ಬೆಂಗಳೂರು: ಕೇಂದ್ರ ರೇಷ್ಮೆ ಮಂಡಳಿಯಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ನೀಲಿ ಮಾರ್ಗದ ಮೊದಲ ಹಂತದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ರೇಷ್ಮೆ ಮಂಡಳಿಯಿಂದ ಕೆ.ಆರ್. ಪುರವರೆಗೆ 2026ರ ಸೆಪ್ಟೆಂಬರ್ ಒಳಗೆ ಸಂಚಾರ ಆರಂಭಿಸುವ ಗುರಿಯನ್ನು ಬಿಎಂಆರ್ಸಿಎಲ್ ಇಟ್ಟುಕೊಂಡಿದೆ.

ನಗರವನ್ನು ವಾಹನದಟ್ಟಣೆ ಸಮಸ್ಯೆಯು ಕಾಡುತ್ತಿದೆ. ದಟ್ಟಣೆ ಅವಧಿಯಲ್ಲಿ ತಾಸುಗಟ್ಟಲೆ ರಸ್ತೆಯಲ್ಲೇ ಸಮಯ ಕಳೆದು ಹೋಗುತ್ತದೆ. ಈ ರೀತಿ ವಿಪರೀತ ದಟ್ಟಣೆ ಇರುವ ರಸ್ತೆಗಳಲ್ಲಿ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ರಸ್ತೆಯು ಪ್ರಮುಖವಾಗಿದೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಅತಿ ಹೆಚ್ಚು ಪ್ರಯಾಣಿಕರ ಒತ್ತಡ ಇರುವ ದೇಶದ ವಿಮಾನ ನಿಲ್ದಾಣಗಳಲ್ಲಿ ಮೂರನೇ ಸ್ಥಾನದಲ್ಲಿದೆ. 2021–22ರಲ್ಲಿ ಈ ವಿಮಾನ ನಿಲ್ದಾಣದ ಮೂಲಕ 1.63 ಕೋಟಿ ಜನರು ಪ್ರಯಾಣಿಸಿದ್ದರು. ಮೂರೇ ವರ್ಷದಲ್ಲಿ ವಿಮಾನದಲ್ಲಿ ಸಂಚರಿಸುವವರ ಸಂಖ್ಯೆ ಎರಡೂವರೆ ಪಟ್ಟು ಹೆಚ್ಚಾಗಿದೆ. 2024-25ರಲ್ಲಿ 4.2 ಕೋಟಿ ಜನರು ಪ್ರಯಾಣಿಸಿದ್ದಾರೆ. ನಮ್ಮ ಮೆಟ್ರೊ ನೀಲಿ ಮಾರ್ಗ ಪೂರ್ಣಪ್ರಮಾಣದಲ್ಲಿ ಆರಂಭಗೊಂಡರೆ ಶೇ 25ರಷ್ಟು ಜನರು ಮೆಟ್ರೊ ಮೂಲಕವೇ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಸಾಧ್ಯತೆ ಇದೆ.

ಕೇಂದ್ರ ರೇಷ್ಮೆ ಸಂಸ್ಥೆಯಿಂದ (ಸೆಂಟ್ರಲ್ ಸಿಲ್ಕ್ ಬೋರ್ಡ್) ಕೆ.ಆರ್.ಪುರದವರೆಗೆ (ಹಂತ 2ಎ) ಮತ್ತು ಕೆ.ಆರ್. ಪುರದಿಂದ ವಿಮಾನ ನಿಲ್ದಾಣದವರೆಗೆ (ಹಂತ 2ಬಿ) ಎಂದು ನೀಲಿ ಮಾರ್ಗವನ್ನು ಎರಡು ಹಂತವಾಗಿ ವಿಂಗಡಿಸಲಾಗಿತ್ತು. 2021ರ ಆಗಸ್ಟ್ನಲ್ಲಿ ಹಂತ 2ಎ ಕಾಮಗಾರಿ ಆರಂಭವಾಗಿತ್ತು. 2022ರ ಫೆಬ್ರುವರಿಯಲ್ಲಿ ಹಂತ 2ಬಿ ಕಾಮಗಾರಿ ಶುರುವಾಗಿತ್ತು.

ಹಂತ 2ಎ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ಆದರೆ, ಹಂತ 2ಬಿಯ ಕಾಮಗಾರಿ ಕೆ.ಆರ್. ಪುರದಿಂದ ಹೆಬ್ಬಾಳವರೆಗೆ ಬಹಳ ನಿಧಾನಗತಿಯಲ್ಲಿ ಸಾಗುತ್ತಿದೆ. ಹೆಬ್ಬಾಳದಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಮತ್ತೆ ವೇಗವಾಗಿ ನಡೆಯುತ್ತಿದೆ.

ಕೆ.ಆರ್. ಪುರದಿಂದ ಹೆಬ್ಬಾಳದವರೆಗೆ ಹೊರವರ್ತುಲ ರಸ್ತೆಯಲ್ಲಿ ಹೆಚ್ಚು ಮೇಲ್ಸೇತುವೆ ರಸ್ತೆಗಳಿರುವುದರಿಂದ ಕಾಮಗಾರಿ ನಿಧಾನವಾಗಿದೆ. ಮೇಲ್ಸೇತುವೆಗಳನ್ನು ತಪ್ಪಿಸಿಕೊಂಡು ಗರ್ಡರ್ ಅಳವಡಿಸಬೇಕು. ಕ್ರೈನ್ ಹೋಗದ ಜಾಗಗಳಲ್ಲಿ ಬೇರೆ ವ್ಯವಸ್ಥೆಗಳನ್ನು ಮಾಡಬೇಕು. ಪ್ರಮುಖ ಜಂಕ್ಷನ್ಗಳಲ್ಲಿ ಕಾಂಪೋಸ್ಡ್ ಗರ್ಡರ್, ವೆಬ್ ಗರ್ಡರ್ಗಳನ್ನು ಹಾಕಲಾಗುತ್ತಿದೆ. ಈ ಎಲ್ಲ ಕಾರಣದಿಂದ ನಿಧಾನವಾಗಿದೆ ಎಂದು ನಮ್ಮ ಮೆಟ್ರೊ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್. ಯಶವಂತ್ ಚವಾಣ್ ಮಾಹಿತಿ ನೀಡಿದರು.

‘ರೇಷ್ಮೆ ಮಂಡಳಿಯಿಂದ ಕೆ.ಆರ್. ಪುರ ವರೆಗೆ ಮುಂದಿನ ವರ್ಷ ಸೆಪ್ಟೆಂಬರ್ನಲ್ಲಿ ಸಂಚಾರ ಆರಂಭಿಸಲಾಗುವುದು. ವಿಮಾನ ನಿಲ್ದಾಣದಿಂದ ಹೆಬ್ಬಾಳವರೆಗೆ 2027ರ ಜೂನ್ನಲ್ಲಿ ಆರಂಭವಾಗುವ ನಿರೀಕ್ಷೆ ಇದೆ. ಹೆಬ್ಬಾಳದಿಂದ ಕೆ.ಆರ್. ಪುರ ನಡುವೆ ಅದೇ ವರ್ಷ ಡಿಸೆಂಬರ್ ಒಳಗೆ ಮೆಟ್ರೊ ಸಂಚಾರ ಆರಂಭಿಸಬೇಕು ಎಂಬ ಗುರಿ ಇಟ್ಟುಕೊಂಡಿದ್ದೇವೆ’ ಎಂದು ಅವರು ವಿವರಿಸಿದರು.

ಜನ ಏನಂತಾರೆ?

ಬೆಂಗಳೂರಿನಲ್ಲಿ ಮೂಲಭೂತ ಸೌಕರ್ಯಗಳು ಬಹಳ ಬೇಗ ಆಗುವುದಿಲ್ಲ. ವಿಮಾನ ನಿಲ್ದಾಣಕ್ಕೆ ಬಹಳ ಬೇಗನೇ ಮೆಟ್ರೊ ಸಂಪರ್ಕ ಆಗಬೇಕಿತ್ತು. 2027ರ ಒಳಗೆ ಆಗಲಿದೆ ಎಂದು ಹೊಸ ವ್ಯವಸ್ಥಾಪಕ ನಿರ್ದೇಶಕರು ಭರವಸೆ ನೀಡಿದ್ದಾರೆ. ಅವರ ಭರವಸೆ ಮತ್ತೆ ಮುಂದಕ್ಕೆ ಹೋಗದೇ ನೀಲಿ ಮಾರ್ಗದಲ್ಲಿ ಮೆಟ್ರೊ ಸಂಚಾರ ಆರಂಭವಾಗಬೇಕು. ಕೆ.ಎನ್. ಕೃಷ್ಣಪ್ರಸಾದ್ ನಿವೃತ್ತ ಸರ್ಕಾರಿ ಅಧಿಕಾರಿ ಮೆಟ್ರೊ ಬೇಗ ಆದಷ್ಟು ಒಳ್ಳೆಯದು. ನಾಲ್ಕೈದು ವರ್ಷಗಳಿಂದ ಕೆಲಸ ಆಗುತ್ತಿದೆ. ಆದರೆ ಪೂರ್ಣಗೊಂಡಿಲ್ಲ. ಸಂಚಾರ ದಟ್ಟಣೆ ಇರುವುದರಿಂದ ಓಡಾಡಲು ಸಮಸ್ಯೆಯಾಗಿದೆ. ಇನ್ನೊಂದು ಕಡೆಯಿಂದ ಮೆಟ್ರೊ ಕಾಮಗಾರಿ ನಡೆಸುವಾಗ ಉಂಟಾಗುವ ಸದ್ದು ಸ್ಥಳೀಯ ನಿವಾಸಿಗಳ ನಿದ್ದೆಯನ್ನು ಕೆಡಿಸುತ್ತಿದೆ. ದೂಳು ಆರೋಗ್ಯ ಮೇಲೆ ಪರಿಣಾಮ ಬೀರುತ್ತಿದೆ. ಹಾಗಾಗಿ ಮೆಟ್ರೊ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಸಂಚಾರ ಆರಂಭಿಸಿದರೆ ಸಾರ್ವಜನಿಕರಿಗೆ ಉಪಯೋಗವಾಗಲಿದೆ. ಅನಿಲ್ ಹೋಟೆಲ್ ಉದ್ಯಮಿ ಬಾಬುಸಾಬ್ ಪಾಳ್ಯ ಸಂಪರ್ಕ ವ್ಯವಸ್ಥೆ ಸರಿಯಾಗಿ ಇಲ್ಲದ ಪ್ರದೇಶದಲ್ಲಿ ನೀಲಿ ಮಾರ್ಗ ಬರುತ್ತಿದೆ. ಈಗ ವಾಹನ ದಟ್ಟಣೆಯಲ್ಲಿ ಕಾಲ ಕಳೆದು ಹೋಗುತ್ತಿದೆ. ಇಲ್ಲಿ ಮೆಟ್ರೊ ಸಂಚಾರ ಆಂಭಗೊಂಡರೆ ನಮ್ಮ ಸಮಯ ಉಳಿಯಲಿದೆ. ವಾಹನಗಳಿಂದ ಉಂಟಾಗುವ ಮಾಲಿನ್ಯ ಕಡಿಮೆಯಾಗಲಿದೆ. ಅನುಮೋಲ್ ಖಾಸಗಿ ಕಂಪನಿ ಉದ್ಯೋಗಿ ನಾಗವಾರ ಕ್ರಾಸ್

ವೇಗದ ಮೆಟ್ರೊ ಸಂಚಾರ

ನೀಲಿ ಮಾರ್ಗದಲ್ಲಿ ಸಂಚರಿಸಲಿರುವ ಮೆಟ್ರೊ ರೈಲುಗಳ ಸರಾಸರಿ ವಾಣಿಜ್ಯ ವೇಗ ಗಂಟೆಗೆ 50 ಕಿ.ಮೀ. ಇರಲಿದೆ. ಪ್ರಸ್ತುತ ನಮ್ಮ ಮೆಟ್ರೊದ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ರೈಲುಗಳು ಗಂಟೆಗೆ 34 ಕಿ.ಮೀ. ವೇಗದಲ್ಲಿ ಚಲಿಸುತ್ತಿವೆ. ಸೋಮವಾರ ಆರಂಭವಾಗಿರುವ ಹಳದಿ ಮಾರ್ಗ ನಿರ್ಮಾಣ ಹಂತದಲ್ಲಿ ಇರುವ ಗುಲಾಬಿ ಮಾರ್ಗದ ಸರಾಸರಿ ವೇಗ ಇಷ್ಟೇ ಇರಲಿದೆ. ವಿಮಾನ ನಿಲ್ದಾಣಕ್ಕೆ ಹೋಗುವವರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಮೆಟ್ರೊಗಳ ‘ಸರಾಸರಿ ವಾಣಿಜ್ಯ ವೇಗ’(ಆವರೇಜ್ ಕರ್ಮಿಷಿಯಲ್ ಸ್ಪೀಡ್) ಹೆಚ್ಚು ಮಾಡಲಾಗಿದೆ. ಹೆಬ್ಬಾಳದಿಂದ ವಿಮಾನ ನಿಲ್ದಾಣದವರೆಗೆ ಮೆಟ್ರೊ ನಿಲ್ದಾಣಗಳ ಸಂಖ್ಯೆ ಕೂಡ ಅದೇ ಕಾರಣಕ್ಕೆ ಕಡಿಮೆ ಇರುವಂತೆ ಯೋಜನೆ ರೂಪಿಸಲಾಗಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಿಲ್ದಾಣಗಳು

ಕೇಂದ್ರ ರೇಷ್ಮೆ ಮಂಡಳಿ ಎಚ್ಎಸ್ಆರ್ ಬಡಾವಣೆ ಅಗರ ಇಬ್ಬಲೂರು ಬೆಳ್ಳಂದೂರು ಕಾಡುಬೀಸನಹಳ್ಳಿ ಕೋಡಿಬೀಸನಹಳ್ಳಿ ಮಾರತ್ಹಳ್ಳಿ ಇಸ್ರೊ ದೊಡ್ದನೆಕ್ಕುಂದಿ ಡಿಆರ್ಡಿಒ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಸರಸ್ವತಿ ನಗರ ಕೃಷ್ಣರಾಜಪುರ ಕಸ್ತೂರಿನಗರ ಹೊರಮಾವು ಎಚ್ಆರ್ಬಿಆರ್ ಬಡಾವಣೆ ಕಲ್ಯಾಣ ನಗರ ಎಚ್ಬಿಆರ್ ಬಡಾವಣೆ ನಾಗವಾರ ವೀರಣ್ಣಪಾಳ್ಯ ಕೆಂಪಾಪುರ ಹೆಬ್ಬಾಳ ಕೊಡಿಗೇಹಳ್ಳಿ ಜಕ್ಕೂರು ಕ್ರಾಸ್ ಯಲಹಂಕ ಬಾಗಲೂರು ಕ್ರಾಸ್ ಬೆಟ್ಟಹಲಸೂರು ದೊಡ್ಡಜಾಲ ವಿಮಾನ ನಿಲ್ದಾಣ ನಗರ ಅಂತರಾಷ್ಟ್ರೀಯ ವಿಮಾನ ನಿಲ್ದಾಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.