ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಫರ್ನ್‌ಹೌಸ್‌ಗೆ ಪುನಶ್ಚೇತನ ‘ಭಾಗ್ಯ’

Last Updated 27 ಜೂನ್ 2018, 20:05 IST
ಅಕ್ಷರ ಗಾತ್ರ

ಬೆಂಗಳೂರು: ಹಲವು ದಶಕಗಳಿಂದ ಬಿಸಿಲು–ಮಳೆಗೆ ಮೈಯೊಡ್ಡಿ ಶಿಥಿಲಾವಸ್ಥೆ ತಲುಪಿರುವ ಕಬ್ಬನ್ಪಾರ್ಕ್‌ನ ಫರ್ನ್‌ಹೌಸ್‌ಗಳು ಸದ್ಯದಲ್ಲೇ ಹೊಸರೂಪ ತಾಳಲಿವೆ.

ತೋಟಗಾರಿಕಾ ಇಲಾಖೆ ₹17 ಲಕ್ಷ ವೆಚ್ಚದಲ್ಲಿ ನವೀಕರಿಸುವ ಜವಾಬ್ದಾರಿ ವಹಿಸಿಕೊಂಡಿದೆ. ಕರ್ನಾಟಕ ಗ್ರಾಮೀಣ ಮೂಲಸೌಲಭ್ಯ ಅಭಿವೃದ್ಧಿ ಸಂಸ್ಥೆಯು ಕಾಮಗಾರಿ ನಡೆಸಲಿದೆ. ಕೇಂದ್ರ ಗ್ರಂಥಾಲಯದ ಹತ್ತಿರ ಇರುವ ಫರ್ನ್‌ಹೌಸ್‌ಗೆ ₹9 ಲಕ್ಷ, ವಿಕ್ಟೋರಿಯಾ ಪ್ರತಿಮೆ (ಪ್ರೆಸ್‌ಕ್ಲಬ್‌) ಬಳಿ ಇರುವಫರ್ನ್‌ಹೌಸ್‌ಗೆ ₹8 ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ.

ಸಿಬ್ಬಂದಿ ನೇಮಕ: ‘ಭದ್ರತಾ ಸಿಬ್ಬಂದಿ ನೇಮಕ ಕುರಿತಂತೆ ಸರ್ಕಾರದ ಅಧೀನದಲ್ಲಿ ನೇಮಕಪ್ರಕ್ರಿಯೆ ನಡೆಯುತ್ತಿದೆ. ಆದರೆ ಇನ್ನೂ ಅಂತಿಮವಾಗಿಲ್ಲ’ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಹಾಂತೇಶ ಮುರಗೋಡ ಹೇಳಿದರು.

‘ಕಬ್ಬನ್‌ಪಾರ್ಕ್‌ ಸುತ್ತ ಇರುವ ತಡೆಗೋಡೆ ಅನ್ನು ಎತ್ತರಿಸಬೇಕು. ಹಣ ವ್ಯರ್ಥಮಾಡದೆ ಅಭಿವೃದ್ಧಿಗಾಗಿ ಹಣ ಬಳಕೆಯಾಗಬೇಕು’ಎಂದುನಡಿಗೆದಾರರ ಸಂಘದ ಅಧ್ಯಕ್ಷ ಉಮೇಶ್‌ ಹೇಳಿದರು.

ಸಿ.ಸಿ ಕ್ಯಾಮೆರಾ ಕಣ್ಗಾವಲು

ಕಬ್ಬನ್‌ ಉದ್ಯಾನದಲ್ಲಿ ಭದ್ರತೆಯ ಕೊರತೆ ಇದ್ದಿದ್ದರಿಂದ ಇನ್ನು ಮುಂದೆ 100 ಸಿಸಿ ಕ್ಯಾಮೆರಾಗಳು ಕಣ್ಗಾವಲು ಇಡಲಿವೆ. ಬೆಸ್ಕಾಂ ಇದನ್ನು
ನಿರ್ವಹಿಸಲಿದೆ

ಬಾಲಭವನ, ಫರ್ನ್‌ಹೌಸ್‌, ಲೋಟಸ್‌ ಪಾರ್ಕ್‌, ಪಾರ್ಕಿಂಗ್‌ ಸ್ಥಳಗಳು ಸೇರಿದಂತೆ ಹಲವೆಡೆ ಕ್ಯಾಮೆರಾ ಅಳವಡಿಕೆ ಕಾರ್ಯ ನಡೆಯುತ್ತಿದೆ. ಫರ್ನ್‌ ಹೌಸ್‌ಗಳ ಮೇಲೆ ಬಳ್ಳಿ ಹಬ್ಬಿಸಿ, ಸುತ್ತಮುತ್ತ ಗಿಡಗಳನ್ನು ಇರಿಸುವ ವ್ಯವಸ್ಥೆ ಮಾಡಲಾಗುತ್ತಿದೆ.

‘ಕಬ್ಬನ್ ಉದ್ಯಾನವನದ ಸನಿಹದಲ್ಲಿ ವಿಧಾನಸೌಧ ಹಾಗೂ ಹೈಕೋರ್ಟ್‌ ಇರುವುದರಿಂದ ಭದ್ರತೆಗೆ ವಿಶೇಷ ಗಮನ ನೀಡಲಿದ್ದೇವೆ. ಈ ಕೆಲಸ ಭರದಿಂದ ನಡೆಯುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

**

‘ಫರ್ನ್‌ಹೌಸ್‌ ಪುನಶ್ಚೇತ ನದಿಂದ ಜನ ವಿಶ್ರಮಿಸಲು ಅನುಕೂಲಕರವಾಗಲಿದೆ. 2 ತಿಂಗಳಲ್ಲಿ ಕಾಮಗಾರಿ ಮುಗಿಯಲಿದೆ
ಮಹಾಂತೇಶ್ ಮುರಗೋಡ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ (ಕಬ್ಬನ್ ಉದ್ಯಾನ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT