ಮಂಗಳವಾರ, ಅಕ್ಟೋಬರ್ 15, 2019
29 °C

ವಕೀಲರಿಗೂ ಆರೋಗ್ಯ ಕಾರ್ಡು: ಶ್ರೀರಾಮುಲು

Published:
Updated:

ಬೆಂಗಳೂರು: ‘ಆಯುಷ್ಮಾನ್‌ ಭಾರತ್–ಆರೋಗ್ಯ ಕರ್ನಾಟಕ ಸಂಯೋಜಿತ ಯೋಜನೆಯಡಿ ವಕೀಲರಿಗೂ ಆರೋಗ್ಯ ಕಾರ್ಡುಗಳನ್ನು ವಿತರಿಸಲಾಗು ವುದು’ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

ಸಿಟಿ ಸಿವಿಲ್‌ ಕೋರ್ಟ್‌ ವಕೀಲರ ಸಭಾಂಗಣದಲ್ಲಿ ಬೆಂಗಳೂರು ವಕೀಲರ ಸಂಘದ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ‘ಮಾನಸಿಕ ಸ್ವಸ್ಥ ದಿನಾಚರಣೆ’ಯಲ್ಲಿ ಮಾತನಾಡಿದ ಅವರು, ‘ಸರ್ಕಾರಿ ನೌಕರರಿಗೆ ನೀಡಿ ದಂತೆಯೇ ವಕೀಲರಿಗೂ ಆರೋಗ್ಯ ಕಾ‌ರ್ಡುಗಳನ್ನು ವಿತರಿಸಲಾಗುವುದು’ ಎಂದರು.

ಬೆಂಗಳೂರು ನಗರ ಜಿಲ್ಲೆಯ ಸೆಷನ್ಸ್ ಕೋರ್ಟ್ ಪ್ರಧಾನ ನ್ಯಾಯಾಧೀಶ ಶಿವಶಂಕರ ಬಿ. ಅಮರಣ್ಣವರ, ಗ್ರಾಮಾಂತರ ಜಿಲ್ಲೆಯ ಸೆಷನ್ಸ್ ಕೋರ್ಟ್‌ ಪ್ರಧಾನ ನ್ಯಾಯಾಧೀಶ ವಿ.ಶ್ರೀಶಾನಂದ, ಬೆಂಗಳೂರು ನಗರ ಜಿಲ್ಲೆ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯ ದರ್ಶಿ ಎ. ಸೋಮಶೇಖರ, ಗ್ರಾಮಾಂತರ ಜಿಲ್ಲಾ ಸದಸ್ಯ ಕಾರ್ಯದರ್ಶಿ ನಟೇಶ್‌, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ. ರಂಗನಾಥ್‌, ಪ್ರಧಾನ ಕಾರ್ಯದರ್ಶಿ ಎ.ಎನ್‌. ಗಂಗಾಧರಯ್ಯ, ಖಜಾಂಚಿ ಶಿವಮೂರ್ತಿ ಇದ್ದರು. ‌

ಮಾನಸಿಕ ತಜ್ಞ ಡಾ.ಜಗದೀಶ್ ಉಪನ್ಯಾಸ ನೀಡಿದರು.

Post Comments (+)