ಹೊಸ ವರ್ಷ 2023ರಲ್ಲಿ 3 ಹೊಸ ಮೆಟ್ರೊ ರೈಲು ಮಾರ್ಗಗಳು ಸಾರ್ವಜನಿಕ ಸೇವೆಗೆ ಲಭ್ಯವಾಗಲಿವೆ. ಇದರಿಂದಾಗಿ ಸದ್ಯ 56 ಕಿಲೋ ಮೀಟರ್ ಇರುವ ಮೆಟ್ರೊ ರೈಲು ಮಾರ್ಗ 100 ಕಿಲೋ ಮೀಟರ್ ದಾಟಲಿದೆ. ವೈಟ್ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿಯಂತಹ ಎರಡು ಟೆಕ್ ಹಬ್ಗಳನ್ನು ಹೊಸ ಮೆಟ್ರೊ ಮಾರ್ಗ ಸಂಪರ್ಕಿಸಲಿದ್ದು, ನಾಗಸಂದ್ರದಿಂದ ಬಿಐಇಸಿವರೆಗೆ ಮತ್ತು ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರಕ್ಕೂ ಮೆಟ್ರೊ ರೈಲು ಸೇವೆ ಲಭ್ಯವಾಗಲಿದ್ದು, ಇದರ ಸಂಪೂರ್ಣ ವಿವರ ಈ ವಿಡಿಯೊದಲ್ಲಿ.