ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ವಿವಿಯಿಂದ ಫಿಲ್ಮ್‌ಮೇಕಿಂಗ್‌ ಎಂಎಸ್ಸಿ

ಸರ್ಕಾರಿ ವಿಶ್ವವಿದ್ಯಾಲಯಗಳ ಪೈಕಿ ಇದೇ ಮೊದಲ ಪ್ರಯತ್ನ
Last Updated 25 ಜುಲೈ 2019, 19:48 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯುನ್ಮಾನ ಮಾಧ್ಯಮ ವಿಭಾಗದ ವತಿಯಿಂದ ಈ ಶೈಕ್ಷಣಿಕ ವರ್ಷದಿಂದ ಎಂಎಸ್ಸಿ ಫಿಲ್ಮ್‌ಮೇಕಿಂಗ್‌ ಮತ್ತು ಎಂಎಸ್ಸಿ ಗ್ರಾಫಿಕ್‌ ಆ್ಯಂಡ್‌ ಅನಿಮೇಷನ್‌ ಕೋರ್ಸ್‌ಗಳು ಆರಂಭವಾಗಲಿವೆ.

ರಾಜ್ಯದಸರ್ಕಾರಿ ವಿಶ್ವವಿದ್ಯಾಲಯಗಳ ಪೈಕಿ ಇದೇ ಪ್ರಥಮ ಬಾರಿಗೆ ಇಂತಹ ಕೋರ್ಸ್‌ ಆರಂಭವಾಗಲಿದ್ದು, ಚಲನಚಿತ್ರ ಕ್ಷೇತ್ರದಲ್ಲಿ ಬಹು ಬೇಡಿಕೆಯನ್ನು ಈ ಮೂಲಕ ಪೂರೈಸಿಕೊಡಲಿದೆ.

ಭಾರಿ ಬೇಡಿಕೆ ಇರುವ ಕಾರಣ ಕೆಲವು ಸಂಸ್ಥೆಗಳು ಭಾರಿ ಶುಲ್ಕ ಪಡೆದು ಈ ವಿಷಯದಲ್ಲಿ ಡಿಪ್ಲೊಮಾ, ಸರ್ಟಿಫಿಕೇಟ್ ಕೋರ್ಸ್‌ಗಳನ್ನು ನೀಡುತ್ತಿವೆ.ಅಭ್ಯರ್ಥಿಗಳಿಗೆ ಭಾರಿ ಹಣಕಾಸಿನ ಹೊರೆ ಬೀಳುತ್ತಿತ್ತು. ವಿಶ್ವವಿದ್ಯಾಲಯ ವರ್ಷಕ್ಕೆ ಕೇವಲ ₹ 28 ಸಾವಿರ ಶುಲ್ಕದೊಂದಿಗೆ ಈ ಕೋರ್ಸ್‌ ಒದಗಿಸಲಿದೆ.

ಕೋರ್ಸ್‌ಗೆ ಅಗತ್ಯವಾದ ಕ್ಯಾಮೆರಾ, ಎಡಿಟಿಂಗ್ ಪರಿಕರಗಳ ಸಹಿತ₹1.50 ಕೋಟಿಗೂ ಹೆಚ್ಚು ವೆಚ್ಚದ ಪರಿಕರಗಳು ವಿಶ್ವವಿದ್ಯಾಲಯದಲ್ಲಿವೆ. ಇವುಗಳನ್ನು ಸಮರ್ಥವಾಗಿ ಬಳಸಿಕೊಂಡು ಪರಿಣಾಮಕಾರಿಯಾಗಿ ಈ ಸ್ನಾತಕೋತ್ತರ ಕೋರ್ಸ್‌ ಒದಗಿಸುವ ವಿಶ್ವಾಸ ಇದೆ ಎಂದು ವಿಭಾಗದ ಸಮನ್ವಯ ಅಧಿಕಾರಿ ಡಾ.ವಾಹಿನಿಅರವಿಂದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT