ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BBMP ಆಸ್ತಿ ತೆರಿಗೆ ಸಂಗ್ರಹದಲ್ಲಿ ದಾಖಲೆ

Published 2 ಏಪ್ರಿಲ್ 2024, 19:21 IST
Last Updated 2 ಏಪ್ರಿಲ್ 2024, 19:21 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ 2023-24ನೇ ಸಾಲಿನಲ್ಲಿ ದಾಖಲೆ ಮೊತ್ತದ ಆಸ್ತಿ ತೆರಿಗೆ ಸಂಗ್ರಹಿಸಿದ್ದರೂ, ಹಿಂದಿನ ವರ್ಷಗಳಂತೆಯೇ ಗುರಿ ತಲುಪುವಲ್ಲಿ ವಿಫಲವಾಗಿದೆ.

2022–23ನೇ ಸಾಲಿಗಿಂತ ₹560 ಕೋಟಿ ಹೆಚ್ಚು ಸಂಗ್ರಹವಾಗಿದ್ದರೂ, ₹4,558 ಕೋಟಿಯ ಗುರಿ ತಲುಪುವಲ್ಲಿ ₹658 ಕೋಟಿಯಷ್ಟು ಹಿಂದೆ ಉಳಿದಿದೆ. ಮಹದೇವಪುರ ವಲಯ ₹1,000 ಕೋಟಿಗೂ ಹೆಚ್ಚು ಆಸ್ತಿ ತೆರಿಗೆಯನ್ನು ಪ್ರಥಮ ಬಾರಿಗೆ ಸಂಗ್ರಹಿಸಿದೆ.

ಮುನೀಶ್‌ ಮೌದ್ಗಿಲ್‌ ಅವರು ಕಂದಾಯ ವಿಭಾಗದ ವಿಶೇಷ ಆಯುಕ್ತರಾಗಿ ಬಂದಮೇಲೆ ತೆರಿಗೆಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡಲಾಗಿತ್ತು. ತೆರಿಗೆ ಬಾಕಿದಾರರಿಗೆ ಎಸ್‌ಎಂಎಸ್‌ ಕಳುಹಿಸುವುದು, ಹೆಚ್ಚಿನ ಪ್ರಮಾಣದಲ್ಲಿ ಬಾಕಿ ಉಳಿಸಿಕೊಂಡ ವಾಣಿಜ್ಯ ಕಟ್ಟಡಗಳಿಗೆ ಬೀಗ, ಜಪ್ತಿಯಂತಹ ಪ್ರಕ್ರಿಯೆಗೆ ಚಾಲನೆ ನೀಡಿದ್ದರು. ಆದರೂ, ಆಸ್ತಿ ತೆರಿಗೆ ಸಂಗ್ರಹ ನಿರೀಕ್ಷಿತ ಮಟ್ಟದಲ್ಲಿ ಹೆಚ್ಚಾಗಿಲ್ಲ.

‘ಕಂದಾಯ ವಿಭಾಗದ ಸಿಬ್ಬಂದಿಗೆ ಹೆಚ್ಚಿನ ಒತ್ತಡ ಹಾಕಿ ತೆರಿಗೆ ಸಂಗ್ರಹಿಸಲಾಗುತ್ತಿದೆ. ಚುನಾವಣೆ ಕೆಲಸದ ನಡುವೆಯೂ ಕಟ್ಟಡಗಳಿಗೆ ಬೀಗ ಹಾಕಿ ತೆರಿಗೆ ವಸೂಲಿ ಮಾಡುವಂತೆ ಸೂಚಿಸಲಾಗುತ್ತಿದೆ’ ಎಂದು ಬಿಬಿಎಂಪಿ ಕಂದಾಯ ವಿಭಾಗದ ಸಿಬ್ಬಂದಿ ದೂರಿದ್ದರು. ‘ಕಂದಾಯ ವಿಭಾಗದ ಸಿಬ್ಬಂದಿಯ ಮೂಲ ಕಾರ್ಯವೇ ತೆರಿಗೆ ಸಂಗ್ರಹ, ಅದನ್ನು ಪಾಲಿಸಲೇಬೇಕು. ಗುರಿ ತಲುಪಲೇಬೇಕು’ ಎಂದು ಕಂದಾಯ ವಿಭಾಗದ ಅಧಿಕಾರಿಗಳು ಸೂಚಿಸಿದ್ದರು. ಹೆಚ್ಚಿನ ದಂಡ ಹಾಗೂ ಶುಲ್ಕ ವಿಧಿಸಲೂ ಆದೇಶಿಲಾಗಿತ್ತು. ಇದಕ್ಕೆ ನಾಗರಿಕರಿಂದ ಆಕ್ಷೇಪ ವ್ಯಕ್ತವಾದ ಮೇಲೆ, ಸರ್ಕಾರ ದಂಡವನ್ನು ಕಡಿಮೆ ಮಾಡಿತ್ತು. ಬಡ್ಡಿ ಮೊತ್ತವನ್ನು ಉಳಿಸಿ, ಆಸ್ತಿ ತೆರಿಗೆಯನ್ನಾದರೂ ಪೂರ್ಣ ಪಾವತಿಸಿ ಎಂದೆಲ್ಲ ಅವಕಾಶ ಮಾಡಿಕೊಡಲಾಗಿತ್ತು. ಆದರೂ, ತೆರಿಗೆ ಸಂಗ್ರಹದಲ್ಲಿ ನಿರೀಕ್ಷಿತ ಹೆಚ್ಚಳ ಕಂಡುಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT