ಬುಧವಾರ, ನವೆಂಬರ್ 20, 2019
27 °C

ಇ–ಸಿಗರೇಟ್‌ ನಿಷೇಧಕ್ಕೆ ಸಚಿವರಿಗೆ ಮನವಿ

Published:
Updated:

ಬೆಂಗಳೂರು: ಇ–ಸಿಗರೇಟ್‌ ಮತ್ತು ವೇಪಿಂಗ್‌ ಉತ್ಪನ್ನಗಳನ್ನು ದೇಶದಲ್ಲಿ ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಕರ್ನಾಟಕ ವರ್ಜೀನಿಯಾ ತಂಬಾಕು ಬೆಳೆಗಾರರ ಸಂಘ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಮನವಿ ಮಾಡಿದೆ.

ಈ ಕುರಿತು ಸಚಿವರಿಗೆ ಪತ್ರ ಬರೆದಿರುವ ಸಂಘವು, ‘ಭಾರತದಲ್ಲಿ ಇ–ಸಿಗರೇಟ್‌ ವ್ಯಾಪಾರ ಬೆಳೆಯಲು ಪ್ರೋತ್ಸಾಹ ನೀಡುವುದು ದೇಶದ ತಂಬಾಕು ಬೆಳೆಗಾರರ ಮೇಲೆ ಗದಾಪ್ರಹಾರ ಮಾಡಿದಂತಾಗುತ್ತದೆ’ ಎಂದಿದೆ.

‘ಈ ಉತ್ಪನ್ನಗಳನ್ನು ನಿಷೇಧಿಸಿದರೆ ರೈತರಿಗೆ ನಷ್ಟವಾಗುತ್ತದೆ ಎಂದು ವ್ಯವಸ್ಥಿತವಾಗಿ ಅಪಪ್ರಚಾರ ಮಾಡಲಾಗುತ್ತದೆ. ಇದು ಸಂಪೂರ್ಣ ತಪ್ಪು. ಬಹುರಾಷ್ಟ್ರೀಯ ಕಂಪನಿಗಳ ಲಾಭಕ್ಕಾಗಿ ಕೆಲಸ ಮಾಡುತ್ತಿರುವ ಕೆಲವೇ ಜನರ ಗುಂಪಿನ ಮನವಿ ಸ್ವೀಕರಿಸಬಾರದು’ ಎಂದೂ ಸಂಘವು ಮನವಿ ಮಾಡಿದೆ. 

ಪ್ರತಿಕ್ರಿಯಿಸಿ (+)