ಬುಧವಾರ, ಆಗಸ್ಟ್ 10, 2022
20 °C

ಚಂದ್ರಾ ಬಡಾವಣೆಯ ರೌಡಿಶೀಟರ್ ಎ.ಅಬ್ದುಲ್ಲಾ ಗೂಂಡಾ ಕಾಯ್ದೆಯಡಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದರೋಡೆ, ಸುಲಿಗೆ, ಹಲ್ಲೆ, ಕಳವು, ಮಾರಕಾಸ್ತ್ರಗಳಿಂದ ಜೀವ ಬೆದರಿಕೆ ಸೇರಿದಂತೆ ಹಲವು ಅಪರಾಧಗಳಲ್ಲಿ ನಿರಂತರವಾಗಿ ಸಕ್ರಿಯವಾಗಿದ್ದ ಆರೋಪದಡಿ ಚಂದ್ರಾ ಬಡಾವಣೆಯ ರೌಡಿಶೀಟರ್ ಎ.ಅಬ್ದುಲ್ಲಾನನ್ನು (28) ಗೂಂಡಾ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ.

‘ಚಂದ್ರಾ ಬಡಾವಣೆಯಲ್ಲಿ ವಾಸವಿದ್ದ ಆರೋಪಿ, 2017ರಿಂದ ವಿಜಯನಗರ, ಅನ್ನಪೂರ್ಣೇಶ್ವರಿನಗರ, ಬ್ಯಾಟರಾಯನಪುರ ಹಾಗೂ ಚಂದ್ರಾ ಬಡಾವಣೆಯ ಠಾಣೆಗಳಲ್ಲಿ 11 ಪ್ರಕರಣಗಳಲ್ಲಿ ಭಾಗಿಯಾಗಿದ್ದ. ನ್ಯಾಯಾಲಯದ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ನೀಡಿದ ನಂತರ ಷರತ್ತುಬದ್ಧ ಜಾಮೀನಿನ ಮೇಲೆ ಹೊರ ಬಂದು, ಅಪರಾಧ ಚಟುವಟಿಕೆಗಳಲ್ಲಿ ಮುಂದುವರಿದಿದ್ದ’ ಎಂದು ಪೊಲೀಸರು ತಿಳಿಸಿದರು.

‘ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತಿದ್ದ ಅಬ್ದುಲ್ಲಾನನ್ನು ಬಂಧಿಸಲು ನಗರ ಪೊಲೀಸ್ ಕಮಿಷನರ್‌ಗೆ ವರದಿ ಸಲ್ಲಿಸಲಾಗಿತ್ತು. ಅವರ ಆದೇಶದ ಮೇರೆಗೆ ಗೂಂಡಾ ಕಾಯ್ದೆಯಡಿ ಆರೋಪಿಯನ್ನು ಬಂಧಿಸಿ, ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗಿದೆ’ ಎಂದೂ ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು