ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಐಸಿ ಹಬ್ಬಕ್ಕೆ ನಗರ ಸಜ್ಜು

23ರಂದು ಬೆಂಗಳೂರು ಇಂಟರ್‌ನ್ಯಾಷನಲ್‌ ಸೆಂಟರ್‌ ಆಯೋಜನೆ
Last Updated 21 ಫೆಬ್ರುವರಿ 2020, 23:01 IST
ಅಕ್ಷರ ಗಾತ್ರ

ಬೆಂಗಳೂರು: ಸಮಕಾಲೀನ ವಿಚಾರಗಳ ಕುರಿತ ಸಂವಾದ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲಾ ಪ್ರದರ್ಶನಗಳ ಗುಚ್ಛವನ್ನು ಹೊತ್ತು, ಮಿದುಳಿಗೆ ಮೇವು ಹಾಗೂ ಮನಸ್ಸಿಗೆ ಮುದ ನೀಡಲು‘ಬಿಐಸಿ ಹಬ್ಬ’ ಸಜ್ಜಾಗಿದೆ.

ದೊಮ್ಮಲೂರಿನಲ್ಲಿ ಇರುವ ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್‌ ತನ್ನ ನೂತನ ಕಟ್ಟಡದಲ್ಲಿ ಇದೇ ಭಾನುವಾರ (ಫೆ.23) ಹಮ್ಮಿಕೊಂಡಿರುವ ಬಿಐಸಿ ಹಬ್ಬದಲ್ಲಿ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 7.30ರವರೆಗೆ ವಿಚಾರಗೋಷ್ಠಿಗಳು, ವಸ್ತು ಪ್ರದರ್ಶನ,ಸಮೂಹಗಾನ, ಕಲಾ ಪ್ರದರ್ಶನ, ಚಲನಚಿತ್ರಗಳ ಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಪ್ರವೇಶ ಉಚಿತ.

ಬೆಂಗಳೂರಿನ ಕುರಿತು ಚರ್ಚೆ: ‘ಬೆಂಗಳೂರಿನ ಆವಿಷ್ಕಾರ’ ಕುರಿತು ಮೀರಾ ಅಯ್ಯರ್‌, ಜಾನಕಿ ನಾಯರ್‌, ಹಾಗೂ ಅನೂಪ್‌ ನಾಯ್ಕ್‌, ‘ಬೆಂಗಳೂರು ಅಂದು– ಇಂದು’ ಕುರಿತು ಪ್ರಕಾಶ್‌ ಬೆಳವಾಡಿ, ಕಸದ ಸಮಸ್ಯೆಗಳ ಬಗ್ಗೆ ಅಂಕುರ್‌ ಬಿಸೆನ್‌ ಮತ್ತು ಸಿದ್ಧಾರ್ಥರಾಜ, ‘ಭಾಷೆ ಮತ್ತು ನಗರ’ ಕುರಿತು ಸುಗತ ಶ್ರೀನಿವಾಸರಾಜು, ಸ್ವಾತಿ ಶಿವಾನಂದ ಮತ್ತು ಕಾರ್ತಿಕ್‌ ವೆಂಕಟೇಶ್‌, ‘ಕೆಲಸ– ಮತ್ತು ಕಾರ್ಮಿಕರು’ ಕುರಿತು ಕರೋಲ್‌ ಉಪಾಧ್ಯ ಏಕ್ತಾ ಮಿತ್ತಲ್‌, ‘ಕಾಲ್ಪನಿಕ ಸಾಹಿತ್ಯದಲ್ಲಿ ಬೆಂಗಳೂರಿನ ಪರಿಕಲ್ಪನೆ’ ಬಗ್ಗೆ ಝ್ಯಾಕ್‌ ಒ’ಯಿಯ, ವಿವೇಕ ಶಾನಭಾಗ್‌ ಮತ್ತು ಉಷಾ ಕೆ.ಆರ್‌. ಮಾತನಾಡಲಿದ್ದಾರೆ. ಉಷಾ ರಾವ್‌ ಮತ್ತು ಗೌತಮ್‌ ಸೋಂಟಿ ನಿರ್ದೇಶನದ ‘ಅವರ್‌ ಮೆಟ್ರೊಪೊಲಿಸ್‌’ ಸಾಕ್ಷ್ಯಚಿತ್ರ ಪ್ರದರ್ಶನವಿರಲಿದೆ.

ಬೆಂಗಳೂರಿನ ಆಡಳಿತದ ವಿರೋಧಾಭಾಸಗಳ ಬಗ್ಗೆ ತಾರಾ ಕೃಷ್ಣಸ್ವಾಮಿ, ಮೀರಾ ಕೆ., ರವಿಚಂದರ್‌ ಬೆಳಕು ಚೆಲ್ಲಲಿದ್ದಾರೆ. ‘ಚಹಾದಿಂದ ಉದ್ಯೋಗ ಜನಕರವರೆಗೆ– ಒಂದು ಚರ್ಚೆ’ಯಲ್ಲಿ ಅಶ್ವಿನ್‌ ಚಂದ್ರಶೇಖರ್‌, ಮದನ್‌ ಪದಕಿ ಭಾಗವಹಿಸಲಿದ್ದಾರೆ. ‘ಸರ್ಕಾರಿ ಶಾಲೆಗಳು– ಹೊಸ ದೃಷ್ಟಿಕೋನ’ ಕುರಿತು ಕೆ.ವೈಜಯಂತಿ ಹಾಗೂ ಅನುಪಮಾ ಗೌಡ ಚರ್ಚಿಸಲಿದ್ದಾರೆ.

ವಿ. ವೆಂಕಟರಾಜು,ಆಶಿಷ್‌ ಸೇನ್, ಪಿ.ಸುಧೀರ್ ರಾವ್, ಆಕಾರ್ ಪಟೇಲ್, ಶಿಲೋಕ್ ಮುಕ್ಕಾಟಿ,ಪ್ರಶಾಂತ್ ಶಂಕರನ್, ಶುಭಾ ಪ್ರಿಯಾ,ಮುನಿರಾ ಸೇನ್, ಸಯೀದ್ ಅಖ್ತರ್ ಮಿರ್ಜಾ,ರಿತು ಸರಿನ್ ಮತ್ತು ಟೆನ್ಜಿಂಗ್ ಸೋನಂ, ಖಫೀಲ್ ಜಾಫ್ರಿ,ಖಾಲಿದ್ ಅಹಮದ್,ನತಾಶಾ ಶರ್ಮಾ ಮತ್ತು ಮನುಷ್ ಜಾನ್ ಸೇರಿ ಹಲವು ಗಣ್ಯರು ಹಾಗೂ ಕಲಾವಿದರು ಭಾಗವಹಿಸಲಿದ್ದಾರೆ.

ಥಿಯೇಟರ್ ಲ್ಯಾಬ್ ಯೂಥ್,ಅಟ್ಟಕ್ಕಲರಿ ಸೆಂಟರ್ ಫಾರ್ ಮೂವ್‌ಮೆಂಟ್ ಆರ್ಟ್ಸ್, ಸೌಂಡ್ ಕಲಾ ತಂಡಗಳು ಕಲಾ ಪ್ರದರ್ಶನ ನೀಡಲಿವೆ.

15 ವರ್ಷಗಳಿಂದ ಲಾಭರಹಿತವಾಗಿ ಕಾರ್ಯನಿರ್ವಹಿಸುತ್ತಿರುವ ಬಿಐಸಿ ಇದುವರೆಗೆ 900ಕ್ಕೂ ಹೆಚ್ಚು ಕಾರ್ಯ
ಕ್ರಮಗಳನ್ನು ಏರ್ಪಡಿಸಿದೆ.

2019ರಲ್ಲಿ ಸಂಗೀತ, ನೃತ್ಯ, ವಿಚಾರಸಂಕಿರಣ, ಸಿನಿಮಾ, ಭಾಷಣ ಸೇರಿದಂತೆ ಇಲ್ಲಿ 250 ಕಾರ್ಯುಕ್ರಮಗಳನ್ನು ಏರ್ಪಡಿಸಿತ್ತು. ನಾಲ್ವರು ನೋಬೆಲ್‌ ಪ್ರಶಸ್ತಿ ವಿಜೇತರು ಕಳೆದ ವರ್ಷ ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಚಿಣ್ಣರಿಗಾಗಿ ‘ಮಕ್ಕಳ ಕೂಟ’
ಮೂರರಿಂದ 15 ವರ್ಷಗಳ ಒಳಗಿನ ಮಕ್ಕಳಿಗಾಗಿ ಕ್ವಿಜ್‌, ಒರಿಗಾಮಿ, ಕತೆ ಹೇಳುವ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ. ರಂಗ ಚಟುವಟಿಕೆಯ ಕಮ್ಮಟ, ಸಂವಿಧಾನ ಅರ್ಥೈಸುವಿಕೆ ಕುರಿತ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಸಮಕಾಲೀನ ವಿಚಾರಗಳ ಚರ್ಚೆ
ನೀತಿ ನಿರೂಪಣೆಗಳ ಕುರಿತ ‘ಪಾಲಿಸಿ ಅಡ್ಡಾ’ ಕಾರ್ಯಕ್ರಮದಲ್ಲಿ ಮಾಳವಿಕ ಪ್ರಸಾದ್‌, ಅಶ್ವಿನಿ ಓಬಳೇಶ್‌, ಸುದಿಪ್ತೋ ಮೊಂಡಲ್‌ ಹಾಗೂ ಅಲೋಕ್‌ ಪ್ರಸನ್ನ ‘ಭಾರತೀಯ ನಾಗರಿಕರು ಯಾರು?’ ಎಂಬ ಕುರಿತು ಮಾತನಾಡಲಿದ್ದಾರೆ. ಚೀನಾದ ಅಕ್ಕಿ: ಭಾರತದ ಮೇಲಾಗುವ ಪರಿಣಾಮ ಕುರಿತು ರಾಹುಲ್‌ ಜೇಕಬ್‌, ಅಕ್ಷಯ್‌ ಶಾ ಹಾಗೂ ಮನೋಜ್‌ ಕೇವಲರಮಣಿ ಹಾಗೂ ‘ಖಾಸಗಿತನ ಸತ್ತಿದೆಯೇ?’ ಎಂಬ ಕುರಿತು ರಾಹುಲ್‌ ಮಟ್ಟತ್ತಾನ್‌ ಮತ್ತು ವಿನಯ್‌ ಕೇಸರಿ ಸಂವಾದ ನಡೆಸಲಿದ್ದಾರೆ.

ವಿವರಕ್ಕೆ:bangalore internationalcentre.org

ಸಂಪರ್ಕ: 9886599675

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT