‘ಫೇಶಿಯಲ್’ ವೇಳೆ ಮಹಿಳೆ ಮುಖಕ್ಕೆ ಗಾಯ

ಬೆಂಗಳೂರು: ಫೇಶಿಯಲ್ ಮುಗಿದ ನಂತರ ಮಹಿಳೆಯೊಬ್ಬರ ಮುಖಕ್ಕೆ ಬಿಸಿನೀರು ಹಾಕಿ ಗಾಯ ಮಾಡಿದ ಆರೋಪದಡಿ ಇಂದಿರಾನಗರದ ‘ಕ್ಲಬ್ ಸಿಟ್ರಸ್ ಸಲ್ಯೂನ್ ಬ್ಯೂಟಿ ಪಾರ್ಲರ್’ ಮಾಲೀಕರು ಸೇರಿ ಮೂವರನ್ನು ಪೊಲೀಸರು ಬಂಧಿಸಿ, ಠಾಣಾ ಜಾಮೀನು ಮೇಲೆ ಬಿಡುಗಡೆ ಮಾಡಿದ್ದಾರೆ.
ಮಾಲೀಕರಾದ ವೆರೊನಿಕಾ, ಕ್ರಿಸ್ ಹಾಗೂ ಉದ್ಯೋಗಿ ಓಲಿವಿಯಾ ಬಂಧಿತರು. ಗಾಯಾಳು ಡಾ. ಟಿ.ಆರ್. ಯಶೋದ (54) ಎಂಬುವರು ನೀಡಿದ ದೂರಿನಡಿ ನಿರ್ಲಕ್ಷ್ಯ ತೋರಿದ (ಐಪಿಸಿ 287) ಹಾಗೂ ಜೀವಕ್ಕೆ ಕುತ್ತು ತಂದ (ಐಪಿಸಿ 387) ಆರೋಪದಡಿ ಮೂವರ ವಿರುದ್ಧವೂ ಎಫ್‌ಐಆರ್ ದಾಖಲಾಗಿತ್ತು.
‘ಸ್ಥಳೀಯ ನಿವಾಸಿ ಯಶೋದ, ‘ಕ್ಲಬ್ ಸಿಟ್ರಸ್ ಸೆಲ್ಯೂನ್ ಬ್ಯೂಟಿ ಪಾರ್ಲರ್’ನಲ್ಲಿ ಸದಸ್ಯತ್ವ ಪಡೆದಿದ್ದರು. ಜುಲೈ 28ರಂದು ಸಂಜೆ ಬ್ಯೂಟಿ ಪಾರ್ಲರ್‌ಗೆ ಹೋಗಿ ಫೇಶಿಯಲ್ ಮಾಡಿಸಿಕೊಂಡಿದ್ದರು. ಉದ್ಯೋಗಿ ಓಲಿವಿಯಾ, ಫೇಶಿಯಲ್ ಮುಗಿಸಿದ ನಂತರ ನಿರ್ಲಕ್ಷ್ಯತನದಿಂದ ಮುಖಕ್ಕೆ ಬಿಸಿ ನೀರು ಹಾಕಿದ್ದರು’ ಎಂದು ಯಶೋದ ದೂರಿನಲ್ಲಿ ತಿಳಿಸಿದ್ದಾರೆ
‘ಬಿಸಿನೀರು ಹಾಕಿದ್ದರಿಂದ ಯಶೋದ ಅವರ ಮೂಗಿನ ಬಳಿ ಗಾಯವಾಗಿತ್ತು. ಸೂಕ್ತ ಚಿಕಿತ್ಸೆ ಕೊಡಿಸುವುದಾಗಿ ಪಾರ್ಲರ್‌ನ ಮಾಲೀಕರು ಭರವಸೆ ನೀಡಿದ್ದರು. ಇದುವರೆಗೂ ಚಿಕಿತ್ಸೆ ಕೊಡಿಸದಿದ್ದರಿಂದ ಯಶೋದ ಠಾಣೆಗೆ ದೂರು ನೀಡಿದ್ದಾರೆ’ ಎಂದು ಇಂದಿರಾನಗರ ಪೊಲೀಸರು ಮಾಹಿತಿ ನೀಡಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.