ಶನಿವಾರ, ಆಗಸ್ಟ್ 13, 2022
26 °C

ಚಿತ್ರಕಲಾ ಪರಿಷತ್ತು ಚುನಾವಣೆ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ತಿನ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಗೆ ಭಾನುವಾರ ಚುನಾವಣೆ ನಡೆಯಲಿದೆ. ಅಧ್ಯಕ್ಷ ಸ್ಥಾನಕ್ಕೆ ಇಬ್ಬರ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿದೆ. 

208 ಮಂದಿ ಮತದಾನದ ಅರ್ಹತೆ ಹೊಂದಿದ್ದಾರೆ. ಪರಿಷತ್ತಿನ ಆವರಣದಲ್ಲಿ ಬೆಳಿಗ್ಗೆ 10 ಗಂಟೆ ಯಿಂದ 2 ಗಂಟೆಯವರೆಗೆ ಮತ ದಾನ ನಡೆಯಲಿದೆ. ಸಂಜೆ 4 ಗಂಟೆ ವೇಳೆಗೆ ಫಲಿತಾಂಶ ಘೋಷಣೆ ಯಾಗಲಿದೆ. ಹಾಲಿ ಅಧ್ಯಕ್ಷ ಬಿ.ಎಲ್. ಶಂಕರ್ ಹಾಗೂ ಶಿಕ್ಷಣ ತಜ್ಞ ಪ್ರೊ.ಕೆ.ಇ. ರಾಧಾಕೃಷ್ಣ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಪ್ರೊ.ಕೆ.ಎಸ್. ಅಪ್ಪಾಜಯ್ಯ, ಎಂ.ಎಸ್. ಉಮೇಶ್, ಟಿ. ಪ್ರಭಾಕರ್, ರಮಾಶರ್ಮ ಹಾಗೂ ಎ. ರಾಮಕೃಷ್ಣಪ್ಪ ಅವರು ಸ್ಪರ್ಧಿಸಿ ದ್ದಾರೆ. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಡಾ.ಜಿ. ಲಕ್ಷ್ಮೀಪತಿ ಹಾಗೂ ಎಸ್.ಎನ್. ಶಶಿಧರ್ ಕಣದಲ್ಲಿದ್ದಾರೆ. 

ಟಿ. ಚಂದ್ರಶೇಖರ್ ಮತ್ತು ಬಿ.ಎಲ್. ಶ್ರೀನಿವಾಸ ಅವರು ಸಹಾಯಕ ಕಾರ್ಯದರ್ಶಿ
ಸ್ಥಾನಕ್ಕೆ, ಎಸ್. ರಾಮಸುಬ್ರಮಣಿಯನ್, ಎನ್. ಲಕ್ಷ್ಮೀಪತಿ ಬಾಬು ಅವರು ಖಜಾಂಚಿ ಸ್ಥಾನಕ್ಕೆ, ಅಮೃತ ವಿಮಲನಾಥನ್, ಸಿ.ಪಿ. ಉಷಾರಾಣಿ, ಟಿ.ವಿ. ತಾರಕೇಶ್ವರಿ, ಪಿ. ದಿನೇಶ್ ಮಗರ್, ಆರ್.ಜಿ. ಭಂಡಾರಿ, ಬಿ.ವೈ. ವಿನೋದಾ, ವೇಮಗಲ್ ಡಿ. ನಾರಾಯಣಸ್ವಾಮಿ, ಸುಬ್ರಮಣ್ಯ ಕುಕ್ಕೆ ಹಾಗೂ ಟಿ.ಡಿ. ಸುರೇಶ್ ಅವರು ಕಾರ್ಯಕಾರಿ ಸಮಿತಿ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು