ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಗಿ ಬಣವೆಗೆ ಬೆಂಕಿ: ಮಾಕೇನಹಳ್ಳಿ ಗ್ರಾಮದಲ್ಲಿ ಕಿಡಿಗೇಡಿಗಳ ಕೃತ್ಯ

Last Updated 14 ಫೆಬ್ರುವರಿ 2021, 21:52 IST
ಅಕ್ಷರ ಗಾತ್ರ

ದಾಬಸ್ ಪೇಟೆ: ನೆಲಮಂಗಲ ತಾಲ್ಲೂಕು ಮಾಕೇನಹಳ್ಳಿ ಗ್ರಾಮದ ರೈತರಾದ ಪ್ರಕಾಶ್ ಮತ್ತು ನಂಜುಂಡಯ್ಯ ಎಂಬುವವರಿಗೆ ಸೇರಿದ ರಾಗಿ ಬಣವೆಗೆ ಶನಿವಾರ ತಡರಾತ್ರಿ ಕಿಡಿಗೇಡಿಗಳು ಬೆಂಕಿ ಇಟ್ಟ ಪರಿಣಾಮ ರಾಗಿ ಹಾಗೂ ಹುಲ್ಲು ಬೆಂಕಿಗೆಆಹುತಿಯಾಗಿದೆ.

ರಾಗಿ ಇನ್ನೂ ಒಕ್ಕಣೆ ಮಾಡಿರಲಿಲ್ಲ. ಸುಮಾರು ಐವತ್ತು ಮೂಟೆ ರಾಗಿ, ಮೂರ‍್ನಾಲ್ಕು ಟ್ರಾಕ್ಟರ್‌ ಹುಲ್ಲು ಆಗುತ್ತಿತ್ತು. ಎಲ್ಲ ಸಂಪೂರ್ಣ ಸುಟ್ಟು ಕರಕಲಾಗಿದೆ. ಲಕ್ಷಾಂತರ ರೂಪಾಯಿ ನಷ್ಟ ಆಗಿದೆ ಎಂದು ಅಳಲು ತೋಡಿಕೊಂಡರು ಪ್ರಕಾಶ್.

ಮನೆಯ ಪಕ್ಕದಲ್ಲಿಯೇ ಬಣವೆ ಇದೆ. ಮಧ್ಯ ರಾತ್ರಿ ಒಂದು ಗಂಟೆಯ ಸುಮಾರಿಗೆ ಬೆಂಕಿಯಿಟ್ಟಿದ್ದು, ಬೆಂಕಿಯ ಜ್ವಾಲೆ ಹೆಚ್ಚಾದಾಗ ಎಚ್ಚರಿಕೆ ಆಗಿ ಬಂದು ಅಗ್ನಿಶಾಮಕದಳದವರಿಗೆ ಮಾಹಿತಿ ನೀಡಿದೆವು. ಅವರು ಬಂದು ಆರಿಸುವ ವೇಳೆಗೆ ಎಲ್ಲಾ ಸುಟ್ಟು ಹೋಗಿದೆ ಎಂದರು.

ದನಗಳಿಗೆ ಮೇವು ಇಲ್ಲ, ಸಾವಿರಾರು ರೂಪಾಯಿ ಖರ್ಚು ಮಾಡಿ ಬೆವರು ಸುರಿಸಿ ದುಡಿಮೆ ಮಾಡಿದ್ದೆಲ್ಲ ಹಾಳಾಗಿದೆ ಎಂದು ಮತ್ತೊಬ್ಬ ರೈತ ನಂಜುಂಡಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT