ಬೆಂಗಳೂರು:ಹೆಣ್ಣೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಥಣಿಸಂದ್ರದಲ್ಲಿ ಬುಧವಾರ ಬೆಳಿಗ್ಗೆ ಶಾಲಾ ಬಸ್ನ ಚಕ್ರಗಳು ಹರಿದು, ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.

ವರ್ಷಾ(2) ಹಾಗೂ ಭಾನು(4) ಮೃತ ಮಕ್ಕಳು.

ರಾಯಚೂರಿನ ನಾಗನಗೌಡ ಅವರು ಸಶಸ್ತ್ರ ಮೀಸಲು ಪಡೆಯ (ಸಿಎಆರ್) ಕಾನ್ಸ್ಟೆಬಲ್ ಆಗಿ ನಗರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ತಮ್ಮ ಪುತ್ರಿ ವರ್ಷಾ ಮತ್ತು ಅಣ್ಣನ ಮಗಳಾದ ಭಾನುಳನ್ನು ಸ್ಕೂಟರ್ನ ಮುಂಬದಿಯಲ್ಲಿ ಕೂರಿಸಿಕೊಂಡು ಹಾಲು ತರಲು ಬುಧವಾರ ಬೆಳಿಗ್ಗೆ ತೆರಳುತ್ತಿದ್ದರು. ಥಣಿಸಂದ್ರದ ಜಂಕ್ಷನ್ನಲ್ಲಿ ಶಾಲಾ ಬಸ್ ಬರುತ್ತಿರುವುದನ್ನು ಗಮನಿಸಿದ್ದ ನಾಗನಗೌಡ ಅವರು ಸ್ಕೂಟರ್ ನಿಲುಗಡೆ ಮಾಡಿದ್ದರು. ಯು–ಟರ್ನ್ ತೆಗೆದುಕೊಳ್ಳುವ ಸಂದರ್ಭದಲ್ಲಿ ಬಸ್, ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರು ಮಕ್ಕಳು ರಸ್ತೆಗೆ ಬಿದ್ದಿದ್ದರು. ಅವರ ಮೇಲೆಯೇ ಶಾಲಾ ಬಸ್ನ ಚಕ್ರಗಳು ಹರಿದ ಪರಿಣಾಮ ಮಕ್ಕಳು ಮೃತಪಟ್ಟಿದ್ದಾರೆ ಎಂದು ಸಂಚಾರ ಪೊಲೀಸರು ಹೇಳಿದರು.

ನಾಗನಗೌಡ ಅವರಿಗೂ ಗಾಯ: ಗಂಭೀರವಾಗಿ ಗಾಯಗೊಂಡಿದ್ದ ಮಕ್ಕಳನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಮೃತಪಟ್ಟಿದ್ದಾರೆ. ನಾಗನಗೌಡ ಅವರಿಗೂ ಸಣ್ಣಪುಟ್ಟ ಗಾಯವಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು.

ಉತ್ತರ ಸಂಚಾರ ವಿಭಾಗದ ಡಿಸಿಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೆಣ್ಣೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು.

ನಾಗನಗೌಡ ಅವರು ಥಣಿಸಂದ್ರದ ಪೊಲೀಸ್ ವಸತಿಗೃಹದಲ್ಲಿ ಪತ್ನಿ ಈರಮ್ಮ ಹಾಗೂ ಇಬ್ಬರು ಮಕ್ಕಳ ಜತೆಗೆ ವಾಸವಾಗಿದ್ದಾರೆ. ದಂಪತಿಗೆ ವಿವಾಹವಾಗಿ 10 ವರ್ಷವಾಗಿದೆ. ಮದುವೆಯಾಗಿ ಐದು ವರ್ಷದ ಬಳಿಕ ಗಂಡು ಮಗು ಜನಿಸಿತ್ತು. ಎರಡು ವರ್ಷದ ಹಿಂದೆ ವರ್ಷಾ ಜನಿಸಿದ್ದಳು. ಅಪಘಾತದಲ್ಲಿ ಮೃತಪಟ್ಟ ಅಣ್ಣನ ಮಗಳಾದ ಭಾನುಳನ್ನು ಎರಡು ತಿಂಗಳ ಹಿಂದಷ್ಟೇ ರಾಯಚೂರಿನಿಂದ ನಾಗನಗೌಡ ಅವರು ಮನೆಗೆ ಕರೆದುಕೊಂಡು ಬಂದಿದ್ದರು ಎಂದು ಮೂಲಗಳು ಹೇಳಿವೆ.

ಎಂದಿನಂತೆ ಬುಧವಾರ ಬೆಳಿಗ್ಗೆಯೂ ಪೊಲೀಸ್ ವಸತಿಗೃಹದಿಂದ ಹಾಲು ತರಲು ಅಂಗಡಿಗೆ ತೆರಳುತ್ತಿದ್ದರು. ಬೆಳಿಗ್ಗೆ 8.15ರ ಸುಮಾರಿಗೆ ಎದುರಾದ ಶಾಲಾ ಬಸ್, ಯು–ಟರ್ನ್ ಮಾಡಿಕೊಳ್ಳಲು ಮುಂದಾಗಿತ್ತು. ಈ ವೇಳೆ ನಿಲ್ಲಿಸಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಚಾಲಕ ಅಪಘಾತ ಎಸಗಿದ್ದಾನೆ. ಅಪಘಾತದ ದೃಶ್ಯ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಚಾಲಕನ ನಿರ್ಲಕ್ಷ್ಯದಿಂದಲೇ ಅಪಘಾತ: ‘ಹಾಲು ತರಲು ಮಕ್ಕಳೊಂದಿಗೆ ಸ್ಕೂಟರ್ನಲ್ಲಿ ಮನೆಯ ಸಮೀಪದ ಅಂಗಡಿಗೆ ಹೋಗುತ್ತಿದ್ದೆ. ರಸ್ತೆ ತಿರುವಿನಲ್ಲಿ ಶಾಲಾ ಬಸ್ ಕಂಡೊಡನೆ ವಾಹನ ನಿಲ್ಲಿಸಿದೆ. ಆದರೆ, ಶಾಲಾ ಬಸ್ ಚಾಲಕ ವೇಗವಾಗಿ ವಾಹನ ನುಗ್ಗಿಸಿದ. ಆಗ ಬಸ್, ಸ್ಕೂಟರ್ ಡಿಕ್ಕಿಯಾಗಿ ಮಕ್ಕಳಿಬ್ಬರು ನಿಯಂತ್ರಣ ತಪ್ಪಿ ಕೆಳಗೆ ಬಿದ್ದರು. ನಾನು ಬಸ್ ನಿಲ್ಲಿಸುವಂತೆ ಕೂಗಿದರೂ ಚಾಲಕ ಮುಂದಕ್ಕೆ ವಾಹನ ಚಲಾಯಿಸಿದ. ಕಣ್ಣೆದುರೇ ಬಸ್ನ ಚಕ್ರ ಮಕ್ಕಳ ಮೇಲೆ ಹರಿಯಿತು’ ಎಂದು ನಾಗನಗೌಡ ಕಣ್ಣೀರಿಟ್ಟರು.

ಥಣಿಸಂದ್ರದ ಖಾಸಗಿ ಶಾಲೆಯ ಬಸ್, ಮಕ್ಕಳನ್ನು ಶಾಲೆಗೆ ಕರೆದೊಯ್ಯಲು ಸೆಂಟ್ರಲ್ ರೆವಿನ್ಯೂ ಲೇಔಟ್ಗೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಬಸ್, ದ್ವಿಚಕ್ರ ವಾಹನಕ್ಕೆ ಗುದ್ದಿದ ನಂತರವೂ ಮಾರೆಪ್ಪ ವಾಹನ ನಿಲ್ಲಿಸಿಲ್ಲ. ಆತನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಸಂಚಾರ ಪೊಲೀಸರು ಹೇಳಿದರು.

ಶಾಲಾ ಬಸ್ ಚಾಲಕನ ಬಂಧನ

ಅಪಘಾತಕ್ಕೆ ಕಾರಣವಾದ ಬಸ್ ಚಾಲಕ ಮಾರೆಪ್ಪ ಅವರನ್ನು ಹೆಣ್ಣೂರು ಸಂಚಾರ ಠಾಣೆಯ ಪೊಲೀಸರು ಬಂಧಿಸಿ ಬಸ್ ಜಪ್ತಿ ಮಾಡಿದ್ದಾರೆ. ಯಾದಗಿರಿಯ ಮಾರೆಪ್ಪ ಶಾಲೆಯ ಬಸ್ ಚಾಲಕರಾಗಿ ನಗರದಲ್ಲಿ ಕೆಲಸ ಮಾಡುತ್ತಿದ್ದರು. ‘ಥಣಿಸಂದ್ರ ಮುಖ್ಯರಸ್ತೆಯಿಂದ ಅಡ್ಡರಸ್ತೆಯ ಬಲಕ್ಕೆ ಬಸ್ ತಿರುಗಿಸುವ ಸಂದರ್ಭದಲ್ಲಿ ಎಡ ಭಾಗಕ್ಕೆ ನೋಡುತ್ತಿದ್ದೆ. ಹೀಗಾಗಿ ಬಲ ಭಾಗದಲ್ಲಿದ್ದ ದ್ವಿಚಕ್ರ ವಾಹನ ನನ್ನ ಗಮನಕ್ಕೆ ಬರಲಿಲ್ಲ’ ಎಂಬುದಾಗಿ ವಿಚಾರಣೆ ವೇಳೆ ಪೊಲೀಸರಿಗೆ ಮಾರೆಪ್ಪ ತಿಳಿಸಿದ್ದಾರೆ. ‘ಬಸ್ ಚಾಲಕನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಅಪಘಾತದ ಸಂದರ್ಭದಲ್ಲಿ ಮಾರೆಪ್ಪ ಪಾನಮತ್ತನಾಗಿರಲಿಲ್ಲ ಎಂಬುದು ದೃಢಪಟ್ಟಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.