ಗುರುವಾರ , ಫೆಬ್ರವರಿ 25, 2021
19 °C

ಬಾರ್‌ನಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಾರ್‌ವೊಂದರಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಸಂಜಯನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇಲ್ಲಿನ ಕಝಿನ್ಸ್ ಹುಕ್ಕಾ ಬಾರ್‌ಗೆ ಕಳೆದ ಶನಿವಾರ (ಜ.16) ಬಂದಿದ್ದ ದೊಮ್ಮಸಂದ್ರ ಹಾಗೂ ಎಂ.ಎಸ್.ರಾಮಯ್ಯ ಬಡಾವಣೆ ಯುವಕರ ಗುಂಪುಗಳ ನಡುವೆ ಮಾರಾಮರಿ ನಡೆದಿದೆ.

ಕ್ಷುಲ್ಲಕ ಕಾರಣಕ್ಕೆ ಗಲಾಟೆ ಶುರುವಾಗಿದ್ದು, ಬಳಿಕೆ ಎರಡೂ ಗುಂಪಿನ ಯುವಕರು ಕೈಕೈ ಮಿಲಾಯಿಸಿದ್ದಾರೆ. ಬಾರ್‌ನಿಂದ ಹೊರಬಂದು ಹೊಡೆದಾಡಿಕೊಂಡಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 

ಎರಡೂ ತಂಡಗಳಲ್ಲಿ ಸುಮಾರು 20 ಮಂದಿ ಯುವಕರಿದ್ದರು. ಒಂದು ತಂಡದಲ್ಲಿ ಯುವತಿಯೂ ಇದ್ದರು. ಅವರು ಗಲಾಟೆ ವೇಳೆ ದಿಕ್ಕು ತೋಚದಂತಾಗಿದ್ದರು. ಈ ಸಂಬಂಧ ಸಂಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು