ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಫ್‌ಸಿಗೆ ಜಯದ ತವಕ

ಎಎಫ್‌ಸಿ ಕಪ್‌ ಫುಟ್‌ಬಾಲ್‌: ಇಂದು ರೇಡಿಯಂಟ್‌ ವಿರುದ್ಧ ಹೋರಾಟ
Last Updated 24 ಏಪ್ರಿಲ್ 2018, 18:38 IST
ಅಕ್ಷರ ಗಾತ್ರ

ಮಾಲೆ, ಮಾಲ್ಡೀವ್ಸ್‌: ಚೊಚ್ಚಲ ಸೂಪರ್‌ ಕಪ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದು ಬೀಗುತ್ತಿರುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡ ಈಗ ಹೊಸ ಸವಾಲಿಗೆ ಸಜ್ಜಾಗಿದೆ.

ಬುಧವಾರ ನಡೆಯುವ ಎಎಫ್‌ಸಿ ಕಪ್‌ ಫುಟ್‌ಬಾಲ್‌ ಟೂರ್ನಿಯ ‘ಇ’ ಗುಂಪಿನ ಪಂದ್ಯದಲ್ಲಿ ಸುನಿಲ್‌ ಚೆಟ್ರಿ ಸಾರಥ್ಯದ ಬಿಎಫ್‌ಸಿ, ನ್ಯೂ ರೇಡಿಯಂಟ್‌ ಎಸ್‌ಸಿ ವಿರುದ್ಧ ಸೆಣಸಲಿದೆ.

ಬೆಂಗಳೂರಿನ ತಂಡ ಈ ಬಾರಿ ಟೂರ್ನಿಯಲ್ಲಿ ಆಡಿರುವ ಮೂರು ಪಂದ್ಯಗಳಲ್ಲೂ ಗೆದ್ದಿದ್ದು ‘ಇ’ಗುಂಪಿನ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿದೆ. ಈ ತಿಂಗಳ ಆರಂಭದಲ್ಲಿ ಬೆಂಗ ಳೂರಿನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಆಗ ಬಿಎಫ್‌ಸಿ 1–0 ಗೋಲಿನಿಂದ ಗೆದ್ದಿತ್ತು.

ಚೆಟ್ರಿ, ಡೇನಿಯಲ್‌ ಸೆಗೊವಿಯಾ, ಡೇನಿಯಲ್‌ ಲಾಲಿಂಪುಯಿಯಾ, ಉದಾಂತ್‌ ಸಿಂಗ್‌ ಮತ್ತು ಮಿಕು ಮುಂಚೂಣಿ ವಿಭಾಗದ ಶಕ್ತಿಯಾಗಿದ್ದಾರೆ.

ಮಿಡ್‌ಫೀಲ್ಡರ್‌ಗಳಾದ ವಿಕ್ಟರ್‌ ಪೆರೇಜ್‌, ಆ್ಯಂಟೋನಿಯೊ ಡೊವ್ಯಾಲ್‌, ಎರಿಕ್ ಪಾರ್ಟಲು, ಅಲ್ವಿನ್‌ ಜಾರ್ಜ್‌, ದಿಮಾಸ್‌ ಡೆಲ್‌ಗಾಡೊ ಮತ್ತು ಲೆನ್ನಿ ರಾಡ್ರಿಗಸ್‌ ಅವರೂ ಮೋಡಿ ಮಾಡಲು ಕಾತರರಾಗಿದ್ದಾರೆ. ನಿಶು, ಜಾಯನರ್‌ ಲೌರೆನ್ಸೊ, ಜುನಾನ್‌, ಸುಭಾಶಿಶ್‌ ಬೋಸ್‌ ಅವರು ರಕ್ಷಣಾ ವಿಭಾಗದಲ್ಲಿ ತಂಡದ ಆಧಾರ ಸ್ತಂಭಗಳಾಗಿದ್ದಾರೆ. ಜಾನ್‌ ಜಾನ್ಸನ್‌, ರಾಹುಲ್‌ ಭೆಕೆ ಮತ್ತು ಹರ್ಮನ್‌ಜ್ಯೋತ್‌ ಸಿಂಗ್‌ ಖಾಬ್ರಾ ಅವರೂ ಎದುರಾಳಿ ತಂಡದ ರಕ್ಷಣಾ ಕೋಟೆಯನ್ನು ಭೇದಿಸಿ ಗೋಲು ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ.

ಜಯದ ವಿಶ್ವಾಸ: ನ್ಯೂ ರೇಡಿಯಂಟ್‌ ತಂಡ ಕೂಡಾ ಜಯದ ಮಂತ್ರ ಜಪಿಸುತ್ತಿದೆ. ತವರಿನ ಅಭಿಮಾನಿಗಳ ಎದುರು ಆಡಲಿರುವ ತಂಡ ಈ ಪಂದ್ಯದಲ್ಲಿ ಗೆದ್ದು ಹಿಂದಿನ ಸೋಲಿಗೆ ಮುಯ್ಯಿ ತೀರಿಸಿಕೊಳ್ಳುವ ಆಲೋಚನೆ ಹೊಂದಿದೆ.

ಆರಂಭ: ಸಂಜೆ 4.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT