ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಅಪಘಾತ, ಸಂಚಾರ ತುರ್ತು ಸಹಾಯಕ್ಕೆ ‘ನಮ್ಮ–112’

‘ನಮ್ಮ 112 ಎಲ್ಲ ರೀತಿಯ ತುರ್ತು ಸಹಾಯಕ್ಕೂ ವಿಸ್ತರಣೆ ಮಾಡಿ
Published 22 ಜುಲೈ 2023, 21:07 IST
Last Updated 22 ಜುಲೈ 2023, 21:07 IST
ಅಕ್ಷರ ಗಾತ್ರ

ಬೆಂಗಳೂರು: ‘ಜನರ ತುರ್ತು ಸಹಾಯಕ್ಕಾಗಿ ನಮ್ಮ 112 ಕಾರ್ಯನಿರ್ವಹಿಸುತ್ತಿದೆ. ಅಪರಾಧ ಪ್ರಕರಣಗಳ ಜೊತೆಯಲ್ಲಿ, ಅಪಘಾತ ಹಾಗೂ ಸಂಚಾರ ಸಂಬಂಧಿತ ತುರ್ತು ಸಹಾಯಕ್ಕಾಗಿಯೂ ಜನರು ಕರೆ ಮಾಡಬಹುದು’ ಎಂದು ಪೊಲೀಸ್ ಕಮಿಷನರ್ ಬಿ. ದಯಾನಂದ್ ಹೇಳಿದ್ದಾರೆ.

ಮಲ್ಲೇಶ್ವರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಪಾಲ್ಗೊಂಡಿದ್ದ ಜನ, ‘ನಮ್ಮ 112 ಎಲ್ಲ ರೀತಿಯ ತುರ್ತು ಸಹಾಯಕ್ಕೂ ವಿಸ್ತರಣೆ ಮಾಡಿ’ ಎಂದು ಕೋರಿದ್ದರು. ಈ ಬಗ್ಗೆ ಪರಿಶೀಲಿಸುವುದಾಗಿ ಹೇಳಿದ್ದ ದಯಾನಂದ್, ‘ನಮ್ಮ 112 ವಿಸ್ತರಣೆ ಮಾಡಲಾಗಿದೆ’ ಎಂದು ಟ್ವೀಟ್ ಮಾಡಿದ್ದಾರೆ.

‘ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಪಾಯಕ್ಕೆ ಸಿಲುಕಿದರೆ, ಕಾನೂನು ಸುವ್ಯವಸ್ಥೆಗೆ ಯಾರಾದರೂ ಧಕ್ಕೆ ತಂದರೆ 112ಕ್ಕೆ ಕರೆ ಮಾಡಬಹುದು. ಅಪಘಾತದ ವೇಳೆ ಸಹಾಯ ಹಾಗೂ ಸಂಚಾರದಲ್ಲಿ ಏನಾದರೂ ತೊಂದರೆಯಾದರೂ ಜನರು 112ಕ್ಕೆ ಕರೆ ಮಾಡಿ ತುರ್ತು ಸಹಾಯ ಕೇಳಬಹುದು. ಸಂಬಂಧಪಟ್ಟ ಸಿಬ್ಬಂದಿ, ಕೆಲ ನಿಮಿಷಗಳಲ್ಲಿ ಸ್ಥಳದಲ್ಲಿ ಹಾಜರಾಗಿ ಸಮಸ್ಯೆ ಆಲಿಸಲಿದ್ದಾರೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT