ಬೆಂಗಳೂರು-ದೊಡ್ಡಬಳ್ಳಾಪುರ ರಸ್ತೆಯ ಬೃಹತ್ ಮೇಲ್ಸೆತುವೆ ಗೋಡೆ ಕುಸಿತ

ಶುಕ್ರವಾರ, ಜೂಲೈ 19, 2019
24 °C
ಕಳಪೆ ಕಾಮಗಾರಿಯೇ ಸೇತುವೆಯ ಗೋಡೆ ಕುಸಿತಕ್ಕೆ ಕಾರಣ

ಬೆಂಗಳೂರು-ದೊಡ್ಡಬಳ್ಳಾಪುರ ರಸ್ತೆಯ ಬೃಹತ್ ಮೇಲ್ಸೆತುವೆ ಗೋಡೆ ಕುಸಿತ

Published:
Updated:

ದೊಡ್ಡಬಳ್ಳಾಪುರ: ಬೆಂಗಳೂರು-ದೊಡ್ಡಬಳ್ಳಾಪುರ ರಸ್ತೆಯ ಬಾಶೆಟ್ಟಿಹಳ್ಳಿ ನಿರ್ಮಿಸಲಾಗಿರುವ ಬೃಹತ್ ಮೇಲ್ಸೆತುವೆ ಗೋಡೆ ಕುಸಿದಿದೆ.

ಸೇತುವೆ ಮೇಲೆ ವಾಹನ ಸಂಚಾರ ಬಂದ್ ಮಾಡಲಾಗಿದ್ದು ಸೇತುವೆ ಒಂದು ಬದಿಯಲ್ಲಿ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೃಹತ್ ಲಾರಿಗಳಿಗೆ ಪರ್ಯಾಯ ಮಾರ್ಗವನ್ನು ಕಲ್ಪಿಸಲಾಗಿದೆ.

ಕಳಪೆ ಕಾಮಗಾರಿಯೇ ಸೇತುವೆಯ ಗೋಡೆ ಕುಸಿತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಸೇತುವೆಯ ಗೋಡೆ ಕುಸಿದಿರುವ ಸಮೀಪದಲ್ಲೇ ರೈಲ್ವೆ ಹಳಿ ಸಹ ಇರುವುದು ಅಧಿಕಾರಿಗಳಲ್ಲಿ ಆತಂಕವನ್ನು ಮೂಡಿಸಿದೆ.

ಸೇತುವೆ ಮೇಲೆ ವಾಹನಗಳು ಹೋಗದಂತೆ ನಿಯಂತ್ರಿಸಲು ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ

ಬರಹ ಇಷ್ಟವಾಯಿತೆ?

 • 8

  Happy
 • 3

  Amused
 • 1

  Sad
 • 3

  Frustrated
 • 18

  Angry

Comments:

0 comments

Write the first review for this !