ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ಹಂಚಿಕೆ ಮಾಡಿರುವ ನಿವೇಶನಗಳಲ್ಲಿ ಗುತ್ತಿಗೆ ಮತ್ತು ಒಪ್ಪಂದ ಪ್ರಕಾರ ಐದು ವರ್ಷಗಳ ನಂತರವೂ ಮನೆ, ಕಟ್ಟಡ ನಿರ್ಮಿಸದ ಮಾಲೀಕರಿಗೆ ವಿಧಿಸುತ್ತಿದ್ದ ದಂಡವನ್ನು ಪರಿಷ್ಕರಣೆ ಮಾಡಲಾಗಿದೆ. ದಂಡದ ಪ್ರಮಾಣ ಇಳಿಕೆ ಮಾಡಿರುವುದರಿಂದ ಸಾವಿರಾರು ನಿವೇಶನಗಳ ಫಲಾನುಭವಿಗಳಿಗೆ ಅನುಕೂಲವಾಗಿದೆ.

ನಿವೇಶನದ ಮಾಲೀಕರಿಗೆ ವಿಧಿಸುತ್ತಿದ್ದ ಶೇಕಡ 10ರಷ್ಟು (ಮಾರ್ಗಸೂಚಿ ದರಕ್ಕೆ ಅನುಗುಣವಾಗಿ) ದಂಡವನ್ನು ಪರಿಷ್ಕರಿಸಿ, ಶೇಕಡ 2.5 ರಿಂದ ಶೇಕಡ 10ರವರೆಗೆ ನಾಲ್ಕು ವಿಭಾಗಗಳಲ್ಲಿ ದರ ನಿಗದಿ ಮಾಡಲಾಗಿದೆ. ಪರಿಷ್ಕೃತ ದರ 2024ರ ಸೆಪ್ಟೆಂಬರ್ 23ರಿಂದಲೇ ಅನ್ವಯವಾಗುತ್ತದೆ.

2024ರ ಅಧಿಸೂಚನೆಯಂತೆ ಮಾರ್ಗಸೂಚಿ ದರದ ಶೇಕಡ 10ರಷ್ಟನ್ನು ಖಾಲಿ ನಿವೇಶನಕ್ಕೆ ದಂಡವನ್ನಾಗಿ ವಿಧಿಸಲಾಗುತ್ತಿತ್ತು. ಆದರೆ, ಫಲಾನುಭವಿಗಳು ದಂಡ ಮರುಪರಿಷ್ಕರಣೆಗೆ ಒತ್ತಾಯಿಸಿದ್ದರು. ಹಾಗಾಗಿ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ಪರಿಷ್ಕರಣೆ ಮಾಡಲಾಗಿದೆ.

ದಂಡವು ನಾಡಪ್ರಭು ಕೆಂಪೇಗೌಡ ಬಡಾವಣೆ ಮತ್ತು ಅರ್ಕಾವತಿ ಬಡಾವಣೆಗಳಿಗೆ ಅನ್ವಯವಾಗುವುದಿಲ್ಲ.

ಪ್ರಾಧಿಕಾರದಿಂದ ನೋಂದಾಯಿಸಲಾದ ಗುತ್ತಿಗೆ ಮತ್ತು ಮಾರಾಟ ಒಪ್ಪಂದ ಪತ್ರದ ಪ್ರಕಾರ ನಿಗದಿತ ಅವಧಿಯೊಳಗೆ ಕಟ್ಟಡ ನಿರ್ಮಿಸದೇ ನಂತರದ ಅವಧಿಯಲ್ಲಿ ಕಟ್ಟಡ ನಿರ್ಮಿಸಿರುವ ಪ್ರಕರಣಗಳಲ್ಲಿ ಕಟ್ಟಡ ನಿರ್ಮಾಣವಾದ ದಿನಾಂಕದಿಂದ ಚಾಲ್ತಿಯಲ್ಲಿದ್ದ ಮಾರ್ಗಸೂಚಿ ದರಕ್ಕೆ ಪರಿಷ್ಕೃತ ದರ ಅನ್ವಯವಾಗಲಿದೆ. ನಿವೇಶನದ ಅಳತೆಗೆ ಅನುಗುಣವಾಗಿ ದಂಡ ನಿಗದಿ ಪಡಿಸಲಾಗಿದೆ.

ಒಂದು ವೇಳೆ ಸದರಿ ಮಾರ್ಗಸೂಚಿ ದರ ಲಭ್ಯವಿಲ್ಲದಿದ್ದಲ್ಲಿ ಗುತ್ತಿಗೆ ಹಾಗೂ ಮಾರಾಟ ಒಪ್ಪಂದ ಪತ್ರದಲ್ಲಿನ ದರದಂತೆ ಗುತ್ತಿಗೆ ಮಾರಾಟ ಒಪ್ಪಂದ ಪತ್ರದ ದಿನಾಂಕದಿಂದ ಪ್ರಸ್ತುತ ದಿನಾಂಕದವರೆಗೂ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಆಧಾರಿತ ಸಾಲದ ( ಎಂಸಿಎಲ್ಆರ್) ಮೇಲೆ ಶೇಕಡ 2 ಬಡ್ಡಿ ಪಾವತಿಸಬೇಕು.

ಇಲ್ಲವೇ ಪ್ರಸ್ತುತ ದಿನಾಂಕದಲ್ಲಿನ ಚಾಲ್ತಿಯಲ್ಲಿರುವ ಮಾರ್ಗಸೂಚಿ ದರದ ಮೇಲೆ ಪರಿಷ್ಕೃತ ಪಟ್ಟಿಯಂತೆ ನಿವೇಶನದ ಅಳತೆಗೆ ಅನುಗುಣವಾಗಿ ಶೇಕಡವಾರು ಲೆಕ್ಕಾಚಾರ ಮಾಡಿ, ಎರಡು ದರಗಳ ಪೈಕಿ ಯಾವುದು ಕಡಿಮೆಯೊ, ಆ ದರವನ್ನು ಖಾಲಿ ನಿವೇಶನಕ್ಕೆ ದಂಡವಾಗಿ ವಿಧಿಸಲಾಗುತ್ತದೆ.

‘ಈ ಹಿಂದೆ ಎರಡು ವರ್ಷದೊಳಗೆ ಮನೆ ನಿರ್ಮಿಸಬೇಕು ಎಂಬ ನಿಯಮವನ್ನು ಮೂರು ವರ್ಷಕ್ಕೆ ವಿಸ್ತರಿಸಲಾಯಿತು. ಈಗ ಐದು ವರ್ಷದೊಳಗೆ ಮನೆ ನಿರ್ಮಿಸಲು ಅವಕಾಶ ನೀಡಲಾಗಿದೆ. ಕಾನೂನು ಪ್ರಕಾರ ನಿಗದಿತ ಸಮಯದಲ್ಲಿ ಮನೆ ಕಟ್ಟದಿದ್ದರೆ ಶೇಕಡ 12.50ರಷ್ಟು ಹಣ ಕಡಿತ ಮಾಡಿಕೊಂಡು ಉಳಿದ ಹಣವನ್ನು ವಾಪಸ್ ಕೊಟ್ಟು ನಿವೇಶನ ಹಿಂಪಡೆಯಬೇಕು. ಕೆಲವರು ನಿವೇಶನ ಪಡೆದು ದಶಕ ಕಳೆದರೂ ಮನೆ ನಿರ್ಮಿಸಿಲ್ಲ. ಕ್ರಯಪತ್ರ ನೀಡುವ ವೇಳೆ ದಂಡದ ಮೊತ್ತವನ್ನು ಕಟ್ಟಿಸಿಕೊಳ್ಳಲಾಗುವುದು’ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದರು.

‘ಖಾಲಿ ನಿವೇಶನಕ್ಕೆ ದಂಡ ಪಾವತಿಸಲು ಇಚ್ಚೆ ಇಲ್ಲದವರು, ನಿವೇಶನವನ್ನು ಪ್ರಾಧಿಕಾರಕ್ಕೆ ಹಿಂತಿರುಗಿಸಿ, ಪಾವತಿಸಿರುವ ಮೊತ್ತದಲ್ಲಿ ಶೇಕಡ 12.5ರಷ್ಟನ್ನು ಕಳೆದು ಬಾಕಿ ಮೊತ್ತನ್ನು ಹಿಂಪಡೆಯಲು ಸ್ವತಂತ್ರರಾಗಿರುತ್ತಾರೆ. ದಂಡ ಪಾವತಿಸುವಂತೆ ಹಿಂಬರಹ ನೀಡಿದ 90 ದಿನಗಳಲ್ಲಿ ಪಾವತಿಸದಿದ್ದಲ್ಲಿ ಎಸ್ಬಿಐನ ಎಂ.ಸಿ.ಎಲ್.ಆರ್ ಮತ್ತು ಶೇಕಡ 2 ಬಡ್ಡಿ ದರವನ್ನು ವಿಧಿಸಲಾಗುವುದು’ ಎಂದು ಬಿಡಿಎ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.

‘ಈಗಾಗಲೇ ಖಾಲಿ ನಿವೇಶನಕ್ಕೆ ದಂಡವನ್ನು ಪಾವತಿಸಿರುವ ಹಂಚಿಕೆದಾರರಿಗೆ ಇದು ಅನ್ವಯಿಸುವುದಿಲ್ಲ. ಪಾವತಿಸಿರುವ ಮೊತ್ತವನ್ನು ಯಾವುದೇ ಸಂದರ್ಭದಲ್ಲಿ ಹಿಂತಿರುಗಿಸುವುದಿಲ್ಲ’ ಎಂದು ಹೇಳಿದ್ದಾರೆ.

ನಿವೇಶನದ ಅಳತೆ: ಪರಿಷ್ಕೃತ ದರ 20X30 ನಿವೇಶನ (0 ಯಿಂದ 600 ಚದರ ಅಡಿ): ಶೇಕಡ 2.5ರಷ್ಟು 30X40 ನಿವೇಶನ (601 ರಿಂದ 1200): ಶೇಕಡ 5 ರಷ್ಟು 40X60 ನಿವೇಶನ (1201 ರಿಂದ 2400); ಶೇಕಡ 7.5ರಷ್ಟು 60X40 ಹಾಗೂ ಮೇಲ್ಪಟ್ಟ ನಿವೇಶನ (2401 ಮತ್ತು ಮೇಲ್ಪಟ್ಟು); ಶೇಕಡ 10ರಷ್ಟು

ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚಿಸಿ ಖಾಲಿ ನಿವೇಶನಗಳ ದಂಡದ ಪ್ರಮಾಣವನ್ನು ಪರಿಷ್ಕರಣೆ ಮಾಡಿ ಶುಲ್ಕವನ್ನು ಇಳಿಕೆ ಮಾಡಲಾಗಿದೆ.
ಪಿ.ಮಣಿವಣ್ಣನ್ ಬಿಡಿಎ ಆಯುಕ್ತ

64 ಬಡಾವಣೆ: 65 ಸಾವಿರ ನಿವೇಶನ ಖಾಲಿ

ಬಿಡಿಎ ಅಧಿಕಾರಿಗಳ ಪ್ರಕಾರ ನಗರಾದಾದ್ಯಂತ ಪ್ರಾಧಿಕಾರ ನಿರ್ಮಿಸಿರುವ 64 ಬಡಾವಣೆಗಳಲ್ಲಿ ಸುಮಾರು 65 ಸಾವಿರ ನಿವೇಶನಗಳು ಖಾಲಿಯಿವೆ. 20 ಸಾವಿರಕ್ಕೂ ಅಧಿಕ ನಿವೇಶನಗಳು ವ್ಯಾಜ್ಯಗಳಿಂದ ಕೂಡಿವೆ. ಕೆಂಪೇಗೌಡ ಬಡಾವಣೆ ಮತ್ತು ಅರ್ಕಾವತಿ ಬಡಾವಣೆ ಹೊರತುಪಡಿಸಿ ಇತರೆ ಬಡಾವಣೆಗಳಲ್ಲಿ ಖಾಲಿ ನಿವೇಶನಗಳಿವೆ. ಪ್ರಮುಖವಾಗಿ ಇಂದಿರಾನಗರ ಜಯನಗರ ಬಿಟಿಎಂ ಲೇಔಟ್ ಬನಶಂಕರಿ ಅಂಜನಾಪುರ ಎಚ್ಎಎಲ್ ಜೆ.ಪಿ.ನಗರ ನಾಗರಬಾವಿ ಕೋರಮಂಗಲ ಎಚ್ಎಸ್ಆರ್ ಲೇಔಟ್ ಸೇರಿ ಹಲವು ಬಡಾವಣೆಗಳಲ್ಲಿ ಖಾಲಿ ನಿವೇಶನಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.