ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಕೋವಿಡ್‌ ಪತ್ತೆ ದರ ಶೇ 15ಕ್ಕೆ ಏರಿಕೆ

ಬಿಬಿಎಂಪಿ: ದಿನದಲ್ಲಿ 1 ಲಕ್ಷಕ್ಕೂ ಹೆಚ್ಚು ಜನರಿಗೆ ಕೋವಿಡ್ ಪರೀಕ್ಷೆ
Last Updated 12 ಜನವರಿ 2022, 6:35 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೋವಿಡ್‌ ಪತ್ತೆ ಪರೀಕ್ಷೆ ಸಂಖ್ಯೆ 1 ಲಕ್ಷ ದಾಟಿದೆ. ರಾಜ್ಯದ ಒಟ್ಟು ಕೋವಿಡ್‌ ಪ್ರಕರಣಗಳಲ್ಲಿ ಶೇ 75ರಷ್ಟು ನಗರದಲ್ಲೇ ಪತ್ತೆಯಾಗಿವೆ.

ಕೋವಿಡ್‌ ಸೊಂಕು ಪತ್ತೆ ದರವು ನಗರದಲ್ಲಿ ಮಂಗಳವಾರ ಶೇ 17ಕ್ಕೆ ಹೆಚ್ಚಳವಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ ಟ್ವೀಟ್ ಮಾಡಿದ್ದಾರೆ.

ಬಿಬಿಎಂಪಿ ಮಂಗಳವಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ನಗರದಲ್ಲಿ ಸೋಮವಾರ 1,03,753 ಜನರನ್ನು ಪರೀಕ್ಷೆ ಒಳಪಡಿಸಲಾಗಿತ್ತು. ಅವರಲ್ಲಿ 10,800 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಅಂದರೆ ಪರೀಕ್ಷೆಗೊಳಗಾದವರಲ್ಲಿ ಸೋಂಕು ಪತ್ತೆ ದರವು ಶೇ 15ರಷ್ಟು ಇತ್ತು.

ದುಪ್ಪಟ್ಟು ಪರೀಕ್ಷೆ: ಡಿಸೆಂಬರ್‌ ಕೊನೆಯ ವಾರದಲ್ಲಿ ಕೋವಿಡ್ ಪರೀಕ್ಷೆ ಸಂಖ್ಯೆಯನ್ನು 50 ಸಾವಿರ ತನಕ ಹೆಚ್ಚಿಸಲಾಗಿತ್ತು. ಜ.3ರಂದು 72,121ಕ್ಕೆ ಹೆಚ್ಚಳ ಮಾಡಲಾಗಿತ್ತು. 4ರಂದು 78,933, 5ರಂದು 86,710, 6ರಂದು 90,286ಕ್ಕೆ ಹೆಚ್ಚಿಸಲಾಗಿತ್ತು. ಬಳಿಕ ಮೂರು ದಿನ ಪರೀಕ್ಷೆ ಪ್ರಮಾಣವನ್ನು ಕಡಿಮೆ ಬಿಬಿಎಂಪಿ ತುಸು ಕಡಿಮೆ ಮಾಡಿತ್ತು. ಪರೀಕ್ಷೆ ಸಮಖ್ಯೆ ಸೋಮವಾರ 1 ಲಕ್ಷವನ್ನು ದಾಟಿದೆ.

‘ನಗರದಲ್ಲಿ ಲಾಕ್‌ಡೌನ್ ಅಗತ್ಯ ಇದೆಯೋ ಇಲ್ಲವೋ ಎಂಬುದನ್ನು ತಜ್ಞರ ಅಭಿಪ್ರಾಯ ಆಧರಿಸಿ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ಕೋವಿಡ್ ಹರಡುವುದನ್ನು ನಿಯಂತ್ರಿಸುವ, ಲಸಿಕೆ ನೀಡುವ ಮತ್ತು ಪರೀಕ್ಷೆ ಹೆಚ್ಚಿಸುವ ಕೆಲಸವನ್ನು ಪಾಲಿಕೆ ಮಾಡುತ್ತಿದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು.

‘ರೋಗ ಲಕ್ಷಣ ಇದ್ದರೆ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸೋಂಕು ದೃಢಪಟ್ಟರೆ ಟ್ರಯಾಜ್ ಕೇಂದ್ರದಲ್ಲಿ ಮತ್ತೊಮ್ಮೆ ತಪಾಸಣೆಗೆ ಒಳಪಡಿಸಲಾಗುವುದು. ಅಗತ್ಯ ಇದ್ದರೆ ಆಸ್ಪತ್ರೆಗೆ ದಾಖಲಿಸಲಾಗುವುದು. ಟ್ರಯಾಜ್ ಕೇಂದ್ರದಿಂದಲೇ 5 ನಿಮಿಷದಲ್ಲಿ ತಪಾಸಣೆ ನಡಸಿ ನೇರವಾಗಿ ಆಸ್ಪತ್ರೆಗೆ ಕಳುಹಿಸಲಾಗುವುದು. ವಿಳಂಬ ಆಗಿ ಪ್ರಾಣಕ್ಕೆ ತೊಂದರೆ ಆಗಲು ಬಿಡುವುದಿಲ್ಲ’ ಎಂದು ಅವರು ವಿವರಿಸಿದರು.

‘ಟ್ರಯಾಜ್ ಕೇಂದ್ರಕ್ಕೆ ಬಂದವರಲ್ಲಿ ಶೇ 90ರಷ್ಟು ಜನರಿಗೆ ಆಸ್ಪತ್ರೆಯಲ್ಲಿ ದಾಖಲಾಗುವ ಅಗತ್ಯ ಇರುವುದಿಲ್ಲ. ಬಹಳ ಕಡಿಮೆ ಜನರಿಗೆ ಆಮ್ಲಜನಕದ ಅಗತ್ಯ ಕಾಣಿಸುತ್ತಿದೆ. ಎರಡನೇ ಅಲೆಯಲ್ಲಿ ಆದಂತೆ ಆಮ್ಲಜನಕದ ಕೊರತೆ ಎದುರಾಗದು’ ಎಂದು ಸ್ಪಷ್ಟಪಡಿಸಿದರು.

ಮಕ್ಕಳಲ್ಲಿ ಸೋಂಕು ಹೆಚ್ಚಳವಾಗಿಲ್ಲ: ಗೌರವ್ ಗುಪ್ತ

ಮಕ್ಕಳಿಗೆ ಸೋಂಕು ಹೆಚ್ಚಳವಾಗಿದೆ ಎಂಬ ಆತಂಕ ಇಲ್ಲ. ಈ ಹಿಂದಿನಂತೆ ಶೇ10ರಷ್ಟು ಮಕ್ಕಳಲ್ಲಿ ಮಾತ್ರ ಸೋಂಕು ದೃಢಪಟ್ಟಿದೆ ಎಂದು ಗೌರವ್ ಗುಪ್ತ ತಿಳಿಸಿದರು.

‘10 ದಿನಗಳ ಅಂಕಿ–ಅಂಶ ಗಮನಿಸಿದರೆ ಹೆಚ್ಚಳ ಕಾಣಿಸಿಲ್ಲ. ಮಕ್ಕಳ ತಜ್ಞರ ಸಮಿತಿಯೊಂದಿಗೆ ನಿರಂತರ ಸಂಪರ್ಕ ಹೊಂದಿದ್ದೇವೆ. ನಾಗರಿಕರು ಭಯಪಡದೆ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT