ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘2ಎ’ ಮೀಸಲಿಗೆ ಆಗ್ರಹಿಸಿ ಬಲಿಜರ ಸತ್ಯಾಗ್ರಹ

ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಲು ಆಗ್ರಹ l ಸರ್ಕಾರದ ವಿಳಂಬ ಧೋರಣೆಗೆ ಖಂಡನೆ
Last Updated 5 ಡಿಸೆಂಬರ್ 2022, 21:45 IST
ಅಕ್ಷರ ಗಾತ್ರ

ಬೆಂಗಳೂರು: ಪ್ರವರ್ಗ ‘2ಎ’ ಮೀಸಲು ಸೌಲಭ್ಯಕ್ಕೆ ಆಗ್ರಹಿಸಿ ರಾಜ್ಯ ಸಮಗ್ರ ಬಲಿಜ ವೇದಿಕೆ ನೇತೃತ್ವದಲ್ಲಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬಲಿಜ ಸಮುದಾಯದವರು ಸೋಮವಾರ ಉಪವಾಸ ಸತ್ಯಾಗ್ರಹ ನಡೆಸಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪ್ರತಿಭಟನಕಾರರು ಮೀಸಲಾತಿಗೆ ಆಗ್ರಹಿಸಿದರು. ಸರ್ಕಾರದ ವಿಳಂಬ ಧೋರಣೆ ಖಂಡಿಸಿದರು.

‘ನಮ್ಮಿಂದ ಕಸಿದುಕೊಂಡಿರುವ ‘ಪ್ರವರ್ಗ 2ಎ’ ಮೀಸಲಾತಿ
ಸೌಲಭ್ಯವನ್ನು ಮರು ಜಾರಿಗೊಳಿಸ ಬೇಕು. ಸರ್ಕಾರವು ಬಹುತೇಕ ಸಮು ದಾಯಗಳಿಗೆ ಪ್ರತ್ಯೇಕ ನಿಗಮ ಸ್ಥಾಪಿಸಿದೆ. ಅದೇ ಮಾದರಿಯಲ್ಲಿ ‘ಕರ್ನಾಟಕ ಬಲಿಜ ಸಮುದಾಯ ಅಭಿವೃದ್ಧಿ ನಿಗಮ’ ಸ್ಥಾಪಿಸಬೇಕು. ಬೇಡಿಕೆ ಈಡೇರದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ’
ಎಂದು ವೇದಿಕೆ ಅಧ್ಯಕ್ಷ
ಎನ್‌.ಪಿ. ಮುನಿಕೃಷ್ಣ ಎಚ್ಚರಿಸಿದರು.

‘ವೆಂಕಟಸ್ವಾಮಿ, ಚಿನ್ನಪ್ಪ
ರೆಡ್ಡಿ ಹಾಗೂ ಎಲ್‌.ಜಿ. ಹಾವನೂರು ಆಯೋಗದ ವರದಿಯಂತೆ ‘2ಎ’ ಮೀಸಲಾತಿ ಕಲ್ಪಿಸಬೇಕು. ಹಿಂದುಳಿದ ವರ್ಗಗಳ ಆಯೋಗವು ಸಮುದಾಯದ ಸ್ಥಿತಿಗತಿ ಅಧ್ಯಯನ ನಡೆಸಿದೆ. ಆದರೆ, ವರದಿ ಇನ್ನೂ ಸರ್ಕಾರಕ್ಕೆ ಸಲ್ಲಿಕೆಯಾ
ಗಿಲ್ಲ.ಹಿಂದುಳಿದ ವರ್ಗಗಳ ಆಯೋಗದ ವಿಳಂಬ ಧೋರಣೆಯಿಂದಾಗಿ ಬಲಿಜ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಲಭಿಸುತ್ತಿಲ್ಲ’ ಎಂದು ಆಕ್ರೋಶ ಹೊರ ಹಾಕಿದರು.

‘ಬಲಿಜ ಸಮುದಾಯದ ಜನರು ಕುಂಕುಮ, ಅರಿಶಿನ, ಬಳೆ, ಹೂವು ಹಾಗೂ ಎಲೆ, ಅಡಿಕೆಯನ್ನು ರಸ್ತೆಯ ಬದಿ ಹಾಗೂ ದೇವಸ್ಥಾನಗಳ ಎದುರು ಮಾರಾಟ ನಡೆಸಿ ಬದುಕು ಸಾಗಿಸುತ್ತಿದ್ದಾರೆ. ಜನರ ಬದುಕು ಕಷ್ಟದಲ್ಲಿದ್ದು, ಮೀಸಲಾತಿ ಸೌಲಭ್ಯ ಕಲ್ಪಿಸಬೇಕು’ ಎಂದು ಪ್ರಧಾನ ಕಾರ್ಯದರ್ಶಿ
ಎಸ್‌.ರಮೇಶ್ ಆಗ್ರಹಿಸಿದರು.

ಬಲಿಜ ಸಮುದಾಯ ಹಾಗೂ ಅದರ ಉಪ ಪಂಗಡಗಳಾದ ಬಲಿಜಿಗ, ನಾಯ್ಡು, ತೆಲುಗು ಬಲಿಜ, ಶೆಟ್ಟಿ ಬಲಿಜ, ಕಸ್ಟನ್‌, ಮುನ್ನೂರು ಕಾಪು, ವಳೆ ಬಲಿಜಿಗ, ರೆಡ್ಡಿ ಬಲಿಜಿಗರು ಶೋಷಿತರಾಗಿದ್ದು ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಅತಿ ಹಿಂದುಳಿದಿದೆ. ಅವರಿಗೆ ಸರ್ಕಾರದ ಸವಲತ್ತು ಲಭಿಸಬೇಕು ಎಂದು ರಮೇಶ್
ಅವರು ಒತ್ತಾಯಿಸಿದರು.

‘ನ್ಯಾಯಾಲಯದ ಆದೇಶವಿದ್ದರೂ ಸರ್ಕಾರ ಪರಿಗಣಿಸುತ್ತಿಲ್ಲ. ಮತ್ತೊಮ್ಮೆ ಮನವಿ ಸಲ್ಲಿಸೋಣ. ಆದರೂ, ಬೇಡಿಕೆ ಈಡೇರದಿದ್ದರೆ ಕಾನೂನಾತ್ಮಕ ಹೋರಾಟ ನಡೆಸುವುದು ಒಳಿತು’ ಎಂದು ಕಾಂಗ್ರೆಸ್‌ ವಕ್ತಾರ ರಮೇಶ್‌ ಬಾಬು ಹೇಳಿದರು.

ಸ್ಥಳಕ್ಕೆ ಬಂದಿದ್ದ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಪ್ರದೀಪ್‌ ಅವರಿಗೆ ಮನವಿ ಸಲ್ಲಿಸಿದರು.

ಸಮಗ್ರ ಬಲಿಜ ವೇದಿಕೆಯ ಗೌರವಾಧ್ಯಕ್ಷ ಡಾ.ಎನ್‌.ಕೃಷ್ಣಪ್ಪ, ಸಹ ಖಜಾಂಚಿ ಆರ್‌.ಕೆ.ನಾಗರಾಜ್‌, ಸಂಚಾಲಕ ಎಂ. ಗೌತಮ್‌, ಉಪಾಧ್ಯಕ್ಷ ಪಿ.ಜಿ. ಜಯಕರ್‌, ನಿರ್ದೇಶಕ
ಎಂ.ಎಂ.ಮಂಜುನಾಥ್‌, ನಿರ್ದೇಶಕ ಕೆ.ಪಿ.ಶಿವಪ್ಪ, ಮಾಜಿ ಶಾಸಕ ಟಿ.ಎಸ್‌.ಪ್ರಕಾಶ್‌, ಬಲಿಜ ವಕೀಲರ ಸಂಘದ ಅಧ್ಯಕ್ಷ ಪ್ರಕಾಶ ರಾಮಯ್ಯ, ಪ್ರಧಾನ ಕಾರ್ಯದರ್ಶಿ ಆನಂದ ಬಾಬು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT