ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಮಹಿಳೆಗೆ ಕಾಲರಾ ದೃಢಪಟ್ಟಿಲ್ಲ: ಆರೋಗ್ಯ ಇಲಾಖೆ ಆಯುಕ್ತ ರಂದೀಪ್‌

Published 5 ಏಪ್ರಿಲ್ 2024, 19:48 IST
Last Updated 5 ಏಪ್ರಿಲ್ 2024, 19:48 IST
ಅಕ್ಷರ ಗಾತ್ರ

ಬೆಂಗಳೂರು: ಮಲ್ಲೇಶ್ವರದ 27 ವರ್ಷ ವಯಸ್ಸಿನ ಮಹಿಳೆಯೊಬ್ಬರು ಕಾಲರಾ ಲಕ್ಷಣಗಳೊಂದಿಗೆ ಖಾಸಗಿ ಆಸ್ಪತ್ರೆಯಲ್ಲಿ ಮಾರ್ಚ್‌ 30ರಂದು ದಾಖಲಾಗಿದ್ದರು. ವೈದ್ಯಕೀಯ ವರದಿ ಬಂದಿದ್ದು ಕಾಲರಾ ಇಲ್ಲದಿರುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ರಂದೀಪ್‌ ಅವರು ತಿಳಿಸಿದರು.

‘ಅದೇ ಪಿ.ಜಿಯಲ್ಲಿ 32 ಮಹಿಳೆ ಯರು ವಾಸ್ತವ್ಯ ಮಾಡಿದ್ದು ಯಾರಿಗೂ ತೊಂದರೆ ಕಾಣಿಸಿಕೊಂಡಿಲ್ಲ’ ಎಂದು ಶುಕ್ರವಾರ ಮಾಹಿತಿ ನೀಡಿದರು.

‘ಖಾಸಗಿ ಆಸ್ಪತ್ರೆಯ ವೈದ್ಯರ ಪ್ರಕಾರ, ಮಹಿಳೆಯಲ್ಲಿ ಕಾಲರಾ ಲಕ್ಷಣಗಳು ಕಂಡು ಬಂದಿವೆ. ಈ ಕುರಿತು ಪ್ರಾಥಮಿಕ ಮಾಹಿತಿಯನ್ನು ಹತ್ತಿರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಿಳಿಸಿರುತ್ತಾರೆ. ಆರಂಭಿಕ ಹಂತದ ಪರೀಕ್ಷೆಗಳಲ್ಲಿ ಕಾಲರಾ ಇರುವ ಬಗ್ಗೆ ಪಾಸಿಟಿವ್ ವರದಿ ಬಂದಿದ್ದು, ನಂತರ ಪ್ರಯೋಗಾಲಯದ ಪರೀಕ್ಷೆಯಲ್ಲಿ (ಮಲ ಮಾದರಿ ಪರೀಕ್ಷೆ) ನೆಗೆಟಿವ್ ವರದಿ ಬಂದಿರುತ್ತದೆ. ಮಹಿಳೆಯು ಇತ್ತೀಚಿನ ದಿನಗಳಲ್ಲಿ ಯಾವುದೇ ರೀತಿಯ ಪ್ರಯಾಣ, ಜನ ಪೀಡಿತ ಪ್ರದೇಶಗಳಿಗೆ ಭೇಟಿ ಹಾಗೂ ಹೊರಗಿನ ಆಹಾರ ಸೇವನೆ ಮಾಡಿರುವುದಿಲ್ಲ’ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ಮಹಿಳೆಯು ವಾಸವಾಗಿರುವ ಸ್ಥಳದಿಂದ ಸುತ್ತಮುತ್ತಲಿನ 165 ಮನೆಗಳಿಗೆ ಭೇಟಿ ನೀಡಿದ್ದ ಪಾಲಿಕೆಯ ಆರೋಗ್ಯ ತಂಡ ಸಮೀಕ್ಷೆ ನಡೆಸಿ, ಸಾರ್ವಜನಿಕರಿಗೆ ರೋಗ ಹರಡುವ ವಿಧಾನಗಳು, ನೈರ್ಮಲ್ಯದ ಪ್ರಾಮುಖ್ಯ, ಶುದ್ಧ ನೀರಿನ ಬಳಕೆ, ಕೈಗಳನ್ನು ಸ್ವಚ್ಛ

ಗೊಳಿಸುವ ಬಗ್ಗೆ ಅರಿವು ಮೂಡಿಸಿ ಆರೋಗ್ಯ ಶಿಕ್ಷಣ ನೀಡಿದೆ. ಇಲ್ಲಿನ ನಿವಾಸಿಗಳಲ್ಲಿ ಕಾಲರಾರೋಗದ ಲಕ್ಷಣಗಳು ವರದಿ ಯಾಗಿಲ್ಲ.

10 ನೀರಿನ ಮಾದರಿಗಳನ್ನು ಸೋಂಕು ಶಂಕಿತ ಪ್ರದೇಶದಿಂದ ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲ ಯಕ್ಕೆ ಕಳುಹಿಸಲಾಗಿದೆ. ರೋಗ ಪ್ರಸರಣ ತಡೆಗಟ್ಟುವುದಕ್ಕಾಗಿ ವಿಧಾನಸಭಾ ಕ್ಷೇತ್ರವಾರು ಕ್ಷಿಪ್ರ ಪ್ರತಿಕ್ರಿಯೆ ತಂಡವನ್ನು ರಚಿಸಲು ಸಂಬಂಧಪಟ್ಟ ಎಲ್ಲ

ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯ ಆರೋಗ್ಯಾಧಿಕಾರಿ ಡಾ. ಸೈಯದ್ ಸಿರಾಜುದ್ದಿನ್ ಮದನಿ ತಿಳಿಸಿದ್ದಾರೆ.

‘ಪಾಲಿಕೆಯ ವ್ಯಾಪ್ತಿಯ ಎಲ್ಲ ಖಾಸಗಿ ಆಸ್ಪತ್ರೆ, ಖಾಸಗಿ ಲ್ಯಾಬ್‌ಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆ, ಜನರಲ್ ಆಸ್ಪತ್ರೆ, ವೈದ್ಯಕೀಯ ಶಿಕ್ಷಣ ಅಡಿಯಲ್ಲಿ ಬರುವ ಆಸ್ಪತ್ರೆಗಳು ಶಂಕಿತ ಪ್ರಕರಣಗಳು ವರದಿಯಾದಲ್ಲಿ ಸರ್ಕಾರ ನಿಗದಿಪಡಿಸಿರುವ ಐಎಚ್ಐಪಿ ತಂತ್ರಾಶದಲ್ಲಿ ಕಡ್ಡಾಯವಾಗಿ ವರದಿ ಮಾಡುವಂತೆ ಸೂಚಿಸಲಾಗಿದೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರೊಲ್ಕರ್‌ ವಿಕಾಸ್ ಕಿಶೋರ್ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT