ಸ್ಕೈವಾಕ್ ನಿರ್ಮಾಣಕ್ಕೆ ತರಿಸಿರುವ ಮರಳು ಪಥದ ಮೇಲೆ ಹರಡಿಕೊಂಡಿದೆ
ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಯೋಜನಾಬದ್ಧವಾಗಿ ಪಥ ನಿರ್ಮಾಣ ಮಾಡುತ್ತಿಲ್ಲ. ವಿಧಾನಸೌಧ ಬಳಿ ಕೇವಲ ತೋರಿಕೆಗಾಗಿ ಪಥ ನಿರ್ಮಿಸಲಾಗಿದೆ. ಸೈಕಲ್ ಪಥಗಳನ್ನು ನಿರ್ಮಿಸುವಾಗ ಸರ್ಕಾರವು ಸೈಕಲಿಸ್ಟ್‌ಗಳ ಜತೆಗೆ ಸಭೆ ನಡೆಸಿ ಅವರ ಸಲಹೆಗಳನ್ನು ಪರಿಗಣಿಸಬೇಕು.
– ಸುನೀಲ್ ಕೆ.ಜಿ ಬೈಸಿಕಲ್ ಡೀಲರ್ ಅಸೋಸಿಯೇಷನ್ ಸ್ವಯಂಸೇವಕ
ನಗರದಲ್ಲಿ ಸೈಕಲಿಂಗ್‌ಗೆ ಸೂಕ್ತ ಸೌಲಭ್ಯಗಳು ಇಲ್ಲ. ಹಿಗಾಗಿ ಐಟಿ ಉದ್ಯೋಗಿಗಳು ಸೇರಿದಂತೆ ಬಹಳಷ್ಟು ಸೈಕಲಿಸ್ಟ್‌ಗಳು ಕಾರಿನ ಹಿಂಬದಿಯಲ್ಲಿ ಸೈಕಲ್ ಇರಿಸಿ 50 ರಿಂದ 60 ಕಿ.ಮೀ ದೂರ ಕ್ರಮಿಸಿ ನಗರ ಹೊರವಲಯಗಳಲ್ಲಿ ಸೈಕಲಿಂಗ್ ಮಾಡುವ ಪರಿಸ್ಥಿತಿ ಬಂದಿರುವುದು ದುರಂತ.
– ಸಂದೇಶ್ ಬಿ.ಎನ್ ಫ್ರೀಡಂ ಪೆಡಲ್ ಅಸೋಸಿಯೇಷನ್ ಸ್ಥಾಪಕ
ನಗರದಲ್ಲಿ ಸೈಕಲ್ ಪಥಗಳು ಅಲ್ಲಲ್ಲಿ ಬಿಡಿ ಬಿಡಿಯಾಗಿರುವುದರಿಂದ ದೀರ್ಘ ಸವಾರಿ ಸಾಧ್ಯವಾಗುತ್ತಿಲ್ಲ. ಇವುಗಳ ಜೋಡಣೆ ಮಾಡಿ ಪಥದ ಉದ್ದ ಹೆಚ್ಚಿಸಬೇಕು ಮತ್ತು ಆಯಕಟ್ಟಿನ ಸ್ಥಳಗಳಲ್ಲಿ ಸೈಕಲ್ ನಿಲ್ದಾಣ ನಿರ್ಮಾಣ ಮಾಡಬೇಕು.