ಶನಿವಾರ, ಮಾರ್ಚ್ 25, 2023
22 °C
ಸಚಿವ ಸಂಪುಟ ಸಭೆ ಒಪ್ಪಿಗೆ

ಬಿಬಿಎಂಪಿ: ಶುಲ್ಕ ಸಂಗ್ರಹಕ್ಕೆ ಕಾನೂನು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ನಕ್ಷೆ ಮಂಜೂ ರಾತಿ, ಸ್ವಾಧೀನ ಪತ್ರ ಮತ್ತು ಆರಂಭಿಕ ಪ್ರಮಾಣ ಪತ್ರಕ್ಕೆ ಶುಲ್ಕ ಪಡೆಯುವ ಸಂಬಂಧ ಪ್ರತ್ಯೇಕ ಕಾನೂನು ರಚಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಬಿಬಿಎಂಪಿಯ ಬೈಲಾದಲ್ಲಿ ಶುಲ್ಕ ಪಡೆಯುವುದಕ್ಕೆ ಅವಕಾಶ ಕಲ್ಪಿಸಿದೆ. ಆದರೆ, ಸರ್ಕಾರ ಈವರೆಗೂ ಇದಕ್ಕೆ ಪೂರಕವಾಗಿ ಕಾನೂನು ರಚಿಸಿರಲಿಲ್ಲ. ಸೂಕ್ತ ಕಾನೂನು ರೂಪಿಸಲು ಹೈಕೋರ್ಟ್‌ ಸೂಚಿಸಿತ್ತು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧು ಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾನೂನು ರಚಿಸದೇ ಸುಮಾರು ₹2,000 ಕೋಟಿ ಸಂಗ್ರಹಿಸಿದ್ದು, ಇದನ್ನು ವಾಪಸ್‌ ಮಾಡಬೇಕು ಎಂದು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು. ಇಷ್ಟು ದೊಡ್ಡ ಮೊತ್ತ ವಾಪಸ್‌ ಮಾಡುವುದನ್ನು ತಡೆಯಲು ಕಾನೂನು ರೂಪಿಸಲು ತೀರ್ಮಾನಿಸಲಾಗಿದೆ ಎಂದರು.

ಇಷ್ಟು ವರ್ಷಗಳಾದರೂ ಯಾವ ಕಾರಣಕ್ಕೆ ಕಾನೂನು ರೂಪಿಸಿಲ್ಲ ಎಂಬುದು ಗೊತ್ತಿಲ್ಲ. ಇದರಲ್ಲಿ ಅಧಿಕಾರಿ ಗಳ ಲೋಪವಿದೆ ಎಂದು ಹೇಳಲಾರೆ ಎಂದು ಮಾಧುಸ್ವಾಮಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಶೇ 50 ಬಡ್ಡಿ ಮನ್ನಾ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಾಗರಿಕ ಸೌಲಭ್ಯ ನಿವೇಶನಗಳ ಗುತ್ತಿಗೆ ಮೊತ್ತವನ್ನು ಪಾವತಿಸದೇ ಬಾಕಿ ಉಳಿಸಿ ಕೊಂಡಿರುವ ವಿವಿಧ ಸಂಘ ಸಂಸ್ಥೆಗಳು ಸಂಪೂರ್ಣ ಬಾಕಿ ಮೊತ್ತವನ್ನು ಪಾವತಿ ಸಲು ಮುಂದೆ ಬಂದಲ್ಲಿ, ಅಂತಹ ಸಂಸ್ಥೆಗಳಿಗೆ ಬಡ್ಡಿ ಮೊತ್ತದ ಶೇ 50ರಷ್ಟು ಮನ್ನಾ ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಯಿತು.

ದೇವಸ್ಥಾನ, ಶಿಕ್ಷಣ ಸಂಸ್ಥೆ, ಅನಾಥಾ ಶ್ಮಗಳಿಗೆ ಮಾತ್ರ ಈ ಬಡ್ಡಿ ಮನ್ನಾ ಅನ್ವಯವಾಗುತ್ತದೆ ಎಂದೂ ಅವರು ಹೇಳಿದರು.

l ಬೆಂಗಳೂರು ದಕ್ಷಿಣ ತಾಲ್ಲೂಕಿನ ಆಗರ ಗ್ರಾಮದ ಸರ್ವೆ ಸಂಖ್ಯೆ 28 ರಲ್ಲಿ 0–21 ಗುಂಟೆ ಖರಾಬು ಜಮೀನನ್ನು ಶ್ರೀಸ್ವಾನಂದಾಶ್ರಮ ಬಾಲ ಗಣಪತಿ ಪ್ರತಿಷ್ಠಾನಕ್ಕೆ ಮಂಜೂರು ಮಾಡಲು ತೀರ್ಮಾನಿಸಲಾಯಿತು.

l ಬೆಂಗಳೂರು ನಗರ ಜಿಲ್ಲೆಯ ವಿವಿಧ ಗ್ರಾಮಗಳ ವಿವಿಧ ಸರ್ವೆ ಸಂಖ್ಯೆಗಳಲ್ಲಿ ಒಟ್ಟು 69.07 ಎಕರೆ ಸರ್ಕಾರಿ ಗೋಮಾಳ ಮತ್ತು ಸರ್ಕಾರಿ ಖರಾಬು ಜಮೀನುಗಳನ್ನು ಬೆಂಗಳೂರು ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಯನ್ನು ಅನುಷ್ಠಾನಗೊಳಿ ಸಲು ರಾಜೀವ್‌ಗಾಂಧಿ ವಸತಿ
ನಿಗಮಕ್ಕೆ ಮಂಜೂರು ಮಾಡಲಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.