ಶನಿವಾರ, ಜುಲೈ 31, 2021
26 °C

ಸ್ವಾಯತ್ತ ಶಾಸ್ತ್ರೀಯ ಕನ್ನಡ ಸಂಸ್ಥೆ ಸ್ಥಾಪನೆಗೆ ಅನುಮತಿ: ಕೇಂದ್ರಕ್ಕೆ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಾಸ್ತ್ರೀಯ ಕನ್ನಡ ಭಾಷೆಯ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಸುವ ಸಲುವಾಗಿ ಮೈಸೂರಿನಲ್ಲಿ ಸ್ವಾಯತ್ತ ಕೇಂದ್ರೀಯ ಶಾಸ್ತ್ರೀಯ ಕನ್ನಡ ಸಂಸ್ಥೆ (ಸಿಐಸಿಕೆ) ಸ್ಥಾಪನೆಗೆ ಅಗತ್ಯದ ಅನುಮತಿ ದೊರಕಿಸಿಕೊಡಬೇಕು ಎಂದು ಕೋರಿ ಮೈಸೂರಿನ ಕೇಂದ್ರೀಯ ಭಾರತೀಯ ಭಾಷಾ ಸಂಸ್ಥಾನದ (ಸಿಐಐಎಲ್‌) ನಿರ್ದೇಶಕ ಪ್ರೊ. ಡಿ.ಜಿ.ರಾವ್ ಅವರು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.

‘2008ರಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತ ಬಳಿಕ ಶಾಸ್ತ್ರೀಯ ಕನ್ನಡದಲ್ಲಿನ ಅಧ್ಯಯನಕ್ಕೆ ಉತ್ಕೃಷ್ಟತಾ ಕೇಂದ್ರ (ಸಿಇಎಸ್‌ಸಿಕೆ) ಸ್ಥಾಪಿಸಲಾಗಿದೆ. ಇದು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದು, ಇನ್ನಷ್ಟು ಸಂಶೋಧನಾ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಸಿಐಸಿಕೆಯನ್ನು ಸ್ಥಾಪಿಸುವ ಅಗತ್ಯ ಇದೆ.

ಮೈಸೂರು ವಿಶ್ವವಿದ್ಯಾಲಯ ಇದಕ್ಕಾಗಿ 3 ಎಕರೆ ನಿವೇಶನವನ್ನು ನೀಡಲು ಮುಂದೆ ಬಂದಿದೆ.  ಶಾಸ್ತ್ರೀಯ ತಮಿಳು ಅಧ್ಯಯನಕ್ಕೆ ಸ್ವಾಯತ್ತ ಸಂಸ್ಥೆ ಸ್ಥಾಪಿಸಿದ ರೀತಿಯಲ್ಲೇ ಕನ್ನಡದಲ್ಲೂ ಒಂದು ಸ್ವಾಯತ್ತ ಸಂಸ್ಥೆಯ ಅಗತ್ಯ ಇದ್ದು, ಅದಕ್ಕೆ ಸಂಪುಟ ಸಮಿತಿಯಿಂದ ಒಪ್ಪಿಗೆ ದೊರಕಿಸಿಕೊಡಬೇಕು’ ಎಂದು ವಿನಂತಿ ಮಾಡಿದ್ದಾರೆ.

‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ಸುದ್ದಿ ಮತ್ತು ಸಂಪಾದಕೀಯದ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಅವರು ಪ್ರೊ.ಡಿ.ಜಿ.ರಾವ್‌ ಜತೆ ಮಾತನಾಡಿ, ಕೇಂದ್ರಕ್ಕೆ ಪತ್ರ ಬರೆಸುವಂತೆ ತಾಕೀತು ಮಾಡಿದರು ಎಂದು ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು