ಸೋಮವಾರ, ನವೆಂಬರ್ 18, 2019
25 °C

ಅವಹೇಳನಕಾರಿ ಪೋಸ್ಟ್; ಯುವಕ ವಶಕ್ಕೆ

Published:
Updated:

ಬೆಂಗಳೂರು: ಕಂದಾಯ ಸಚಿವ ಆರ್. ಅಶೋಕ ಹಾಗೂ ಅನರ್ಹ ಶಾಸಕ ಮುನಿರತ್ನ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಪ್ರಕಟಿಸಿದ್ದ ಆರೋಪದಡಿ ಚಂದನ್ ಎಂಬಾತನನ್ನು ಸೈಬರ್‌ ಕ್ರೈಂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಕಾನೂನು ವಿದ್ಯಾರ್ಥಿ ಆಗಿರುವ ಚಂದನ್ ಫೇಸ್‌ಬುಕ್‌ನಲ್ಲಿರುವ ತನ್ನ ಖಾತೆಯಲ್ಲಿ ಆಗಸ್ಟ್ 28ರಂದು ಪೋಸ್ಟ್ ಪ್ರಕಟಿಸಿದ್ದ. ಆ ಸಂಬಂಧ ಬಿಜೆಪಿ ಮುಖಂಡರೊಬ್ಬರು ದೂರು ನೀಡಿದ್ದರು. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. 

ಪ್ರತಿಕ್ರಿಯಿಸಿ (+)