ರಾಜರಾಜೇಶ್ವರಿನಗರ: ‘ನಟ ರಾಜಕುಮಾರ್ ಅವರ ಹೆಸರನ್ನು ಬಳಸಿ ಭ್ರಷ್ಟರಿಗೆ ಹೋಲಿಕೆ ಮಾಡಿರುವ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಗಡಿಪಾರು ಮಾಡಬೇಕು’ ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ನಾಗರಭಾವಿ ಬಿಡಿಎ ಕಾಂಪ್ಲೆಕ್ಸ್ ಬಳಿ ಪ್ರತಿಭಟನೆ ನಡೆಸಿದರು.

'ಶಾಸಕ ಮುನಿರತ್ನ ಒಬ್ಬ ಭ್ರಷ್ಟಚಾರಿ, ಬೇನಾಮಿ ಹೆಸರಿನಲ್ಲಿ ಗುತ್ತಿಗೆಯಲ್ಲಿ ನೂರಾರು ಕೋಟಿ ರೂಪಾಯಿ ಲೂಟಿ ಮಾಡಿದ್ದಾರೆ. ಒಕ್ಕಲಿಗ, ದಲಿತರ ಹೆಣ್ಣುಮಕ್ಕಳ ಬಗ್ಗೆ ಕೀಳಾಗಿ ಮಾತನಾಡಿ ಜಾತಿನಿಂದನೆ ಮಾಡಿದವರು. ದೇವಸ್ಥಾನದಂಥ ವಿಕಾಸಸೌಧದಲ್ಲಿ ಅತ್ಯಾಚಾರ ಮಾಡಿದವರು ರಾಜಕುಮಾರ್ ಅವರ ಹೆಸರನ್ನು ಬಳಸಿಕೊಂಡಿರವುದು ರಾಜಕುಮಾರ್ ಹೆಸರಿಗೆ ಮಸಿ ಬಳಿಯುವ ಕೆಲಸ. ಕನ್ನಡವಿರೋಧಿ ಕೃತ್ಯ" ಎಂದು ಪ್ರತಿಭಟನಕಾರರು ಆರೋಪಿಸಿದರು.

ಕೆಪಿಸಿಸಿ ಸದಸ್ಯರಾದ ಬೆಟ್ಟಸ್ವಾಮಿಗೌಡ, ಜೈಕುಮಾರ್ ಪಾಲಿಕೆ ಮಾಜಿ ಸದಸ್ಯ ಜಿ. ಮೋಹನ್ ಕುಮಾರ್, ಮುಖಂಡರಾದ ಶೇಖರ್, ಎಚ್.ತುಕಾರಾಂ, ರಾಂಪುರ ನಾಗೇಶ್, ಜೆ.ಮಂಜುನಾಥ್, ಸುಂಕದಕಟ್ಟೆ ನವೀನ್, ಪ್ರವೀಣ್, ಕಮಲ್, ಚೇತನ್, ನೇತ್ರಾ, ಮಾಲ, ಪುಟ್ಟಮ್ಮ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.