ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೆಲಮಂಗಲ To ಬಿನ್ನಮಂಗಲ: ಜುಲೈ 1ರಿಂದ ಬಿಎಂಟಿಸಿ ಬಸ್‌ ಕಾರ್ಯಾಚರಣೆ

Published 26 ಜೂನ್ 2024, 16:03 IST
Last Updated 26 ಜೂನ್ 2024, 16:03 IST
ಅಕ್ಷರ ಗಾತ್ರ

ಬೆಂಗಳೂರು: ನೆಲಮಂಗಲದಿಂದ ಹೊರಟು ಬಿನ್ನಮಂಗಲ ಮಾರ್ಗದ ಮೂಲಕ ನೆಲಮಂಗಲಕ್ಕೆ ವಾಪಸ್ಸಾಗುವ ಹೊಸ ಮಾರ್ಗದಲ್ಲಿ ಜುಲೈ 1ರಿಂದ ಬಿಎಂಟಿಸಿ ಬಸ್‌ ಪರಿಚಯಿಸುತ್ತಿದೆ.

ನೆಲಮಂಗಲ ಬಸವನಹಳ್ಳಿ, ಬೊಮ್ಮಶೆಟ್ಟಿಹಳ್ಳಿ ಕ್ರಾಸ್, ಹುಸ್ಕೂರು ಕ್ರಾಸ್, ಹೊನ್ನಸಂದ್ರ ಕ್ರಾಸ್, ನಗರೂರು ಕ್ರಾಸ್, ನಂದರಾಮನ ಪಾಳ್ಯ, ಬಿನ್ನಮಂಗಲ ಮೂಲಕ ನೆಲಮಂಗಲಕ್ಕೆ ಒಂದು ಬಸ್‌ 9 ಟ್ರಿಪ್‌ ನಡೆಸಲಿದೆ. ಇನ್ನೊಂದು ಬಸ್‌ ನೆಲಮಂಗಲದಿಂದ ಬಿನ್ನಮಂಗಲ, ನಂದರಾಮನ ಪಾಳ್ಯ, ನಗರೂರು, ನಗರೂರು ಕ್ರಾಸ್, ಹೊನ್ನಸಂದ್ರ ಕ್ರಾಸ್, ಹುಸ್ಕೂರು ಕ್ರಾಸ್, ಬೊಮ್ಮಶೆಟ್ಟಿಹಳ್ಳಿ ಕ್ರಾಸ್, ಬಸವನಹಳ್ಳಿ ಮೂಲಕ ನೆಲಮಂಗಲಕ್ಕೆ 9 ಟ್ರಿಪ್‌ ನಡೆಸಲಿದೆ.

ಜಾಲಹಳ್ಳಿ ಕ್ರಾಸ್‌ನಿಂದ ನೆಲಮಂಗಲಕ್ಕೆ ಒಂದು ಬಸ್‌ 8 ಟ್ರಿಪ್‌ ಮಾಡಲಿದ್ದು, ಮಾರಿಸನ್ ಫ್ಯಾಕ್ಟರಿ, ಮಾದನಾಯಕನಹಳ್ಳಿ, ಮಾಕಳಿ, ನಗರೂರು ಕ್ರಾಸ್, ನಗರೂರು, ನಂದರಾಮನ ಪಾಳ್ಯ, ಬಿನ್ನಮಂಗಲದ ಮೂಲಕ ನೆಲಮಂಗಲ ತಲುಪಲಿದೆ ಎಂದು ಬಿಎಂಟಿಸಿ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT