ಶುಕ್ರವಾರ, ಜೂನ್ 25, 2021
21 °C

ಕೊರೊನಾ ಸೇನಾನಿಗಳಿಗೆ ಹಾಸಿಗೆ ಮೀಸಲಿರಿಸಿ: ಗಿರೀಶ ಮಟ್ಟೆಣ್ಣವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿದ್ದು ಕೆಲಸ ಮಾಡುತ್ತಿರುವ ಸರ್ಕಾರಿ, ಸರ್ಕಾರೇತರ ಹಾಗೂ ಮಾಧ್ಯಮದ ಕೋವಿಡ್‌ ಸೇನಾನಿಗಳಿಗೆ ಆಸ್ಪತ್ರೆಯಲ್ಲು ಹಾಸಿಗೆ ಮೀಸಲಿರಿಸಬೇಕು ಮತ್ತು ತುರ್ತಾಗಿ ಲಸಿಕೆ ವ್ಯವಸ್ಥೆ ಮಾಡಿಸಬೇಕು ಎಂದು ಕೋವಿಡ್‌ ನಾಗರಿಕ ಸೇವಾಕೇಂದ್ರದ ನಿರ್ದೇಶಕ ಗಿರೀಶ ಮಟ್ಟೆಣ್ಣವರ ಸರ್ಕಾರವನ್ನು ಕೋರಿದ್ದಾರೆ.

‘ಕೋವಿಡ್ ವಿರುದ್ಧದ ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿರುವ ಕೊರೊನಾ ಸೇನಾನಿಗಳು ಬಹುಬೇಗ ಸೋಂಕಿಗೆ ತುತ್ತಾಗುತ್ತಿದ್ದಾರೆ. ಅವರ ಆತ್ಮವಿಶ್ವಾಸ ಹೆಚ್ಚಿಸಿ, ಅವರಿಗೆ ಮತ್ತು ಅವರ ಪರಿವಾರದ ಸದಸ್ಯರಿಗೆ ಸುರಕ್ಷತೆ ನೀಡುವುದು ಕೋವಿಡ್ ಕಾರ್ಯಾಚರಣೆಯ ಆದ್ಯ ಕರ್ತವ್ಯ’ ಎಂದೂ ಅವರು ಹೇಳಿದ್ದಾರೆ.

 

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು