ಬುಧವಾರ, ನವೆಂಬರ್ 30, 2022
21 °C

ಮೆಟ್ರೊ ವಯಾಡಕ್ಟ್ ಪ್ರವೇಶಿಸದಂತೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೆಟ್ರೊ ರೈಲು ಮಾರ್ಗದ ವಯಾಡಕ್ಟ್‌ ಮೇಲೆ ಹಾದು ಹೋಗಿರುವ 33 ಕೆ.ವಿ ವಿದ್ಯುತ್ ಕೇಬಲ್‌ಗಳು ಮತ್ತು ವಯಾಡಕ್ಟ್‌ ಮೇಲೆ ಹಾಕಿರುವ 750 ವೋಲ್ಟ್‌ ರೈಲುಗಳ ಭಾಗಗಳಿಗೆ ಅ.15ರಿಂದ ಪರೀಕ್ಷಾರ್ಥ ವಿದ್ಯುತ್ ಹರಿಸಲಾಗುವುದು ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ವೈಟ್‌ಫೀಲ್ಡ್, ಚನ್ನಸಂದ್ರ, ಕಾಡುಗೋಡಿ, ಪಟ್ಟಂದೂರು ಅಗ್ರಹಾರ, ಸದೆಮಂಗಲ, ನಲ್ಲೂರುಹಳ್ಳಿ, ಕುಂದಲಹಳ್ಳಿ, ಸೀತಾರಾಮಪಾಳ್ಯ, ಹೂಡಿ ಜಂಕ್ಷನ್, ಗರುಡಾಚಾರಪಾಳ್ಯ, ಮಹದೇವಪುರ ಮಾರ್ಗದಲ್ಲಿ ಕೇಬಲ್‌ಗಳನ್ನು ನೇರವಾಗಿ ಸಂಪರ್ಕಿಸಿದರೆ ಮಾರಣಾಂತಿಕ ಅಪಾಯ ಉಂಟಾಗಬಹುದು. ಆದ್ದರಿಂದ ಅನುಮತಿ ಇಲ್ಲದೆ ಯಾರೂ ವಯಾಡಕ್ಟ್‌ಗೆ ಪ್ರವೇಶ ಮಾಡಬಾರದು ಎಂದು ಬಿಎಂಆರ್‌ಸಿಎಲ್ ಎಚ್ಚರಿಸಿದೆ. ಅನಧಿಕೃತ ಪ್ರವೇಶದಿಂದ ತೊಂದರೆಯಾದರೆ ಬಿಎಂಆರ್‌ಸಿಎಲ್ ಜವಾಬ್ದಾರಿ ಆಗುವುದಿಲ್ಲ ಎಂದು ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು