₹ 7.5 ಕೋಟಿ ವಂಚನೆ

7
ಐಐಟಿ ಪದವೀಧರ ಸೆರೆ

₹ 7.5 ಕೋಟಿ ವಂಚನೆ

Published:
Updated:

ಬೆಂಗಳೂರು: ಸಾಫ್ಟ್‌ವೇರ್‌ ಖರೀದಿಸಿರುವುದಾಗಿ ಸುಳ್ಳು ಲೆಕ್ಕ ತೋರಿಸಿ ‘ಇಕ್ರಾ ಎಜುಕೇಷನ್’ ಸಂಸ್ಥೆಯಿಂದ ₹ 7.5 ಕೋಟಿ ಪಡೆದು ವಂಚಿಸಿದ ಆರೋಪದಡಿ ಐಐಟಿ ಪದವೀಧರ ಅಭಿಲಾಷ್ ರಾವ್ ಮಾಗಣ್ಣ ಎಂಬಾತನನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಅಭಿಲಾಷ್‌, ಬಿಇಎಲ್‌ ಲೇಔಟ್‌ನ ಭಾರತ್‌ನಗರ ನಿವಾಸಿ. ಆತನಿಂದ 12 ಲ್ಯಾಪ್‌ಟಾಪ್, ಏಳು ಡೆಬಿಟ್ ಕಾರ್ಡ್‌ಗಳು ಹಾಗೂ ಎರಡು ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ.  ಸೈನಾ ಅವರ ಪುತ್ರ ನಬೀಲ್ ಲಾಹೀರ್ ಹಾಗೂ ಆರೋಪಿ ಅಭಿಲಾಷ್, ಚೆನ್ನೈನ ಐಐಟಿಯಲ್ಲಿ ಸಹಪಾಠಿಗಳಾಗಿದ್ದರು.

ಶಿಕ್ಷಣ ಮುಗಿದ ಬಳಿಕ ನಬೀಲ್, ತಮ್ಮ ಒಡೆತನದ ಸಂಸ್ಥೆಯಲ್ಲೇ ಗೆಳೆಯನಿಗೂ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಹುದ್ದೆ ಕೊಡಿಸಿದ್ದರು. ಆರು ತಿಂಗಳಲ್ಲೇ ಬಡ್ತಿಯನ್ನೂ ನೀಡಿದ್ದರು. ಆದರೆ, ವಿವಿಧ ಕಂಪನಿಗಳಿಂದ ತಮ್ಮ ಸಂಸ್ಥೆಗೆ ಬೇಕಾಗಿದ್ದ ಸಾಫ್ಟ್‌ವೇರ್‌ಗಳನ್ನು ಖರೀದಿ ಮಾಡಿರುವುದಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆತ, ಅದನ್ನು ಆಡಳಿತ ವಿಭಾಗಕ್ಕೆ ಸಲ್ಲಿಸಿ ಹಣ ಪಡೆದುಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಇದೇ ರೀತಿ 2014ರಿಂದ 2018ರವರೆಗೆ ₹ 7.5 ಕೋಟಿಯಷ್ಟು ವಂಚನೆ ಮಾಡಿದ್ದ ಆರೋಪಿ, ಸಂಸ್ಥೆಯ ಕೆಲ ಮಹತ್ವದ ಸಾಫ್ಟ್‌ವೇರ್‌ಗಳನ್ನೂ ಕಳವು ಮಾಡಿ ಬೇರೆಯವರಿಗೆ ಮಾರಾಟ ಮಾಡಿದ್ದ. ಇತ್ತೀಚೆಗೆ ಲೆಕ್ಕ ಪರಿಶೋಧನೆ ಮಾಡುವಾಗ ವಂಚನೆ ಬಹಿರಂಗವಾಗಿತ್ತು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !