ಮಂಗಳವಾರ, ಆಗಸ್ಟ್ 20, 2019
27 °C

‘ಬದಲಾವಣೆಗೆ ತಕ್ಕ ಅಧ್ಯಯನ ಅಗತ್ಯ’

Published:
Updated:
Prajavani

ಕೆಂಗೇರಿ: ‘ಬದಲಾಗುತ್ತಿರುವ ಆದ್ಯತೆ ಹಾಗೂ ಅವಶ್ಯಕತೆಗೆ ಅನುಗುಣವಾಗಿ ಶೈಕ್ಷಣಿಕ ಅಧ್ಯಯನ ನಡೆಯಬೇಕು. ಆಗ ಮಾತ್ರ ಪ್ರಸಕ್ತ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮ ಛಾಪು ಮೂಡಿಸಲು ಸಾಧ್ಯ’ ಎಂದು ತೆಲ್ಸೆಟ್ ಇನ್ನೊವೇಷನ್‌ ಪ್ರೈವೇಟ್‌ ಲಿಮಿಟೆಡ್‌ನ ನಿರ್ದೇಶಕ ಡಾ. ಪ್ರದೀಪ್ ದೇಸಾಯಿ ಹೇಳಿದರು. 

ಕುಂಬಳಗೋಡು ಡಾನ್ ಬಾಸ್ಕೊ ತಾಂತ್ರಿಕ ಕಾಲೇಜಿನ ಆವರಣದಲ್ಲಿ ಪ್ರಥಮ ಬಿ.ಇ. ವಿದ್ಯಾರ್ಥಿಗಳ ತರಗತಿ ಪ್ರಾರಂಭೋತ್ಸವದಲ್ಲಿ ಮಾತನಾಡಿದ ಅವರು, ‘ಶೈಕ್ಷಣಿಕ ಅವಧಿಯಲ್ಲಿ ಏಕಾಗ್ರತೆ ಅತ್ಯಂತ ಅವಶ್ಯಕ’ ಎಂದರು. 

ಕಾಲೇಜಿನ ಪ್ರಾಚಾರ್ಯ ಪ್ರೊ. ಬಿ.ಎಸ್. ಉಮಾಶಂಕರ್‌,  ‘ಗುಣಮಟ್ಟದ ಶಿಕ್ಷಣ ನೀಡಲು ಆಡಳಿತ ಮಂಡಳಿ ಬದ್ಧವಾಗಿದೆ. ವಿದ್ಯಾರ್ಥಿಗಳಿಗೆ ಅಂತರರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಸೌಲಭ್ಯ ಒದಗಿಸಲಾಗುತ್ತಿದೆ’ ಎಂದರು.

Post Comments (+)