ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೇಟಿಂಗ್ ‘ಆ್ಯಪ್’ನಲ್ಲಿ ಪರಿಚಯ: ಯುವಕನಿಗೆ ಮಹಿಳೆಯಿಂದ ಲೈಂಗಿಕ ಕಿರುಕುಳ

Published 17 ಜನವರಿ 2024, 22:42 IST
Last Updated 17 ಜನವರಿ 2024, 22:42 IST
ಅಕ್ಷರ ಗಾತ್ರ

ಬೆಂಗಳೂರು: ‘ಆನ್‌ಲೈನ್ ಡೇಟಿಂಗ್’ ಆ್ಯಪ್ ಮೂಲಕ ಪರಿಚಯವಾದ ಯುವಕನಿಗೆ ಮಹಿಳೆಯೊಬ್ಬರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ, ಬಾಲಿವುಡ್ ನಿರ್ದೇಶಕಿ ದೀಪಿಕಾ ನಾರಾಯಣ ಭಾರದ್ವಾಜ್ ಅವರು ‘ಎಕ್ಸ್‌’ ಖಾತೆಯಲ್ಲಿ ಬರಹ ಪ್ರಕಟಿಸಿ, ಅದನ್ನು ನಗರ ಪೊಲೀಸ್‌ ಕಮಿಷನರ್‌ಗೆ ಟ್ಯಾಗ್ ಮಾಡಿದ್ದಾರೆ. ಮಹಿಳೆ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇದಕ್ಕೆ ನಗರ ಪೊಲೀಸರು ಪ್ರತಿಕ್ರಿಯಿಸಿ, ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿ. ಜತೆಗೆ ತಮ್ಮ ಮೊಬೈಲ್ ನಂಬರ್ ನೀಡುವಂತೆ ಸೂಚಿಸಿದ್ದಾರೆ.

‘ಡೇಟಿಂಗ್ ಆ್ಯಪ್‌ನಲ್ಲಿ ಯುವಕನಿಗೆ ಪರಿಚಯವಾದ ಮಹಿಳೆ ಒಮ್ಮೆ ಭೇಟಿಯಾಗಿದ್ದಳು. ಕೆಲವು ದಿನಗಳ ಬಳಿಕ ಮಹಿಳೆ ಯುವಕನಿಗೆ ಹಣ ಕೇಳಲು ಆರಂಭಿಸಿದ್ದಳು. ಆಗ ಯುವಕ ಹಣ ನೀಡಲು ನಿರಾಕರಿಸಿದ್ದ. ಅದಾದ ಮೇಲೆ ಮಹಿಳೆ ಯುವಕನಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದಳು. ಬೆದರಿಕೆ ಹಾಕಿದ್ದಳು’ ಎಂದು ಎಕ್ಸ್‌ನಲ್ಲಿ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT