ಶುಕ್ರವಾರ, ನವೆಂಬರ್ 22, 2019
23 °C

ದೆಹಲಿ ಪೊಲೀಸರಿಗೆ ಕರ್ನಾಟಕ ಪೊಲೀಸರ ಬೆಂಬಲ

Published:
Updated:
Prajavani

ಬೆಂಗಳೂರು: ‘ಪೊಲೀಸರ ಮೇಲೆ ವಕೀಲರು ಹಲ್ಲೆ ಮಾಡಿದ್ದಾರೆ’ ಎಂದು ಆರೋಪಿಸಿ ದೆಹಲಿಯ ಪೊಲೀಸರು ಇಲಾಖೆಯ ಪ್ರಧಾನ ಕಚೇರಿ ಎದುರು ಪ್ರತಿಭಟನೆ ಆರಂಭಿಸಿದ್ದು, ಕರ್ನಾಟಕದ ಪೊಲೀಸರು ಸಹ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ’ಐ ಸಪೋರ್ಟ್‌ ದೆಹಲಿ ಪೊಲೀಸ್’ ಎಂಬ ಪೋಸ್ಟ್‌ಗಳನ್ನು ಪೊಲೀಸರು ಪ್ರಕಟಿಸಿದ್ದಾರೆ.  ಬೆಂಗಳೂರಿನ ಬಹುತೇಕ ಪೊಲೀಸರು ತಮ್ಮ ವಾಟ್ಸ್‌ಆ್ಯಪ್ ಸಂಖ್ಯೆಯ ಸ್ಟೇಟಸ್‌ನಲ್ಲೂ ‘ಐ ಸಪೋರ್ಟ್ ದೆಹಲಿ ಪೊಲೀಸ್’ ಎಂದು ಲಾಂಛನ ಸಮೇತ ಫೋಟೊ ಹಾಕಿಕೊಂಡಿದ್ದಾರೆ. 

ಪ್ರತಿಕ್ರಿಯಿಸಿ (+)