ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಬಿಐ ಪ್ರತಿನಿಧಿಗಳ ಸೋಗಿನಲ್ಲಿ ₹1.95 ಲಕ್ಷ ವಂಚನೆ

ಕ್ರೆಡಿಟ್‌ ಕಾರ್ಡ್‌ನಿಂದ ಹಣ ದೋಚಿದ ಆರೋಪಿ
Last Updated 4 ಜುಲೈ 2018, 20:14 IST
ಅಕ್ಷರ ಗಾತ್ರ

ಬೆಂಗಳೂರು: ಸ್ಟೇಟ್‌ ಬ್ಯಾಂಕ್ ಆಫ್‌ ಇಂಡಿಯಾ (ಎಸ್‌ಬಿಐ)ಪ್ರತಿನಿಧಿಯ ಸೋಗಿನಲ್ಲಿಬಿ.ಎಸ್. ಅಂತೋಣಿ ಎಂಬುವರ ಕ್ರೆಡಿಟ್‌ ಕಾರ್ಡ್‌ನಿಂದ ₹1.95 ಲಕ್ಷ ಪಡೆದು ವಂಚಿಸಲಾಗಿದೆ. ಈ ಸಂಬಂಧ ತಿಪ್ಪಸಂದ್ರದ ನಿವಾಸಿ ಅಂತೋಣಿ ನಗರದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

‘ಎಸ್‌ಬಿಐ ಕೆಲವು ತಿಂಗಳ ಹಿಂದಷ್ಟೇ ಕ್ರೆಡಿಟ್‌ ಕಾರ್ಡ್‌ ನೀಡಿತ್ತು. ಅದನ್ನು ನಾನು ಹೆಚ್ಚು ಬಳಸುತ್ತಿರಲಿಲ್ಲ. ಹೀಗಾಗಿ, ಕಾರ್ಡ್‌ ರದ್ದು ಮಾಡುವಂತೆ ಕೋರಿ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿದ್ದೆ. ಅದೇ ಕಾರಣಕ್ಕೆ ಬ್ಯಾಂಕ್‌ ಪ್ರತಿನಿಧಿಗಳು ಆಗಾಗ ಕರೆ ಮಾಡಿ ಕಾರ್ಡ್‌ ಬಗ್ಗೆ ಮಾಹಿತಿ ಕೇಳುತ್ತಿದ್ದರು. ಜುಲೈ 2ರಂದು ಕರೆ ಮಾಡಿದ್ದ ವ್ಯಕ್ತಿಯೊಬ್ಬ, ‘ನಾನು ಎಸ್‌ಬಿಐ ಪ್ರತಿನಿಧಿ’ ಎಂದು ಪರಿಚಯಿಸಿಕೊಂಡಿದ್ದ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಿಂದಿಯಲ್ಲಿ ಮಾತನಾಡುತ್ತಿದ್ದ ಆತ, ‘ನಿಮ್ಮ ಕಾರ್ಡ್‌ ರದ್ದು ಮಾಡುತ್ತಿದ್ದೇವೆ. ಅದರ ನಂಬರ್ ಹೇಳಿ’ ಎಂದಿದ್ದ. ಅದನ್ನು ನಂಬಿ ನಂಬರ್ ತಿಳಿಸಿದ್ದೆ. ‘ನಿಮ್ಮ ಮೊಬೈಲ್‌ಗೆ ಬಂದಿರುವ ಒಟಿಪಿ (ಒನ್‌ ಟೈಂ ಪಾಸ್‌ವರ್ಡ್‌) ಹೇಳಿ’ ಎಂದ. ಅದನ್ನೂ ಹೇಳಿದ್ದೆ. ಆನಂತರ ಆರೋಪಿ, ನನ್ನ ಕಾರ್ಡ್‌ ಬಳಸಿ ಹಂತ ಹಂತವಾಗಿ ಫ್ಲಿಪ್‌ಕಾರ್ಟ್‌ ಜಾಲತಾಣದಲ್ಲಿ ₹1.95 ಲಕ್ಷ ಮೌಲ್ಯದ ವಸ್ತು ಖರೀದಿಸಿದ್ದಾನೆ’ ಎಂದು ಅವರು ಹೇಳಿದರು.

‘ಫ್ಲಿಪ್‌ಕಾರ್ಟ್‌ ಜಾಲತಾಣ ಕಚೇರಿಗೂ ಇ–ಮೇಲ್‌ ಕಳುಹಿಸಿದ್ದೇನೆ. ಸದ್ಯಕ್ಕೆ ಯಾವುದೇ ಸ್ಪಂದನೆ ಸಿಕ್ಕಿಲ್ಲ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT