ಗುರುವಾರ , ನವೆಂಬರ್ 21, 2019
20 °C

ಬೆಂಗಳೂರು ಮೇಯರ್‌ ಚುನಾವಣೆಗೆ ಮುಹೂರ್ತ ಫಿಕ್ಸ್‌ : 27ರಂದು ಮತದಾನ

Published:
Updated:

ಬೆಂಗಳೂರು: ಮೇಯರ್‌ ಗಂಗಾಂಬಿಕೆ ಅವರ ಅಧಿಕಾರದ ಅವಧಿ ಮುಂಬರುವ ಸೆ. 28ಕ್ಕೆ ಕೊನೆಗೊಳ್ಳಲಿದ್ದು, ಇದೇ 27ಕ್ಕೆ ಚುನಾವಣೆ ನಡೆಯಲಿದೆ. ಈ ಸಂಬಂಧ ಶುಕ್ರವಾರ ಸಂಜೆ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ಬೆಂಗಳೂರು ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತ ತಿಳಿಸಿದರು.

ಇದನ್ನೂ ಓದಿ: ಮೇಯರ್‌ ಚುನಾವಣೆ: ಬಿಜೆಪಿಯಲ್ಲಿ ಪೈಪೋಟಿ

ಕಳೆದ ನಾಲ್ಕು ವರ್ಷಗಳಿಂದ ಪಾಲಿಕೆಯಲ್ಲಿ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಕೂಟ ಅಧಿಕಾರದಲ್ಲಿದೆ. ಕಾಂಗ್ರೆಸ್‌ನ ನಾಲ್ವರು ಹಾಗೂ ಜೆಡಿಎಸ್‌ನ ಒಬ್ಬರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಮೈತ್ರಿಕೂಟದ ಸಂಖ್ಯಾಬಲ ಕುಸಿದಿದೆ. ಜತೆಗೆ, ಅನರ್ಹ ಶಾಸಕರ 20ಕ್ಕೂ ಅಧಿಕ ಬೆಂಬಲಿಗ ಸದಸ್ಯರ ನಿಲುವು ನಿಗೂಢವಾಗಿದೆ. 

 

ಪ್ರತಿಕ್ರಿಯಿಸಿ (+)