ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19 | ವಾರದಲ್ಲಿ 7,821 ಮಂದಿ ಚೇತರಿಕೆ

ನಗರದಲ್ಲಿ ಮತ್ತೆ 1,852 ಮಂದಿಗೆ ಕೋವಿಡ್‌–19 ಸೋಂಕು ದೃಢ
Last Updated 1 ಆಗಸ್ಟ್ 2020, 19:53 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕಿತರ ಜತೆಗೆ ಚೇತರಿಸಿಕೊಳ್ಳುವವರ ಸಂಖ್ಯೆ ಕೂಡ ಏರಿಕೆಯಾಗುತ್ತಿದೆ. ಶುಕ್ರವಾರ ಒಂದೇ ದಿನ 1,683 ಸೇರಿದಂತೆ ವಾರದ ಅವಧಿಯಲ್ಲಿ 7,821 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.

ಹೊಸದಾಗಿ 1,852 ಮಂದಿ ಕೊರೊನಾ ಸೋಂಕಿತರಾಗಿರುವುದು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 57 ಸಾವಿರ ದಾಟಿದೆ.ಸೋಂಕಿತರಲ್ಲಿ ಮತ್ತೆ 27 ಮಂದಿ ಮೃತಪಟ್ಟಿದ್ದು, ಕೋವಿಡ್‌ನಿಂದ ಸಾವಿಗೀಡಾದವರ ಸಂಖ್ಯೆ 1,056ಕ್ಕೆ ಏರಿಕೆಯಾಗಿದೆ. ಶನಿವಾರ ದೃಢಪಟ್ಟ ಮರಣ ಪ್ರಕರಣದಲ್ಲಿ 31 ವರ್ಷದ ಪುರುಷ ಅತಿ ಕಿರಿಯ ವ್ಯಕ್ತಿಯಾಗಿದ್ದರೆ, 94 ವರ್ಷದ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದಾರೆ.

ಹೊಸದಾಗಿ ದೃಢಪಟ್ಟ ಪ್ರಕರಣಗಳಲ್ಲಿ ಪಶ್ಚಿಮ ವಲಯದಲ್ಲಿಯೇ ಅಧಿಕ ಮಂದಿ (379) ಸೋಂಕಿತರಾಗಿದ್ದಾರೆ.ದಕ್ಷಿಣ ವಲಯದಲ್ಲಿ 364, ಬೊಮ್ಮನಹಳ್ಳಿಯಲ್ಲಿ 178, ದಾಸರಹಳ್ಳಿಯಲ್ಲಿ 69, ಮಹದೇವಪುರದಲ್ಲಿ 100, ಆರ್.ಆರ್.ನಗರದಲ್ಲಿ 149, ಪೂರ್ವ ವಲಯದಲ್ಲಿ349 ಹಾಗೂ ಯಲಹಂಕದಲ್ಲಿ 78 ಮಂದಿಗೆ ಸೋಂಕು ತಗುಲಿದೆ.

37 ಸಾವಿರಕ್ಕೂ ಅಧಿಕ ಸೋಂಕಿತರು ಆಸ್ಪತ್ರೆಗಳು ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದಾರೆ. 338 ರೋಗಿಗಳಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ.ನಗರದ ಜ್ವರ ಚಿಕಿತ್ಸಾಲಯಗಳಲ್ಲಿ ಒಂದೇ ದಿನ 2,494 ಮಂದಿಯನ್ನು ತಪಾಸಣೆ ಮಾಡಲಾಗಿದೆ.

ಕೋವಿಡ್ ಚಿಕಿತ್ಸೆಗೆ 16 ಸರ್ಕಾರಿ ಆಸ್ಪತ್ರೆಗಳಲ್ಲಿ ಗುರುತಿಸಲಾಗಿದ್ದ702 ಹಾಸಿಗೆಗಳಲ್ಲಿ137 ಹಾಸಿಗೆಗಳು ಖಾಲಿಯಿವೆ. ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಸಿದ್ಧಗೊಳಿಸಲಾಗಿದ್ದ4,076 ಹಾಸಿಗೆಗಳಲ್ಲಿ 2,393 ಹಾಸಿಗೆಗಳು ಭರ್ತಿಯಾಗಿವೆ.

ಸ್ತನ್ಯಪಾನ; ಸೋಂಕು ಹರಡುವಿಕೆಗೆ ಪುರಾವೆಯಿಲ್ಲ: ಸ್ತನ್ಯಪಾನದಿಂದ ಶಿಶುವಿಗೆ ಕೊರೊನಾ ಸೋಂಕು ಹರಡಲಿದೆ ಎಂಬುದಕ್ಕೆ ಪುರಾವೆಯಿಲ್ಲ. ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ತಾಯಂದಿರು ನವಜಾತ ಶಿಶುಗಳಿಗೆ ಸ್ತನ್ಯಪಾನ ಮಾಡಿಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

‘ಸ್ತನ್ಯಪಾನ ಬೆಂಬಲಿಸಿ, ಸದೃಢ ಜಗತ್ತು ನಿರ್ಮಿಸಿ’ ಎಂಬ ಘೋಷವಾಕ್ಯದೊಂದಿಗೆ ಶುಕ್ರವಾರದವರೆಗೆ (ಆ.7) ರಾಜ್ಯದಾದ್ಯಂತ ವಿಶ್ವ ಸ್ತನ್ಯ ಸಪ್ತಾಹ ಆಚರಿಸಲಾಗುತ್ತಿದೆ. ಈ ಅವಧಿಯಲ್ಲಿ ಸ್ತನ್ಯಪಾನದ ಮಹತ್ವದ ಬಗ್ಗೆ ಇಲಾಖೆ ಜಾಗೃತಿ ಮೂಡಿಸಲಿದೆ.

ನಗರದ ಕೋವಿಡ್ ಪ್ರಕರಣಗಳ ಅಂಕಿ–ಅಂಶ

ಒಟ್ಟು ಪ್ರಕರಣಗಳು;57,396

ಗುಣಮುಖರಾದವರು;18,579

ಸಕ್ರಿಯ ಪ್ರಕರಣಗಳು;37,760

ಮೃತಪಟ್ಟವರು; 1,056

ಈ ದಿನದ ಏರಿಕೆ;1,852

ಗುಣಮುಖರು;1,683

ಮೃತಪಟ್ಟವರು; 27

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT