ಗುಂಡಿಕ್ಕಿ ಪತ್ನಿ ಕೊಂದ ಉದ್ಯಮಿ

7

ಗುಂಡಿಕ್ಕಿ ಪತ್ನಿ ಕೊಂದ ಉದ್ಯಮಿ

Published:
Updated:

ಬೆಂಗಳೂರು: ಜಯನಗರ 4ನೇ ಬ್ಲಾಕ್‌ನಲ್ಲಿ ಗುರುವಾರ ರಾತ್ರಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಪತ್ನಿಗೆ ಗುಂಡಿಕ್ಕಿದ್ದಾರೆ.

ಸಹನಾ (42) ಹತ್ಯೆಗೀಡಾದವರು. ಘಟನೆ ಬಳಿಕ ಮೂವರು ಮಕ್ಕಳನ್ನು ಕರೆದುಕೊಂಡು ಪತಿ ಗಣೇಶ್ ಪರಾರಿಯಾಗಿದ್ದಾರೆ.

ದಂಪತಿಗೆ ಇಬ್ಬರು ಮಕ್ಕಳಿದ್ದು, ಕೆಲವು ದಿನಗಳ ಹಿಂದೆ ಒಂದು ಮಗುವನ್ನು ದತ್ತು ಪಡೆದಿದ್ದರು. ಕೌಟುಂಬಿಕ ವಿಷಯವಾಗಿ ದಂಪತಿ ಮಧ್ಯೆ ಮನಸ್ತಾಪವಾಗಿತ್ತು. ಇದೇ ಕಾರಣಕ್ಕೆ
ಅವರಿಬ್ಬರ ನಡುವೆ ಜಗಳವಾಗುತ್ತಿತ್ತು.

ಎಂದಿನಂತೆ ಗುರುವಾರ ರಾತ್ರಿಯೂ ಜಗಳ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.

ಈ ಹಂತದಲ್ಲಿ ಕೆರಳಿದ ಗಣೇಶ್, ಸಹನಾಗೆ ಗುಂಡು ಹಾರಿಸಿ ಕೊಂದು ಪರಾರಿಯಾಗಿದ್ದಾರೆ. ರಾತ್ರಿ 9.30ಕ್ಕೆ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !