ಭಾನುವಾರ, ಆಗಸ್ಟ್ 25, 2019
27 °C

ರಕ್ತದ ಗುಂಪು ಭಿನ್ನವಾದರೂ ಮೂತ್ರಪಿಂಡ ಕಸಿ ಯಶಸ್ವಿ

Published:
Updated:
Prajavani

ಬೆಂಗಳೂರು: ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ನಗರದ ಸುಮತಿ ಕುಮಾರ್ ಎಂಬುವರಿಗೆ ಯಶವಂತಪುರದ ಕೊಲಂಬಿಯಾ ಏಷ್ಯಾ ರೆಫರಲ್ ಆಸ್ಪತ್ರೆಯು ಭಿನ್ನ ರಕ್ತದ ಗುಂಪಿನ ಎಬಿಒಐ ಮೂತ್ರಪಿಂಡ ಕಸಿಯನ್ನು ಯಶಸ್ವಿಯಾಗಿ ನಡೆಸಿದೆ.

ಸ್ವತಃ ವೈದ್ಯರಾದ ಸುಮತಿ ಮಾರ್ಹೃದ್ರೋಗ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಮಾರ್ಚ್‌ ತಿಂಗಳಲ್ಲಿ ಸಮಸ್ಯೆ ಹೆಚ್ಚಾದ ಕಾರಣ ವೈದ್ಯರು ಮೂತ್ರಪಿಂಡ ಕಸಿ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದರು. ಸಂಬಂಧಿಕರು ಮೂತ್ರಪಿಂಡ ದಾನ ಮಾಡಲು ಮುಂದೆ ಬರಲಿಲ್ಲ. ಕೊನೆಗೆ ಪತ್ನಿಯೇ ಮೂತ್ರಪಿಂಡ ದಾನ ಮಾಡಿದರು.

‘ದಾನಿಗಳು ಹಾಗೂ ಕಸಿ ಮಾಡಿಸಿಕೊಂಡವರು ವಿಭಿನ್ನ ರಕ್ತದ ಗುಂಪುಗಳನ್ನು ಹೊಂದಿದ್ದರಿಂದ ಕಸಿ ಸವಾಲಿನ ಕೆಲಸವಾಗಿತ್ತು’ ಎಂದು ಆಸ್ಪತ್ರೆಯ ವೈದ್ಯ ದೀಪಕ್ ಕುಮಾರ್ ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Post Comments (+)