ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿ: ಕಾಳಿಪೂಜೆ

Last Updated 15 ನವೆಂಬರ್ 2020, 20:25 IST
ಅಕ್ಷರ ಗಾತ್ರ

ಯಲಹಂಕ: ಜಕ್ಕೂರು ಗ್ರಾಮದಲ್ಲಿರುವ ಭಾರತ್ ಸೇವಾಶ್ರಮ್ ಸಂಘದ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಕಾಳಿಪೂಜಾ ಸಮಾರಂಭ ಏರ್ಪಡಿಸಲಾಗಿತ್ತು.

ದೇವಿಗೆ ವಿವಿಧ ರೀತಿಯ ಪೂಜಾಕೈಂಕರ್ಯಗಳು, ಆರತಿ, ಹೋಮ-ಹವನ ಮತ್ತಿತರ ಸೇವೆಗಳನ್ನು ನೆರವೇರಿಸಲಾಯಿತು.

ಸಂಘದ ಜಕ್ಕೂರು ಶಾಖೆಯ ಮುಖ್ಯಸ್ಥ ಶಿವಪ್ರೇಮಾನಂದ ಸ್ವಾಮೀಜಿ ಮಾತನಾಡಿ, ’ಕಳೆದ 14 ವರ್ಷಗಳಿಂದ ಕಾಳಿಪೂಜಾ ಸಮಾರಂಭವನ್ನು ಆಯೋಜಿಸಲಾಗುತ್ತಿದ್ದು, ಪ್ರತಿವರ್ಷ ಬೆಂಗಳೂರು ಹಾಗೂ ಇತರೆ ಜಿಲ್ಲೆಗಳಲ್ಲಿ ನೆಲೆಸಿರುವ ಬೆಂಗಾಲಿ ಸಮುದಾಯದ ಸಾವಿರಾರು ಜನರು ಪಾಲ್ಗೊಳ್ಳುತ್ತಿದ್ದರು. ಆದರೆ, ಈ ಸಲ ಕೋವಿಡ್-19ರ ಕಾರಣ ಕಡಿಮೆ ಜನರು ಭಾಗವಹಿಸಿದ್ದು, ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ಸರಳವಾಗಿ ಈ ಕಾರ್ಯಕ್ರಮ ಆಚರಿಸಲಾಗಿದೆ‘ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ 500 ಬಡಜನರಿಗೆ ಟೀ-ಶರ್ಟ್‌, ಪ್ಯಾಂಟ್ ಹಾಗೂ ಬೆಡ್ ಶೀಟ್ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT