ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಮಸಾಯಿ ವಿದ್ಯಾಸಂಸ್ಥೆಯ ಘಟಿಕೋತ್ಸವ

Published 20 ಫೆಬ್ರುವರಿ 2024, 16:19 IST
Last Updated 20 ಫೆಬ್ರುವರಿ 2024, 16:19 IST
ಅಕ್ಷರ ಗಾತ್ರ

ಬೆಂಗಳೂರು: ಮಸಾಯಿ ವಿದ್ಯಾಸಂಸ್ಥೆಯ 100ನೇ ಬ್ಯಾಚ್‌ನ ಘಟಿಕೋತ್ಸವದಲ್ಲಿ 800 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

‘ಇಡಿ ಟೆಕ್‌ ವೇದಿಕೆ’ಯು ಇದೇ ಮೊದಲ ಬಾರಿಗೆ ಪ್ರತ್ಯೇಕವಾಗಿ ಘಟಿಕೋತ್ಸವ ಹಮ್ಮಿಕೊಂಡಿತು.

ಮಸಾಯಿ ವಿದ್ಯಾಸಂಸ್ಥೆಯ ಸಂಸ್ಥಾಪಕ ಪ್ರತೀಕ್ ಶುಕ್ಲಾ  ಮಾತನಾಡಿ, ‘ಸಾಂಪ್ರದಾಯಿಕ ಶಿಕ್ಷಣ ಮತ್ತು ನಿರಂತರವಾಗಿ ವಿಕಸನಗೊಳ್ಳುತ್ತಿರುವ ಉದ್ಯಮದ ನಡುವಿನ ಅಂತರ ಕಡಿಮೆಗೊಳಿಸುವುದು ಮಸಾಯಿ ಶಾಲೆಯ ಮುಖ್ಯ ಗುರಿ’ ಎಂದು ತಿಳಿಸಿದರು.

ಮೈಸೂರಿನ ನ್ಯಾಷನಲ್‌  ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್‌ ನಿರ್ದೇಶಕ ಶ್ರೀನಾಥ್ ಬಟ್ನಿ ಮಾತನಾಡಿ, ‘ಪ್ರಾಯೋಗಿಕ ಕೌಶಲಗಳು ಮತ್ತು ಉದ್ಯಮದ ಪ್ರಸ್ತುತತೆಯ ಮೇಲೆ ಗಮನವನ್ನು ಹೊಂದಿರುವ ಮಸಾಯಿ ವಿದ್ಯಾಸಂಸ್ಥೆಯ ನವೀನ ವಿಧಾನವು ಶಿಕ್ಷಣದಲ್ಲಿ ಹೊಸ ಗುಣಮಟ್ಟವನ್ನು ಸೃಷ್ಟಿಸಿದೆ’ ಎಂದು ಶ್ಲಾಘಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT