ಬೆಂಗಳೂರು: ಅನ್ನಪೂರ್ಣೇಶ್ವರಿ ಠಾಣಾ ವ್ಯಾಪ್ತಿಯ ಮನೆಯೊಂದಕ್ಕೆ ನುಗ್ಗಿ, ಮನೆಯವರನ್ನು ಹೆದರಿಸಿ ಚಿನ್ನಾಭರಣ, ನಗದು, ಮೊಬೈಲ್ ದರೋಡೆ ಮಾಡಿದ್ದ 10 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇಟ್ಟಮಡು ನಿವಾಸಿ ನಾಗೇಂದ್ರ (30), ವಿನೋಬಾನಗರದ ಪಾರ್ಥಿಬನ್ (25), ಮೈಸೂರು ರಸ್ತೆಯ ನಯಾಜ್ ಪಾಷಾ (35), ಕೆಂಗೇರಿ ಸೈಯದ್ ಸಿದ್ದಿಕ್ (30), ಶೇಷಾದ್ರಿಪುರದ ಸುರೇಶ (33), ದೇವರಜೀವನಹಳ್ಳಿಯ ನತೀಶ್ (30), ಶಿವಮೊಗ್ಗದ ಹನುಮೇಗೌಡ (28) ಹಾಗೂ ಧರ್ಮರಾಜ (28), ದೊಡ್ಡಮಾವಳ್ಳಿಯ ಇಮ್ರಾನ್ ಪಾಷಾ (32), ಚಿಕ್ಕಲ್ಲಸಂದ್ರದ ಹೇಮಂತ್ (22) ಬಂಧಿತ ಆರೋಪಿಗಳು.

ಅನ್ನಪೂರ್ಣೇಶ್ವರಿ ಠಾಣಾ ವ್ಯಾಪ್ತಿಯ ಮನೆಯೊಂದಕ್ಕೆ ಮಾ.6ರಂದು ನುಗ್ಗಿದ್ದ ಆರೋಪಿಗಳು ಮನೆಯವರನ್ನು ಚಾಕು ತೋರಿಸಿ ಹೆದರಿಸಿದ್ದರು. ಬಳಿಕ ಮನೆಯಲ್ಲಿದ್ದ ಚಿನ್ನಾಭರಣ, ನಗದು ಹಾಗೂ ಮೊಬೈಲ್‌ಗಳನ್ನು ಕದ್ದು ಪರಾರಿಯಾಗಿದ್ದರು.

ಬಂಧಿತರಿಂದ ₹5 ಲಕ್ಷ ಬೆಲೆಬಾಳುವ ಚಿನ್ನದ ಆಭರಣಗಳು, ₹₹1.45 ಲಕ್ಷ ನಗದು, ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಆಟೊ, ಎರಡು ಬೈಕ್ ಜಪ್ತಿ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.