ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಡ ಮಂಜೂರಾತಿ ಇನ್ನು ಒಂದೇ ಸೂರಿನಡಿ

Last Updated 29 ಫೆಬ್ರುವರಿ 2020, 13:25 IST
ಅಕ್ಷರ ಗಾತ್ರ

ಬೆಂಗಳೂರು: ಕಟ್ಟಡ ನಿರ್ಮಾಣಕ್ಕೆ ಒಂದೇ ಸೂರಿನಡಿ 45 ದಿನಗಳಲ್ಲಿ ಪರವಾನಗಿ ದೊರಕಿಸುವ ಉದ್ಯಮ ಸ್ನೇಹಿ ಆನ್‌ಲೈನ್ ವ್ಯವಸ್ಥೆಯನ್ನು ಬಿಬಿಎಂಪಿ ಅಳವಡಿಸಿಕೊಂಡಿದೆ.

‌ಈ ಹಿಂದೆ ಕಟ್ಟಡ ಪರವಾನಗಿ ಪಡೆಯಲು ಹಲವು ಇಲಾಖೆಗಳಿಂದ 54 ಅನುಮತಿಗಳನ್ನು ಪಡೆಯಬೇಕಿತ್ತು. ಅದನ್ನು ಈಗ 10ಕ್ಕೆ ಇಳಿಸಲಾಗಿದೆ. ವಿಶ್ವ ಬ್ಯಾಂಕ್‍ನ ಈ ಉದ್ಯಮ ಸ್ನೇಹಿ ಸುಧಾರಣಾ ವ್ಯವಸ್ಥೆಗೆ ಮೇಯರ್ ಎಂ. ಗೌತಮ್‌ಕುಮಾರ್ ಮತ್ತು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ಶುಕ್ರವಾರ ಚಾಲನೆ ನೀಡಿದರು.

ಮುಂಬೈ ಮತ್ತು ದೆಹಲಿಯ ಮಹಾನಗರ ಪಾಲಿಕೆಗಳು ಕಟ್ಟಡ ಪರವಾನಗಿ ನೀಡಲು ಆನ್‌ಲೈನ್ ‌ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ. ಈ ಸಾಲಿಗೆ ಈಗ ಬೆಂಗಳೂರು ಮತ್ತು ಕೋಲ್ಕತ್ತ ನಗರಗಳು ಸೇರ್ಪಡೆಗೊಂಡಿವೆ.

‘ನಕ್ಷೆ ಮಂಜೂರಾತಿ, ಪ್ರಾರಂಭಿಕ ಪ್ರಮಾಣಪತ್ರ, ಸ್ವಾಧೀನಾನುಭವ ಪ್ರಮಾಣಪತ್ರ ಪಡೆಯಲು ಬಿಬಿಎಂಪಿ ಸೇರಿ ಎಲ್ಲಾ ಇಲಾಖೆಗಳಿಗೆ ಆನ್‌ಲೈನ್ ಮೂಲಕ ಒಂದೇ ಅರ್ಜಿ ಸಲ್ಲಿಸಬಹುದಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT