ಬೆಂಗಳೂರು: ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಹೊಸ ಮಾರ್ಗಸೂಚಿಗೆ ಅನುಗುಣವಾಗಿ ಬೆಂಗಳೂರು ವಿಶ್ವವಿದ್ಯಾಲಯ ಪಿಎಚ್.ಡಿ ಪ್ರವೇಶ ಪ್ರಕ್ರಿಯೆಯನ್ನು ಆರಂಭಿಸಿದ್ದು, ಒಟ್ಟು 36 ವಿಭಾಗಗಳಲ್ಲಿ 384 ಮಂದಿಗೆ ಪ್ರವೇಶ ಪಡೆಯಲು ಅವಕಾಶ ಸಿಗಲಿದೆ.

ಮಹಿಳಾ ಅಧ್ಯಯನ ಮತ್ತು ಸಮಾಜ ಕಾರ್ಯ ವಿಭಾಗ ಹೊರತುಪಡಿಸಿ ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್ ಹಾಗೂ ವಿಶ್ವವಿದ್ಯಾಲಯದ ಸಂಯೋಜನೆ ಪಡೆದಿರುವ ಐದು ಕಾಲೇಜುಗಳಲ್ಲಿ ಪಿಎಚ್.ಡಿಗೆ ಪ್ರವೇಶ ಪಡೆಯಬಹುದು. ವಿಷಯವಾರು ಮೀಸಲಾತಿಗೆ ಅನುಗುಣವಾಗಿ ಇರುವ ಸೀಟುಗಳ ಸಂಖ್ಯೆಯನ್ನು ಪ್ರಕಟಿಸಲಾಗಿದೆ.

ಇದೇ ಮೊದಲ ಬಾರಿಗೆ ಸಂದರ್ಶನ ವನ್ನು ಪರಿಚಯಿಸಲಾಗಿದೆ. ಶೇ 70ರಷ್ಟು ಅಂಕಗಳಿಗೆ ಲಿಖಿತ ಪರೀಕ್ಷೆ ಹಾಗೂ ಶೇ 30ರಷ್ಟು ಅಂಕಗಳಿಗೆ ಸಂದರ್ಶನ ನಿಗದಿಪಡಿಸಲಾಗಿದೆ. ಈ ಎರಡರಿಂದ ಶೇ 50ರಷ್ಟು
ಅಂಕಗಳು ಹಾಗೂ ಸ್ನಾತಕೋತ್ತರ ಪದವಿಯಲ್ಲಿನ ಶೇ 50ರಷ್ಟು ಅಂಕಗಳನ್ನು ಪರಿಗಣಿಸಿ ಅಂತಿಮ ಅರ್ಹತಾ ಪಟ್ಟಿ ಸಿದ್ಧಪಡಿಸ ಲಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ ಶೇ 50ರಷ್ಟು ಅಂಕಗಳನ್ನು ಗಳಿಸಿದರೆ ಮಾತ್ರ ಸಂದರ್ಶನಕ್ಕೆ ಪರಿಗಣಿಸಲಾಗು ತ್ತದೆ ಎಂದು ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ)
ಪ್ರೊ.ಚಂದ್ರಕಾಂತ್ ಕರಿಗಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರವೇಶ ಪರೀಕ್ಷೆಯಲ್ಲೂ ಬದಲಾವಣೆ ಮಾಡಲಾಗಿದೆ. ಹಿಂದೆ ನಿರ್ದಿಷ್ಟ ವಿಷಯದಲ್ಲಿ ಶೇ 90ರಷ್ಟು ಪ್ರಶ್ನೆಗಳನ್ನು ಹಾಗೂ ಸಂಶೋಧನೆಗೆ ಸಂಬಂಧಿಸಿದ ಶೇ 10ರಷ್ಟು ಪ್ರಶ್ನೆ ಗಳನ್ನು ಕೇಳಲಾಗುತ್ತಿತ್ತು. ಆದರೆ, ಈ ಬಾರಿ ಎರಡಕ್ಕೂ ಸಮಾನ ಆದ್ಯತೆ ನೀಡಿ ತಲಾ ಶೇ 50ರಷ್ಟು ಪ್ರಶ್ನೆಗಳನ್ನು ನಿಗದಿಪಡಿಸಲಾಗಿದೆ.

ಯುಜಿಸಿ, ಸಿಎಸ್ಐಆರ್, ಜೆಆರ್ಎಫ್ ಸೇರಿದಂತೆ ವಿವಿಧ ಫೆಲೋಶಿಪ್ ಪಡೆದಿರುವ, ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್ಇಟಿ), ರಾಜ್ಯಮಟ್ಟದ ಅರ್ಹತಾ ಪರೀಕ್ಷೆಯಲ್ಲಿ (ಎಸ್ಎಲ್ಇಟಿ) ಪಾಸಾಗಿರುವ ಅಭ್ಯರ್ಥಿ ಗಳು ಪ್ರವೇಶ ಪರೀಕ್ಷೆ ಬರೆಯುವ ಅಗತ್ಯ ವಿಲ್ಲ. ಅವರು ನೇರವಾಗಿ ಪಿಎಚ್.ಡಿಗೆ
ಪ್ರವೇಶ ಪಡೆಯಬಹುದು. ಇವರಿಗೆ ಶೇ 50ರಷ್ಟು ಸೀಟುಗಳನ್ನು ಮೀಸಲಿಡಲಾಗುತ್ತದೆ.

ಮಾರ್ಚ್ ಕೊನೆಯ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ. ಏಪ್ರಿಲ್ ಅಂತ್ಯಕ್ಕೆ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿ, ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದು ಸಹಾಯಕ ಕುಲಸಚಿವ (ಮೌಲ್ಯಮಾಪನ) ಮಹೇಶ್ ತಿಳಿಸಿದರು.

ಲಭ್ಯ ಸೀಟುಗಳ ಪೈಕಿ 110 ಸೀಟು
ಗಳು ಮ್ಯಾನೇಜ್ಮೆಂಟ್ ರಿಸರ್ಚ್ ಸೆಂಟರ್ಸ್ ಅಡಿ ಲಭ್ಯವಿವೆ. ವಿಶ್ವ ವಿದ್ಯಾಲಯದ ಸಂಯೋಜನೆ ಹೊಂದಿ ರುವ ಐದು ಕಾಲೇಜುಗಳಲ್ಲಿ ಪಿಎಚ್.ಡಿಗೆ ಮಾರ್ಗದರ್ಶನ ಮಾಡಲು ಅರ್ಹತೆ ಹೊಂದಿರುವ ಬೋಧಕರನ್ನು ಗುರುತಿಸಿ ಪಟ್ಟಿ ಮಾಡಲಾಗಿದೆ.

ಪ್ರಾಧ್ಯಾಪಕರು ಎಂಟು ಅಭ್ಯರ್ಥಿ ಗಳಿಗೆ, ಸಹ ಪ್ರಾಧ್ಯಾಪಕರು ಆರು ಅಭ್ಯರ್ಥಿ ಗಳಿಗೆ ಹಾಗೂ ಸಹಾಯಕ ಪ್ರಾಧ್ಯಾಪಕರು ನಾಲ್ಕು ಅಭ್ಯರ್ಥಿಗಳಿಗೆ ಮಾರ್ಗದರ್ಶನ ಮಾಡಬಹುದು. ಜ್ಞಾನಭಾರತಿ ಕ್ಯಾಂಪಸ್ ಮತ್ತು ಐದು ಕಾಲೇಜುಗಳಲ್ಲಿ ಒಟ್ಟಾರೆ 100 ಮಂದಿ ಬೋಧಕ ಸಿಬ್ಬಂದಿ ಪಿಎಚ್.ಡಿಗೆ ಮಾರ್ಗದರ್ಶನ ಮಾಡುವ ಅರ್ಹತೆ ಹೊಂದಿದ್ದಾರೆ ಎಂದು ವಿವರಿಸಿದರು.

‘25 ಮಂದಿಗೆ ಅವಕಾಶ ಇಲ್ಲ’

‘ನಿವೃತ್ತಿಗೆ ಮೂರು ವರ್ಷ ಇರುವ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಹಾಗೂ ಸಹಾಯಕ ಪ್ರಾಧ್ಯಾಪಕರಿಗೆ ಪಿಎಚ್.ಡಿ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಲು ಅವಕಾಶ ಇಲ್ಲ. ಹೀಗಾಗಿ ವಿವಿಧ ವಿಭಾಗಗಳ 25 ಮಂದಿ ಬೋಧಕರಿಗೆ ಈ ಬಾರಿ ಮಾರ್ಗದರ್ಶಕರಾಗಲು ಸಾಧ್ಯವಿಲ್ಲದಂತಾಗಿದೆ.

ಪಿಎಚ್.ಡಿ ಮಾಡಲು ರೆಗ್ಯೂಲರ್ ಅಭ್ಯರ್ಥಿಗಳಿಗೆ ಮೂರು ವರ್ಷ ಹಾಗೂ ಸೇವೆಯಲ್ಲಿ ಇರುವ ಅಭ್ಯರ್ಥಿಗಳಿಗೆ ಐದು ವರ್ಷ ನಿಗದಿಪಡಿಸಲಾಗಿದೆ. ಪರಿಸ್ಥಿತಿ ಆಧರಿಸಿ ಇದನ್ನು ವಿಸ್ತರಣೆ ಮಾಡಲು ಅವಕಾಶವಿದೆ. ಮಾರ್ಗದರ್ಶಕರು ಮಧ್ಯದಲ್ಲೇ ನಿವೃತ್ತಿಯಾದರೆ ಅಭ್ಯರ್ಥಿಗಳಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಯುಜಿಸಿ ಈ ತೀರ್ಮಾನ ತೆಗೆದುಕೊಂಡಿದೆ’ ಎಂದು ಕರಿಗಾರ್ ತಿಳಿಸಿದರು

ಹೊಸ ಮಾರ್ಗಸೂಚಿ ಅನ್ವಯ ನಂತರ ಮೊದಲ ಪ್ರವೇಶ

ಈ ಬಾರಿಯಿಂದ ಸಂದರ್ಶನ ಕಡ್ಡಾಯ

ಮೂರು ತಿಂಗಳಲ್ಲಿ ಆಯ್ಕೆ ಪ್ರಕ್ರಿಯೆ ಪೂರ್ಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.