ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೇಟಿಂಗ್ ಆ್ಯಪ್ ಸ್ನೇಹಿತನ ಅಪಹರಣ: 8 ಮಂದಿ ಬಂಧನ

Last Updated 28 ಆಗಸ್ಟ್ 2022, 1:11 IST
ಅಕ್ಷರ ಗಾತ್ರ

ಬೆಂಗಳೂರು: ಡೇಟಿಂಗ್ ಆ್ಯಪ್‌ ಮೂಲಕ ಪರಿಚಯವಾಗಿದ್ದ ಸ್ನೇಹಿತನನ್ನು ಅಪಹರಿಸಿ ಹಲ್ಲೆ ಮಾಡಿದ್ದ ಆರೋಪದಡಿ ಮಹಿಳೆ ಸೇರಿ ಎಂಟು ಮಂದಿಯನ್ನು ಹನುಮಂತನಗರ ಪೊಲೀಸರು ಬಂಧಿಸಿದ್ದಾರೆ.

‘ಸ್ಥಳೀಯ ನಿವಾಸಿಯೊಬ್ಬರನ್ನುಅಪಹರಿಸಿ ಹಲ್ಲೆ ಮಾಡಿದ್ದ ಬಗ್ಗೆ ದೂರು ದಾಖಲಾಗಿತ್ತು. ಆರೋಪಿ ಕ್ಲಾರಾ, ಮಧು ಸೇರಿ 8 ಮಂದಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮದುವೆಯಾಗಿ ಪತಿಯಿಂದ ದೂರವಿದ್ದ ಕ್ಲಾರಾ, ಡೇಟಿಂಗ್ ಆ್ಯಪ್ ಮೂಲಕ ದೂರುದಾರರನ್ನು ಪರಿಚಯ ಮಾಡಿಕೊಂಡಿದ್ದರು. ಇಬ್ಬರ ನಡುವೆ ಸ್ನೇಹವಾಗಿ, ಸಲುಗೆ ಬೆಳೆದಿತ್ತು. ಇಬ್ಬರೂ ಕೆಲ ತಿಂಗಳು ಒಂದೇ ಮನೆಯಲ್ಲಿ ಸಹಜೀವನ ನಡೆಸಿದ್ದರು.’

‘ಕ್ಲಾರಾ ಬೇರೊಬ್ಬ ಪುರುಷನ ಜೊತೆ ಸಲುಗೆ ಹೊಂದಿರುವ ಬಗ್ಗೆ ದೂರುದಾರರಿಗೆ ಅನುಮಾನ ಬಂದಿತ್ತು. ಇದೇವಿಚಾರವಾಗಿ ಇಬ್ಬರ ನಡುವೆ ಗಲಾಟೆ ಆಗಿತ್ತು. ನಂತರ, ಇಬ್ಬರೂ ಪ್ರತ್ಯೇಕವಾಗಿ ವಾಸವಿದ್ದರು. ಮೋಸ ಮಾಡಿದನೆಂದು ತಿಳಿದ ಮಹಿಳೆ, ಮಾತನಾಡಬೇಕೆಂದು ಹೇಳಿ ದೂರುದಾರರನ್ನು ತನ್ನ ಬಳಿ ಕರೆಸಿಕೊಂಡು ಅಪಹರಿಸಿದ್ದರು. ಇತರೆ ಆರೋಪಿಗಳ ಜೊತೆ ಸೇರಿ ಹಲ್ಲೆ ಮಾಡಿದ್ದರು’ ಎಂದೂ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT