ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಂಕರ, ಬುದ್ಧನ ಚಿಂತನೆಗಳ ಅಧ್ಯಯನ ಅಗತ್ಯ’

ವಿಚಾರ ಸಂಕಿರಣದಲ್ಲಿ ಶತಾವಧಾನಿ ಡಾ.ಆರ್‌.ಗಣೇಶ್ ಅಭಿಮತ
Last Updated 21 ನವೆಂಬರ್ 2019, 2:53 IST
ಅಕ್ಷರ ಗಾತ್ರ

ಬೆಂಗಳೂರು: ‘ಆದಿ ಶಂಕರಾಚಾರ್ಯ ಹಾಗೂ ಭಗವಾನ್ ಗೌತಮ ಬುದ್ಧನ ತತ್ವ ಚಿಂತನೆಗಳು ದೇಶೀಯ ಸಂಸ್ಕೃತಿಯ ಪ್ರಮುಖ ಭಾಗವಾಗಿದ್ದು, ಈ ಬಗ್ಗೆ ಸೂಕ್ತ ಅಧ್ಯಯನ ನಡೆಸಬೇಕು’ ಎಂದುವಿದ್ವಾಂಸ ಶತಾವಧಾನಿ ಡಾ.ಆರ್‌.ಗಣೇಶ್ ಅಭಿಮತ
ವ್ಯಕ್ತಪಡಿಸಿದರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಹಾಗೂ ಪಾಲಿ ಇನ್‍ಸ್ಟಿಟ್ಯೂಟ್‌ ನಗರದಲ್ಲಿ ಬುಧವಾರ ಆಯೋಜಿಸಿದ್ದ ‘ಗೌತಮ ಬುದ್ಧ-
ಆಚಾರ್ಯ ಶಂಕರ ತತ್ವಾಲೋಕ ಸಂಕಥನ' ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

‘ಇಬ್ಬರು ಮಹಾನ್ ಪುರುಷರ ತತ್ವಗಳನ್ನು ಬಿಟ್ಟು, ನಮ್ಮ ಸಂಸ್ಕೃತಿಯನ್ನು ಊಹಿಸಿಕೊಳ್ಳುವುದು ಕಷ್ಟ. ಮಹಾಭಾರತ ಹಾಗೂ ರಾಮಾಯಣವನ್ನು ಬೌದ್ಧರು ಕೂಡಾ ಅಧ್ಯಯನ ಮಾಡಬೇಕು. ಹಾಗೆಯೇ, ಸಂಸ್ಕೃತ ವಿದ್ವಾಂಸರು ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಗ್ರಂಥಗಳನ್ನು ಅಧ್ಯಯನ ಮಾಡಬೇಕು. ತತ್ವ ಚಿಂತನೆಯು ಪಿಎಚ್‍.ಡಿ ಮಾಡಲು ಅಥವಾ ಭಾಷಣ ಮಾಡಲು ಸೀಮಿತವಾಗಬಾರದು. ಈ ಚಿಂತನೆಗಳು ಜೀವನೋತ್ಕರ್ಷಕ್ಕೆ ಅವಕಾಶ ಮಾಡಿಕೊಡಬೇಕು’ ಎಂದರು.

‘ಶಂಕರಾಚಾರ್ಯರು ಹಾಗೂ ಬುದ್ಧನ ಚಿಂತನೆಗಳಲ್ಲಿ ಅಭಿಪ್ರಾಯಗಳ ಭೇದ ಕಾಣಿಸಿಕೊಳ್ಳುತ್ತದೆ. ಕಾಲದಿಂದ ಕಾಲಕ್ಕೆ ಕೆಲವು ತತ್ವಗಳನ್ನು ತಿರುಚಿರುವ ಸಾಧ್ಯತೆಗಳಿವೆ.ಹಾಗೆಂದು ಎರಡೂ ಚಿಂತನೆಗಳಲ್ಲಿ ದೊಡ್ಡ ವ್ಯತ್ಯಾಸ ಇದೆ ಎಂದು ಹೇಳುವುದು ಸರಿಯಲ್ಲ’ ಎಂದು ತಿಳಿಸಿದರು.

ವಿದ್ವಾಂಸೆ ಡಾ.ಎಸ್.ಆರ್.ಲೀಲಾ, ‘ಬೌದ್ಧ ಧರ್ಮ, ಸಾಹಿತ್ಯ ಹಾಗೂ ಕಲೆ ಕುರಿತು ಇನ್ನಷ್ಟು ಅಧ್ಯಯನಗಳು ನಡೆಯಬೇಕಿದೆ. ಈ ನಿಟ್ಟಿನಲ್ಲಿ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಪಾಳಿ ಸಾಹಿತ್ಯ, ಬೌದ್ಧ ಕಲೆ ಮೊದಲಾದ ವಿಷಯಗಳ ಬಗ್ಗೆ ಡಿಪ್ಲೊಮಾ ಕೋರ್ಸ್ ಆರಂಭಿಸಬೇಕು. ಗ್ರೀಕ್, ಲ್ಯಾಟಿನ್ ಭಾಷೆಗಳ ಅಧ್ಯಯನ ನಡೆಯಬೇಕು. ನಗರದಲ್ಲಿ ಅನೇಕ ಸಂಸ್ಕೃತ ಹಾಗೂ ಬೌದ್ಧ ವಿದ್ವಾಂಸರಿದ್ದು, ಅವರ ಮಾರ್ಗದರ್ಶನ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT