ಒಟಿಎಸ್‌ಗೆ ರಾಜ್ಯಪಾಲರ ಸಮ್ಮತಿ
ಒಂದು ಬಾರಿ ಪರಿಹಾರ ಯೋಜನೆಯಡಿ (ಒಟಿಎಸ್) ಆಸ್ತಿ ತೆರಿಗೆಯ ಬಡ್ಡಿ ಮನ್ನಾ ಮಾಡಿರುವ ಕಾಯ್ದೆಗೆ ರಾಜ್ಯಪಾಲರು ಜನವರಿ 10ರಂದು ಸಮ್ಮತಿಸೂಚಿಸಿ ಅಧಿಸೂಚನೆ ಹೊರಡಿಸಿದ್ದಾರೆ. ನವೆಂಬರ್ 30ರವರೆಗೆ ಒಟಿಎಸ್ ಯೋಜನೆ ಜಾರಿಯಲ್ಲಿದ್ದು, ಬಡ್ಡಿ ಹಾಗೂ ದಂಡದಿಂದ ರಿಯಾಯಿತಿ ನೀಡಲಾಗಿತ್ತು. ವರ್ಷವೊಂದಕ್ಕೆ ₹100 ಮಾತ್ರ ವಿಧಿಸಲಾಗಿತ್ತು.