ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇಜಸ್ ಹಾರಾಟ ನಡೆಸಲು ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ: ಪಿ.ವಿ.ಸಿಂಧು

Last Updated 23 ಫೆಬ್ರುವರಿ 2019, 18:40 IST
ಅಕ್ಷರ ಗಾತ್ರ

ಬೆಂಗಳೂರು: ಸದಾ ರ‍್ಯಾಕೆಟ್‌ ಹಿಡಿದು ಅಂಕಣದಲ್ಲಿ ಚಿಗರೆಯಂತೆ ಜಿಗಿಯುತ್ತಾ ಶರವೇಗದ ಸರ್ವ್‌ಗಳನ್ನು ಸಿಡಿಸುವ ಬ್ಯಾಡ್ಮಿಂಟನ್‌ ತಾರೆ ಪಿ.ವಿ.ಸಿಂಧು ಅವರು ಶನಿವಾರ ದೇಸಿ ನಿರ್ಮಿತ ಲಘು ಯುದ್ಧವಿಮಾನ ತೇಜಸ್‌ ಬೆನ್ನೇರಿ ಸವಾರಿ ನಡೆಸಿದರು.

ಏರೋ ಇಂಡಿಯಾ 2019 ವೈಮಾನಿಕ ಪ್ರದರ್ಶನದಲ್ಲಿ ವೀಕ್ಷಕರತ್ತ ಕೈಬೀಸುತ್ತಾ ನಸುನಗೆ ಬೀರುತ್ತಾ ಕಾಕ್‌ಪಿಟ್‌ನಲ್ಲಿ ಅವರು ಆಸೀನರಾದರು. ಸುಮಾರು 25 ನಿಮಿಷ ಯಲಹಂಕ ವಾಯುನೆಲೆಯ ಬಾನಂಗಳದಲ್ಲಿ ವಿಹರಿಸುವ ಮೂಲಕ ಈ ಯುದ್ಧ ವಿಮಾನದಲ್ಲಿ ಹಾರಾಟ ಮೊದಲ ಮಹಿಳಾ ಕ್ರೀಡಾಪಟು ಎಂಬ ಗೌರವಕ್ಕೆ ಪಾತ್ರರಾದರು.

ವಿಮಾನವು ಭೂಮಿ ಸ್ಪರ್ಶಿಸುತ್ತಲೇ ಮತ್ತೆ ಪ್ರೇಕ್ಷಕರತ್ತ ಲಗುಬಗೆಯಿಂದ ನಡೆದುಬಂದ ಅವರು ತಮ್ಮ ಯುದ್ಧ ವಿಮಾನ ಹಾರಾಟದ ಅನುಭವ ಹಂಚಿಕೊಂಡರು.

‘ತೇಜಸ್ ನಿಜವಾದ ಹೀರೋ. ಇದರಲ್ಲಿ ಹಾರಾಟ ನಡೆಸುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ಈ ಅವಕಾಶ ಒದಗಿಸಿದ್ದಕ್ಕೆ ಡಿಆರ್‌ಡಿಒ ಹಾಗೂ ವಾಯುಪಡೆಗೆ ಆಭಾರಿಯಾಗಿದ್ದೇನೆ’ ಎಂದರು.

ಹಾರಾಟದಲ್ಲಿ ಅವರಿಗೆ ಸಾಥ್‌ ನೀಡಿದ ತೇಜಸ್ ವಿಮಾನದ ಪೈಲಟ್ ವಿಂಗ್ ಕಮಾಂಡರ್ ಸಿದ್ಧಾರ್ಥ್, ‘ನಾನು ಮೊದಲು ಸರಳ ಸ್ಟಂಟ್‌ಗಳನ್ನು ಪ್ರದರ್ಶಿಸಿದೆ. ಸಿಂಧು ಅವರು ಪರಿಸ್ಥಿತಿಗೆ ಬಲುಬೇಗ ಹೊಂದಿಕೊಂಡರು. ನಂತರ ಕ್ಲಿಷ್ಟಕರ ಸ್ಟಂಟ್ ನಡೆಸಿದೆ. ಅವರು
ವಿಚಲಿತಗೊಳ್ಳಲಿಲ್ಲ. ಬಳಕ ಐದು ನಿಮಿಷ ಅವರೇ ವಿಮಾನ ಹಾರಾಟ ನಡೆಸಿದರು. ಭೂಮಿಯ ಗುರುತ್ವಾಕರ್ಷಣೆಗಿಂತ ಐದು ಪಟ್ಟು ಹೆಚ್ಚು ವೇಗದಲ್ಲಿ ಸಾಗಿದರು' ಎಂದರು.

ಮಾನವಸಹಿತ ಬಾಹ್ಯಾಕಾಶಯಾನಕ್ಕೆ ಮಹಿಳೆಯರನ್ನು ಆಯ್ಕೆ ಮಾಡುವ ಕುರಿತ ಪ್ರಶ್ನೆಗೆ, ‘ಈ ಬಗ್ಗೆ ಸಂಬಂಧ
ಪಟ್ಟವರು ನಿರ್ಧಾರ ತೆಗೆದುಕೊಳ್ಳುತ್ತಾರೆ’ ಎಂದು ಪ್ರತಿಕ್ರಿಯಿಸಿದರು.

ವಿಮಾನ ಹೊರಡುತ್ತಲೇ ಸಿಂಧು ಪ್ರೇಕ್ಷಕರತ್ತ ಕೈ ಬೀಸಿದರು.ಸುಮಾರು 25 ನಿಮಿಷ ಆಗಸದಲ್ಲಿದ್ದರು.

ನಿಜವಾದ ಹೀರೋ ತೇಜಸ್

‘ತೇಜಸ್ ನಿಜವಾದ ಹೀರೋ. ಇದನ್ನುಹಾರಾಟ ನಡೆಸಲು ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ’ ಎಂದು ಸಿಂಧು ಎಂದರು. ಈ ವಿಮಾನದಲ್ಲಿ ಹಾರಾಟ ಮೊದಲ ಮಹಿಳಾ ಕ್ರೀಡಾಪಟು ಎಂಬ ಗೌರವಕ್ಕೆ ಅವರು ಪಾತ್ರರಾದರು. ‘ಈ ಗೌರವ ಒದಗಿಸಿದ್ದಕ್ಕೆ ಡಿಆರ್‌ಡಿಒಗೆ ಆಭಾರಿಯಾಗಿದ್ದೇನೆ’ ಎಂದರು.

ತೇಜಸ್ ವಿಮಾನದ ಪೈಲಟ್ ವಿಂಗ್ ಕಮಾಂಡರ್ ಸಿದ್ಧಾರ್ಥ್, 'ನಾನು ಮೊದಲು ಸರಳ ಸ್ಟಂಟ್ (ಕಸರತ್ತು)ಗಳನ್ನು ಪ್ರದರ್ಶಿಸಿದೆ. ಸಿಂಧು ಅವರು ಬಲುಬೇಗ ಹೊಂದಿಕೊಂಡರು. ಬಳಿಕ ಕ್ಲಿಷ್ಟಕರ ಸ್ಟಂಟ್ ನಡೆಸಿದೆ. ಅವರು ವಿಚಲಿತಗೊಳ್ಳಲಿಲ್ಲ. ಅವರೂ 5 ನಿಮಿಷ ವಿಮಾನ ಹಾರಾಟ ನದಡೆಸಿದರು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT