ಬುಧವಾರ, ಆಗಸ್ಟ್ 21, 2019
22 °C

ಆಸ್ಪತ್ರೆ ಸೇರಿದ ಕೆಲವೇ ನಿಮಿಷದಲ್ಲಿ ಸಾವು: ಆಕ್ರೋಶ

Published:
Updated:
Prajavani

ಕೆಂಗೇರಿ: ಎದೆ ನೋವು ಎಂದು ಸರ್ಕಾರಿ ಆಸ್ಪತ್ರೆಗೆ ದಾಖಲಾದ ವ್ಯಕ್ತಿ ಕೆಲವೇ ನಿಮಿಷಗಳಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಆತನ ಸಂಬಂಧಿಕರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೆಂಗೇರಿ ಬಳಿಯ ವಂಡರ್ ಬ್ಲೂ ಗಾರ್ಮೆಂಟ್ಸ್‌ನಲ್ಲಿ ಟೈಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಾಜಶೇಖರ್(27) ಮೃತಪಟ್ಟವರು.  ಶನಿವಾರ ಗಾರ್ಮೆಂಟ್ಸ್‌ಗೆ ತೆರಳಿದ್ದ ರಾಜಶೇಖರ್, ಕಾರ್ಯನಿರ್ವಹಿಸುವ ವೇಳೆ ಎದೆ ಭಾಗದಲ್ಲಿ ತೀವ್ರ ನೋವು ಕಾಣಿಸಿಕೊಂಡಾಗ, ಗಾರ್ಮೆಂಟ್ಸ್‌ ಸಿಬ್ಬಂದಿ ಕೂಡಲೇ ಅವರನ್ನು ಆಂಬುಲೆನ್ಸ್‌ನಲ್ಲಿ ಕೆಂಗೇರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ದಾಖಲಿಸಿದರು. 

‘ವೈದ್ಯರು ಸೂಕ್ತ ಚಿಕಿತ್ಸೆ ನೀಡದ ಕಾರಣ ರಾಜಶೇಖರ್‌ ಮೃತಪಟ್ಟಿದ್ದಾರೆ’ ಎಂದು ಸಂಬಂಧಿಕರು ದೂರಿದರು. ಈ ವೇಳೆ ಮಾತಿನ ಚಕಮಕಿ ನಡೆಯಿತು.

‘ರೋಗಿಯ ಸ್ಥಿತಿ ಗಮನಿಸಿ, ಎದೆನೋವಿಗೆ ಚಿಕಿತ್ಸೆ ನೀಡಲು ಮುಂದಾಗಿದ್ದೆವು. ಆದರೆ, ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದ ಪರಿಣಾಮ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು’ ಎಂದು ವೈದ್ಯೆ ಡಾ. ಸುಮಾ ತಿಳಿಸಿದರು.

Post Comments (+)