ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಭಿವೃದ್ಧಿ ಕಾಣದ ಜಿಲ್ಲೆಗಳ ಏಳಿಗೆಗೆ ಕೋವಿಡ್‌ ದಾರಿ’: ಪ್ರೊ.ಸಡಗೋಪನ್‌ ಅಭಿಮತ

ಕೊರೊನಾ ಕಷ್ಟಗಳನ್ನೇ ಅವಕಾಶಗಳನ್ನಾಗಿ ಪರಿವರ್ತಿಸಿ
Last Updated 7 ಜುಲೈ 2020, 19:36 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್‌ನಿಂದ ಎದುರಾಗಿರುವಕಷ್ಟವನ್ನು ರಾಜ್ಯದ ಇತರ ಜಿಲ್ಲೆಗಳ ಅಭಿವೃದ್ಧಿಗೆ ಒದಗಿದ ಅವಕಾಶ ಎಂದು ಭಾವಿಸಿಕೊಂಡರೆ ತಂತ್ರಜ್ಞಾನವನ್ನು, ಸಂಪನ್ಮೂಲವನ್ನು ಆ ನಿಟ್ಟಿನಲ್ಲಿ ಬಳಸಿ ಅಭಿವೃದ್ಧಿ ಹೊಂದಲು ಸಾಧ್ಯ’ ಎಂದು ನಗರದ ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ (ಐಐಐಟಿ–ಬಿ) ನಿರ್ದೇಶಕ ಪ್ರೊ.ಎಸ್.ಸಡಗೋಪನ್‌ ಹೇಳಿದರು.

‘ಕೋವಿಡ್‌ನಿಂದ ಮನೆಯಿಂದಲೇ ಕೆಲಸದ ಪರಿಕಲ್ಪನೆ ಬಹುತೇಕ ಕಂಪನಿಗಳಲ್ಲಿ ಸಾಮಾನ್ಯವಾಗಿದೆ. ಇಂತಹ ಕೆಲಸ ಬಾಗಲಕೋಟೆಯಿಂದಲೂ ಮಾಡಬಹುದು, ಮಂಡ್ಯದಿಂದಲೂ ಮಾಡಬಹುದು. ಬೆಂಗಳೂರಿನ ದಟ್ಟಣೆ ಕಡಿಮೆಯಾಗುತ್ತದೆ. ಬೆಂಗಳೂರಿಗೆ ಹಾಕುವ ಬಂಡವಾಳ ಜಿಲ್ಲೆಗಳಿಗೆ ಹರಿಯುತ್ತದೆ. ಈ ಅವಕಾಶವನ್ನು ಜಾಣ್ಮೆಯಿಂದ ಬಳಸಿಕೊಂಡರೆ ನಾಡಿನ ಸರ್ವಾಂಗೀಣ ಅಭಿವೃದ್ಧಿ ನಿಶ್ಚಿತ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಭಾನುವಾರ ಸಂಸ್ಥೆಯ 20ನೇ ಘಟಿಕೋತ್ಸವದ ಹಿನ್ನೆಲೆಯಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡರು. ಇದುವರೆಗೆ ಪದವೀಧರರಾದ ಈ ಸಂಸ್ಥೆಯ ಎಲ್ಲ 3,289 ಮಂದಿಗೂ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ದೊರೆತಿದೆ. ಕೆಲವರು ಯಶಸ್ವಿ ಉದ್ಯಮಿಗಳಾಗಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT