ಷದ ಬಾಲಕಿ ಭುವನಾ ಮೃತಪಟ್ಟಿದ್ದಾಳೆ.

‘ಮಾರ್ಚ್ 17ರಂದು ಈ ಅವಘಡ ಸಂಭವಿಸಿದೆ. ನಿರ್ಲಕ್ಷ್ಯ ವಹಿಸಿದ್ದ ಆರೋಪದಡಿ ಆಟೊ ಚಾಲಕ ಧನಂಜಯ್‌ನನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಅಡುಗೆ ಅನಿಲ ಸಿಲಿಂಡರ್ ಸಾಗಿಸುತ್ತಿದ್ದ ಆಟೊ ಚಾಲಕ, ಕಾಮಾಕ್ಷಿಪಾಳ್ಯ ಬಳಿಯ ಕಾವೇರಿಪುರಕ್ಕೆ ಬಂದಿದ್ದ. ರಸ್ತೆ ಪಕ್ಕದಲ್ಲಿ ಇಳಿಜಾರಿನಲ್ಲಿ ಆಟೊ ನಿಲ್ಲಿಸಿ, ಹ್ಯಾಂಡ್ ಬ್ರೇಕ್ ಹಾಕದೇ ಇಳಿದು ಹೋಗಿದ್ದ. ಆಟೊ ಸಮೀಪದಲ್ಲೇ ಎಳನೀರು ಅಂಗಡಿ ಇತ್ತು. ಬಾಲಕಿ ಭುವನಾ, ತಾಯಿ ಜೊತೆಯಲ್ಲಿ ಎಳನೀರು ಕುಡಿಯಲು ಬಂದಿದ್ದಳು.’

‘ಬಾಲಕಿ ಎಳನೀರು ಕುಡಿಯುತ್ತಿದ್ದ ಸಂದರ್ಭದಲ್ಲೇ, ಇಳಿಜಾರಿನಲ್ಲಿ ಆಟೊ ಮುಂದಕ್ಕೆ ಚಲಿಸಿ ಬಾಲಕಿಗೆ ಗುದ್ದಿ ಮೈ ಮೇಲೆ ಹರಿದಿತ್ತು. ತೀವ್ರ ಗಾಯಗೊಂಡಿದ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಬಾಲಕಿ ತೀರಿಕೊಂಡಿದೆ. ಅಪಘಾತದ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದನ್ನು ಪರಿಶೀಲಿಸಲಾಗುತ್ತಿದೆ’ ಎಂದೂ ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.